ಬಾಯ್ಕಾಟ್ ಮಾಲ್ಡೀವ್ಸ್ ಎಫೆಕ್ಟ್ – 5ನೇ ಸ್ಥಾನಕ್ಕೆ ಕುಸಿದ ಭಾರತೀಯ ಪ್ರವಾಸಿಗರ ಸಂಖ್ಯೆ

New Delhi : ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅವಮಾನಿಸಿದ ಕಾರಣಕ್ಕಾಗಿ ದ್ವೀಪರಾಷ್ಟ್ರ ಮಾಲ್ಡೀವ್ಸ್ (Maldives) ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದ ಭಾರತೀಯರು (Indians), ಭಾರೀ ಸಂಖ್ಯೆಯಲ್ಲಿ ಮಾಲ್ಡೀವ್ಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಕಳೆದ ವರ್ಷ ಮಾಲ್ಡೀವ್ಸ್ ಪ್ರವಾಸದಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತೀಯರು ಈಗ 5ನೇ ಸ್ಥಾನಕ್ಕೆ ಕುಸಿದಿದೆ.

ಮಾಲ್ಡೀವ್ಸ್ (Maldivs) ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ (Ministry information) ಪ್ರಕಾರ, ಭಾರತೀಯರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬಾಯ್ಕಾಟ್ ಮಾಲ್ಡೀವ್ಸ್ (Boycott Maldives) ಅಭಿಯಾನದ ನಂತರ ಭಾರತೀಯರು ಮಾಲ್ಡೀವ್ಸ್ನತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ ಮಾಲ್ಡೀವ್ಸ್ ಪ್ರವಾಸೋಧ್ಯಮದ (Maldives Tourism) ಮೇಲೆ ಇದು ಗಂಭೀರ ಪರಿಣಾಮ ಬೀರಿದೆ ಎನ್ನಲಾಗಿದೆ.

  1. ರಷ್ಯಾ (Russia): 18,561 ಪ್ರವಾಸಿಗರ ಆಗಮನ (2023 ರಲ್ಲಿ 2 ನೇ ಸ್ಥಾನ)
  2. ಇಟಲಿ (Italy): 18,111 ಆಗಮನ (2023 ರಲ್ಲಿ 6 ನೇ ಸ್ಥಾನ)
  3. ಚೀನಾ (China) : 16,529 ಆಗಮನ ( 2023 ರಲ್ಲಿ 3 ನೇ ಸ್ಥಾನ)
  4. ಯುಕೆ UK: 14,588 ಆಗಮನ ( 2023 ರಲ್ಲಿ 4 ನೇ ಸ್ಥಾನ)
  5. ಭಾರತ (Bharath) : 13,989 ಆಗಮನ (2023 ರಲ್ಲಿ 1 ನೇ ಸ್ಥಾನ)
  6. ಜರ್ಮನಿ (Germany) : 10,652 ಆಗಮನ (6.1% ಮಾರುಕಟ್ಟೆ ಪಾಲು)
  7. USA: 6,299 ಆಗಮನ ( 2023 ರಲ್ಲಿ 7 ನೇ ಸ್ಥಾನ)
  8. ಫ್ರಾನ್ಸ್ (Francs) : 6,168 ಆಗಮನ (2023 ರಲ್ಲಿ 8 ನೇ ಸ್ಥಾನ)
  9. ಪೋಲೆಂಡ್ (Polland) : 5,109 ಆಗಮನ (2023 ರಲ್ಲಿ 14 ನೇ ಸ್ಥಾನ)
  10. ಸ್ವಿಟ್ಜರ್ಲೆಂಡ್ (Switzerland): 3,330 ಆಗಮನ ( 2023 ರಲ್ಲಿ 10 ನೇ ಸ್ಥಾನ)

ಇನ್ನು ಕಳೆದ ವರ್ಷ ಮಾಲ್ಡೀವ್ಸ್ ಪ್ರವಾಸಿಗರ ಸಂಖ್ಯೆಯಲ್ಲಿ ಭಾರತವು ಅಗ್ರ ಸ್ಥಾನವನ್ನು ಹೊಂದಿತ್ತು. ಮಾಲ್ಡೀವ್ಸ್ನ ಪ್ರವಾಸೋದ್ಯಮ ಮಾರುಕಟ್ಟೆಯ ಸುಮಾರು ಶೇಕಡಾ 11 ರಷ್ಟು ಪಾಲನ್ನು ಭಾರತ ಹೊಂದಿತ್ತು.

Exit mobile version