India: ಬ್ಯಾಂಕ್ ಆಫ್ ಬರೋಡಾವೂ (BOB Mahila Samman Scheme) ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿದ್ದು, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಬ್ಯಾಂಕ್ನ ಗ್ರಾಹಕರು ಮತ್ತು ಗ್ರಾಹಕರಲ್ಲದವರು ಕೂಡ ಬ್ಯಾಂಕ್ ಆಫ್ ಬರೋಡಾದಲ್ಲಿ
ತೆರೆಯಬಹುದಾಗಿದ್ದು, ಎಲ್ಲ ಮಹಿಳೆಯರೂ ಅಕೌಂಟ್ (Account) ಓಪನ್ ಮಾಡಲು ಅರ್ಹರಾಗಿದ್ದಾರೆ. ಇನ್ನು ಈ ಖಾತೆಯನ್ನು ಸ್ವಂತ ಹೆಸರಿನಲ್ಲಿ ಅಥವಾ ಅಪ್ರಾಪ್ತ ವಯಸ್ಕ ಬಾಲಕಿಯ
ಪರವಾಗಿ ಪೋಷಕರು ತೆರೆಯಬಹುದಾಗಿದೆ.

ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ ಖುರಾನಾ (Ajay.K.Khurana) ಅವರು ಈ ಯೋಜನೆ ಜಾರಿ ಸಂದರ್ಭದಲ್ಲಿ ಮಾತನಾಡಿದ್ದು, “ಹೂಡಿಕೆ ಮಾಡಲು
ಸ್ತ್ರೀಯರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವುದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಮುಖ್ಯ ಉದ್ದೇಶವಾಗಿದೆ,” ಎಂದಿದ್ದಾರೆ. ಇನ್ನು
ಈ ಯೋಜನೆಯನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ (Bank Of Baroda) ಜಾರಿಗೆ ತಂದಿರುವುದು ನಮಗೆ ಖುಷಿಯ ವಿಷಯ. ಈ ಪ್ರಮಾಣ ಪತ್ರವು ನಮ್ಮ ದೇಶದ ಎಲ್ಲ ಶಾಖೆಗಳಲ್ಲೂ
ಲಭ್ಯವಿದೆ ಎಂದು ಅಜಯ್ ಕೆ ಖುರಾನಾ (BOB Mahila Samman Scheme) ತಿಳಿಸಿದ್ದಾರೆ.
ಮಹಿಳಾ ಸಮ್ಮಾನ್(Mahila Samman) ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ (Bank Of Baroda) ಗ್ರಾಹಕರಾಗಿದ್ದರು ಮತ್ತು ಗ್ರಾಹಕರಿಲ್ಲದವರು
ಸಹ ಖಾತೆಯನ್ನು ತೆರೆಯಬಹುದು. ಎಲ್ಲ ಮಹಿಳೆಯರೂ ಖಾತೆ ತೆರೆಯಲು ಅರ್ಹರಾಗಿದ್ದಾರೆ. ಇದನ್ನು ಸ್ವಂತ ಹೆಸರಿನಲ್ಲಿ ಅಥವಾ ಅಪ್ರಾಪ್ತ ವಯಸ್ಕ ಬಾಲಕಿಯ ಪರವಾಗಿ ಪೋಷಕರು
(ಮಹಿಳೆ ಅಥವಾ ಪುರುಷರು) ತೆರೆಯಬಹುದಾಗಿದೆ.
ಮಹಿಳಾ ಸಮ್ಮಾನ್ ಯೋಜನೆಯ ವಿಶೇಷತೆ ಏನು:
೧. ಮಹಿಳಾ ಸಮ್ಮಾನ್ (Mahila Samman) ಯೋಜನೆಯು 2 ವರ್ಷದ ಠೇವಣಿ ಇದಾಗಿದ್ದು, ಇದು ವರ್ಷಕ್ಕೆ ಶೇ. 7.5 ಬಡ್ಡಿ ನೀಡುತ್ತದೆ. ಗ್ರಾಹಕರಿಗೆ 2 ವರ್ಷದ ನಂತರ ಈ ಹಣವನ್ನು
ಹಿಂದಿರುಗಿಸಲಾಗುತ್ತದೆ.
೨. ಈ ಯೋಜನೆಯ ಅಡಿಯಲ್ಲಿ ಒಬ್ಬ ಖಾತೆದಾರನು ಹಂತ ಹಂತವಾಗಿಯಾಗಲಿ ಅಥವಾ ಒಂದು ಬಾರಿಯಾಗಲಿ, ಒಟ್ಟಾರೆಯಾಗಿ 2 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು.

೩. ಮಹಿಳಾ ಸಮ್ಮಾನ್(Mahila Samman) ಉಳಿತಾಯ ಯೋಜನೆಯಲ್ಲಿ ಕನಿಷ್ಠ ಠೇವಣಿ 1,000 ರೂ. ಆಗಿದ್ದು, ನಂತರ ಇನ್ವೆಸ್ಟ್ಮೆಂಟ್ (Investment) ಹೆಚ್ಚಿಸಬಹುದು.
ಇದನ್ನು ಓದಿ: ಮೋದಿ ಸೋಲಿಸಲು ರಚನೆಯಾಗಿರೋ I.N.D.I.A ಮುಂದಿರೋ ಐದು ಸವಾಲುಗಳು
೪. ಮಹಿಳೆಯರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವ ಉದ್ದೇಶ ಈ ಮಹಿಳಾ ಸಮ್ಮಾನ್ (Mahila Samman) ಉಳಿತಾಯ ಯೋಜನೆಯದಾಗಿದ್ದು, ಹಾಗೂ ‘ಮಹಿಳಾ ಸಮ್ಮಾನ್
ಉಳಿತಾಯ ಯೋಜನೆ’ಗೆ ಯಾವುದೇ ವಯಸ್ಸಿನ ನಿರ್ಬಂಧ ಇಲ್ಲದಿರುವುದು ವಿಶೇಷ.
೫.ಸ್ತ್ರೀಯರು ಇದನ್ನು ತಮ್ಮ ಸ್ವಂತ ಹೆಸರಿನಲ್ಲಿ ಅಥವಾ ಅಪ್ರಾಪ್ತ ವಯಸ್ಕ ಬಾಲಕಿಯ ಪರವಾಗಿ ಪೋಷಕರು (ಮಹಿಳೆ ಅಥವಾ ಪುರುಷರು) ಖಾತೆ ತೆರೆಯಬಹುದಾಗಿದೆ.
ಭಾರತದಲ್ಲಿ ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾವೂ (Bank Of Baroda) ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
(ಎಂಎಸ್ಎಸ್ಸಿ) ಯೋಜನೆಯನ್ನು ಜಾರಿಗೊಳಿಸಿದೆ. ಹೂಡಿಕೆ ಮಾಡಲು ಸ್ತ್ರೀಯರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವುದು ಮಹಿಳಾ ಸಮ್ಮಾನ್
(Mahila Samman) ಉಳಿತಾಯ ಪ್ರಮಾಣಪತ್ರದ ಮುಖ್ಯ ಉದ್ದೇಶವಾಗಿದೆ,” ಎಂದು ಅಜಯ್ ಕೆ ಖುರಾನಾ ತಿಳಿಸಿದ್ದಾರೆ.
ಭವ್ಯಶ್ರೀ ಆರ್.ಜೆ