ಮತಾಂಧರಿಗೆ ಓಟು ಕೊಡಬೇಕಾ.. ಅಭಿವೃದ್ಧಿ ಮಾಡುವ ಕಾಂಗ್ರೆಸ್‌ಗೆ ಓಟು ಕೊಡಬೇಕಾ… ‌ನೀವೇ ನಿರ್ಧರಿಸಿ : ಬಿ.ಕೆ.ಹರಿಪ್ರಸಾದ್

Karnataka: ನಿಮ್ಮ ಜಿಲ್ಲೆಯ ಭವಿಷ್ಯ, ನಿಮ್ಮ ಕುಟುಂಬದ ಭವಿಷ್ಯ, ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಲಿದೆ. ನೀವು ನಿರ್ಧಾರ ಮಾಡಿ ಮತಾಂಧರಿಗೆ, ಸಂವಿಧಾನವನ್ನ ಬದಲಾಯಿಸುವ ಪಕ್ಷಕ್ಕೆ, ಮೂಢನಂಬಿಕೆ ಬಿತ್ತುವವರಿಗೆ ಓಟು ಕೊಡಬೇಕಾ ಅಭಿವೃದ್ಧಿ ಮಾಡುವ ಕಾಂಗ್ರೆಸ್(BK Hariprasad slams BJP)

ಪಕ್ಷಕ್ಕೆ ಓಟು ಕೊಡಬೇಕಾ ಎಂದು ಯೋಚನೆ ಮಾಡಿ ಎಂದು ಕಾಂಗ್ರೆಸ್‌ನಾಯಕ ಬಿ.ಕೆ.ಹರಿಪ್ರಸಾದ್‌(Hariprasad ) ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಪ್ರಜಾ ಧ್ವನಿ ಯಾತ್ರೆಯ ಮೂಲಕ ಪ್ರತಿ ಜಿಲ್ಲೆಯಲ್ಲಿ ಜನರ ಧ್ವನಿಯನ್ನ ಕೇಳುವಂತಹ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ.

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ(BJP) ಸರ್ಕಾರ ಜನರನ್ನ ನಡೆಸಿಕೊಂಡಿರುವ ರೀತಿಯ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವೇ ಪ್ರಜಾ ಧ್ವನಿ ಯಾತ್ರೆಯ ಉದ್ದೇಶ.

 ಇಂದು ನಾವೆಲ್ಲ ಜಾತ್ಯಾತೀತ, ಧರ್ಮನಿರಪೇಕ್ಷತೆ, ಸಾರ್ವಭೌಮ ಸಮಾಜವಾದಿ, ಲೋಕತಾಂತ್ರಿಕ ಗಣತಂತ್ರದ ಮೌಲ್ಯಗಳನ್ನ ನಮಗೇ ನಾವೇ ಸ್ವೀಕಾರ ಮಾಡಿಕೊಂಡಿದ್ದೇವೆ.

ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ನಂತರ ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ.

ಉತ್ತರ ಕರ್ನಾಟಕದ ಸಂಸದ ಕೇಂದ್ರದ ಮಾಜಿ ಮಂತ್ರಿ ನೇರವಾಗಿ ಹೇಳಿದ್ದಾರೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನ ಬದಲಾವಣೆ ಮಾಡುವುದಕ್ಕೆ ಎಂದು.

ಬಸವಣ್ಣನವರು(Basavanna), ಕುವೆಂಪು(Kuvempu) ಅವರು ಭಾವೈಕ್ಯತೆ, ಸೌಹಾರ್ದತೆಯನ್ನ ಸಾರಿದ ಪವಿತ್ರ ಭೂಮಿ ಇದು.ಇದರ ವಿರುದ್ಧ ಬಿಜೆಪಿಯವರು ನೇರವಾಗಿ ಸಂವಿಧಾನದ ಬುಡಕ್ಕೆ ಕೈ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ, ಕಟ್ಟಡ ಕಾರ್ಮಿಕರಿಗೆ 50,000 ಧನಸಹಾಯ ಘೋಷಣೆ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ

ಅದೇ ರೀತಿ ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಅವರ ಸೂತ್ರಧಾರರು ಮೋಹನ್ ಭಾಗವತರು 2015ರ ಬಿಹಾರ ಚುನಾವಣೆಯಲ್ಲಿ ಮೀಸಲಾತಿಯನ್ನ ತೆಗೆಯಬೇಕೆಂದು ಹೇಳಿಕೆ ನೀಡಿದ್ರು.

ಮೀಸಲಾತಿ ಕೇವಲ ನಿರುದ್ಯೋಗ, ಬಡತನ ನಿರ್ಮೂಲನೆ ಮಾಡುವ ಕಾರ್ಯಕ್ರಮವಲ್ಲ.

ಮೀಸಲಾತಿ ಇರುವುದು ಎಲ್ಲರೂ ಸಮಾನವಾಗಿ ಬಾಳಬೇಕು ಎಂಬ ಆಶಯಕ್ಕಾಗಿ. ತಾರತಮ್ಯ ಇರಬೇಕು, ಬೇಧ ಭಾವ ಇರಬೇಕು, ಅಸಹಿಷ್ಣುತೆ ಇರಬೇಕು ಎಂದು ಬಿಜೆಪಿಯವರು ಸಂವಿಧಾನವನ್ನ ಬದಲಾವಣೆ ಮಾಡಲು ಹೊರಟಿದ್ದಾರೆ.

ಅತ್ಯಂತ ಹಿಂದುಳಿದ ಜಾತಿಯವರಾಗಲಿ, ಪರಿಶಿಷ್ಟ ಜಾತಿಯವರಾಗಲಿ ಇವತ್ತು ಐಎಎಸ್‌(IAS), ಐಪಿಎಸ್(IPS) ದೊಡ್ಡ ದೊಡ್ಡ ಹುದ್ದೆ ಪಡೆದಿರುವುದು ಸಂವಿಧಾನದ ಚೌಕಟ್ಟಿನಲ್ಲಿಯೇ ಹೊರತು, ಯಾರ ಮುಲಾಜಿನಿಂದಲ್ಲ.

ರಾಜ್ಯದ ಖಜಾನೆ ತುಂಬುವವರು ಬಡವರು, ಹಿಂದುಳಿದವರು ತಮ್ಮ ರಕ್ತ, ಬೆವರನ್ನ ಸುರಿಸಿ ಬೆಂಗಳೂರಿನ ಖಜಾನೆ ತುಂಬುತ್ತಿದ್ದಾರೆ.

ಜಿಎಸ್ಟಿ ಬಂದ ಮೇಲೆ ಭಿಕ್ಷುಕನೂ ತೆರಿಗೆ ಕಟ್ಟುತ್ತಿದ್ದಾರೆ. ಈ ಹಣವನ್ನು ಹೇಗೆ ಜನರ ಕಲ್ಯಾಣಕ್ಕಾಗಿ ಯೋಜನೆ ತರಬೇಕು ಎಂಬ ನಿಟ್ಟಿನಲ್ಲಿ ತಾವು ಐದು ವರ್ಷಕ್ಕೊಮ್ಮೆ ಆರಿಸಿ ಕಳಸ್ತೀರಿ.

ತಮ್ಮ ಮಕ್ಕಳ ಭವಿಷ್ಯ ಉಜ್ವಲ ಆಗಿರಬೇಕು ಎಂಬ ಕಾರಣಕ್ಕೆ(BK Hariprasad slams BJP ಜವಾಬ್ದಾರಿಯಿಂದ ಆರಿಸಿ ಕಳ್ಸಿದಿರಿ. ಆದ್ರೆ ಬಿಜೆಪಿ ಪಕ್ಷ ಮಾಡಿರುವುದೇನು ಎಂಬುದನ್ನ ಕೇಳಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಅಧ್ಯಕ್ಷರ ಭಾಷಣ ಕೇಳಿದ್ರೆ ಅವರಿಗೆ ನೀರು, ರಸ್ತೆ, ಚರಂಡಿ ಅಭಿವೃದ್ಧಿ ಬಗ್ಗೆ ಕೇಳಬಾರದಂತೆ. ಲವ್ ಜಿಹಾದ್(Love Jihad), ಘರ್ ವಾಪ್ಸಿ, ಹಲಾಲ್ ಬಗ್ಗೆ ಮಾತಾಡಬೇಕಂತೆ.

ಅದೇ ನಮ್ಮ ಪಕ್ಷದ ಶ್ರೀಮತಿ ಸೋನಿಯಾ ಗಾಂಧಿ(Sonia Gandhi) ಅವರು ಹಾಗೂ ಪ್ರಧಾನಿ ಮನಮೋಹನ್ ಸಿಂಗ್(Manmohan Singh) ಅವರು ಇದ್ದಾಗ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ತಂದು ಉದ್ಯೋಗ ಕೊಟ್ಟಿದ್ದಾರೆ.

ಇದನ್ನೂ ಓದಿ: ತಾರಕಕ್ಕೇರುತ್ತಿದೆ ಸಿದ್ದು-ಸುಧಾಕರ್‌ ಜಟಾಪಟಿ: ನಿಮ್ಮ ಬಳಿ ಏನಾದರೂ ದಾಖಲೆ ಇದ್ರೆ ಕೊಡಿ ಎಂದು ಸುಧಾಕರ್‌ ಸವಾಲು

ಯಾರೂ ಕೂಡ ಹಸಿವಿನಿಂದ ಮಲಗಬಾರದೆಂದು ಆಹಾರ ಸಂರಕ್ಷಣಾ ಕಾಯ್ದೆಯನ್ನ ಜಾರಿ ಮಾಡಿದ್ರು. ಮಹಿಳೆಯರಿಗೆ ಹೆಲ್ತ್ ಮಿಷನ್ ಜಾರಿ ಮಾಡಿದ್ರು, ಪ್ರತಿಯೊಬ್ಬರ ಮಕ್ಕಳು ಶಿಕ್ಷಣ ಕಲಿಯಬೇಕೆಂಬ ಆಶಯದಿಂದ ಸರ್ವ ಶಿಕ್ಷಣ ಅಭಿಯಾನವನ್ನ ಜಾರಿ ಮಾಡಿದ್ರು,

ಆರ್ ಟಿ ಐ ಯನ್ನು(RTI) ಕೂಡ ತಂದಿದ್ದು ಕಾಂಗ್ರೆಸ್ ಸರ್ಕಾರ. ಈ ಯೋಜನೆಗಳು ಕೇವಲ ಕಾರ್ಯಕ್ರಮವಲ್ಲ ಇವೆಲ್ಲವೂ ಕಾನೂನು.

ಪ್ರಧಾನಿ ನರೇಂದ್ರ ಮೋದಿ(Nrendra Modi), ಯಡಿಯೂರಪ್ಪನವರು(Yediyurappa),

ಬೊಮ್ಮಾಯಿಯವರ(Basavaraj Bommai) ಅಧಿಕಾರದಲ್ಲಿ ಬಡವರಿಗೆ ಯಾವ ಕಾರ್ಯಕ್ರಮ ಮಾಡಿದ್ದಾರೆ ಬಹಿರಂಗವಾಗಿ ಹೇಳಲಿ. ಬಡವರ ಮಕ್ಕಳು ಓದುವ ಸ್ಕಾಲರ್ಶಿಪ್ ಕೂಡ ನಿಲ್ಲಿಸಿದ್ದಾರೆ.

ಅದರ ಬದಲಾಗಿ ಬಲಾಢ್ಯರಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ನಮಗೆ ಅಭ್ಯಂತರ ಇಲ್ಲ ಕೊಡಲಿ. ಆದ್ರೆ ರಾಜ್ಯದ ಬೊಕ್ಕಸಕ್ಕೆ ಬಡವರ ಪಾಲಿದೆ ಅವರನ್ನ ಹಕ್ಕನ್ನ ಮೊದಲು ಕೊಡಲಿ ಎಂದು ಹೇಳಿದ್ದಾರೆ.

Exit mobile version