ಬಿಪಿಎಲ್(BPL) ಕಾರ್ಡ್(Card) ಮಾಡಿಕೊಡಲು ಬಡವರನ್ನು, ರೈತರನ್ನು ಸುತ್ತಾಡಿಸುತ್ತಿದ್ದಾರೆ ಭ್ರಷ್ಟಅಧಿಕಾರಿಗಳು. BPL ಕಾರ್ಡ್‍ಗಾಗಿ ಬಡವರನ್ನುಅಲೆದಾಡಿಸುತ್ತಿದ್ದಾರೆ. ಭ್ರಷ್ಟರ
ಕಚೇರಿಯಿಂದ ಕಚೇರಿಗೆ ಸುತ್ತಿ ಸುಸ್ತಾದ ರೈತರು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿಸಮಸ್ಯೆ
ದೂರು ಕೊಟ್ರೂ ಕಚೇರಿಸುತ್ತೋ ಕಷ್ಟ ಕಡಿಮೆಯಾಗಿಲ್ಲ. BPL ಕಾರ್ಡ್ಗಾಗಿ ಬಡವರನ್ನುಅಲೆದಾಡಿಸುತ್ತಿದ್ದಾರೆ ಭ್ರಷ್ಟರು. ಯಸ್, ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಬಡವರ ಹಾಗೂ ರೈತರ ಗೋಳು.

ತಾಲ್ಲೂಕಿನ ಹಲವು ಬಡ ಜನರು ಪಡಿತರ ಚೀಟಿಗಾಗಿ ಅರ್ಜಿಸಲ್ಲಿಸಿದ್ದಾರೆ. ಆದ್ರೆ ಅಧಿಕಾರಿಗಳು ಪಡಿತರ ಚೀಟಿ ನೀಡುವಲ್ಲಿ ಭಾರೀ ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ ಬಡ ರೈತರು ತಮ್ಮೆಲ್ಲಾ ಕೆಲಸಕಾರ್ಯಗಳನ್ನು ಬಿಟ್ಟು ಪ್ರತಿನಿತ್ಯ ದೂರದೂರದ ಹಳ್ಳಿಗಳಿಂದ ಬಂದು ಕಚೇರಿ ಮುಂಭಾಗ ಕಾದು ಕಾದು ಸುಸ್ತಾಗುತ್ತಿದ್ದಾರೆ. ಇನ್ನು ಈ ತಾಲ್ಲೂಕಿನ ರೈತರ ಗೋಳು ಕೇಳೋದೇ ಬೇಡ. ಜಮೀನಿನ ದಾಖಲೆಗಳಿಗಾಗಿ ರೈತರನ್ನು ನಿತ್ಯ ಸುತ್ತಾಡಿಸುತ್ತಿದ್ದಾರೆ ಅನ್ನೋದು ರೈತರ ದೂರು.
ತಾಲ್ಲೂಕು ಕಚೇರಿಯಲ್ಲಿರುವ ರೆಕಾರ್ಡ್ಕೊಠಡಿಯಲ್ಲಿ ರೈತರು ದಾಖಲಾತಿಗಳನ್ನು ಕೇಳಿದರೆ ಕೊಡಲ್ಲ. ಆದ್ರೆ ಅಲ್ಲಿನ ಸಿಬ್ಬಂದಿ, ದಲ್ಲಾಳಿಗಳಿಗೆ ಕೂಡಲೇ ದಾಖಲಾತಿಗಳು ನೀಡುತ್ತಿದ್ದಾರೆ ಅನ್ನೋದು ರೈತರ ದೂರು. ಅಲ್ಲದೆ ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಕೆಲ ಸಿಬ್ಬಂದಿಗಳು ಪ್ರತಿಯೊಂದು ಕೆಲಸಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಎಂದು ಉಡಾಫೆ ಉತ್ತರಕೊಡುತ್ತಾರೆ. ತಾಲ್ಲೂಕು ಕಚೇರಿಯಲ್ಲಿಆಗುವ ಕೆಲಸಕ್ಕೆ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗುವ ಅವಶ್ಯಕತೆ ಏನು ಅನ್ನೋದು ರೈತರ ಪ್ರಶ್ನೆ.

ರೈತರು ತಮ್ಮ ದೂರನ್ನು ತಾಲ್ಲೂಕು ದಂಡಾಧಿಕಾರಿಗಳಾದಡಿ ಹನುಮಂತ ರಾಯಪ್ಪನವರಿಗೆ ಹೇಳಿದ ಅವರು ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆ ಹರಿಸುವ ಭರವಸೆ ನೀಡಿದ್ರು.
ಡಿ. ಹನುಮಂತರಾಯಪ್ಪ, ತಾಲ್ಲೂಕು ದಂಡಾಧಿಕಾರಿ
ಚಿಂತಾಮಣಿ ರೈತರ ಸಮಸ್ಯೆಗಳು ಪರಿಹಾರವಾಗಲಿ. ಬಡವರಿಗೆ, ರೈತರಿಗೆ ನ್ಯಾಯ ಸಿಗಲಿ ಅನ್ನೋದು ವಿಜಯಟೈಮ್ಸ್ ಆಶಯ. ಚಿಂತಾಮಣಿಯಿಂದ, ಸೈಯದ್ಅಸ್ಲಂ ಪಾಷಾ, ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್.