ಬೆಂಗಳೂರು ವಿವಿ ದೂರ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ

Bengaluru: ಬೆಂಗಳೂರು ವಿಶ್ವವಿದ್ಯಾಲಯವು ದೂರ ಶಿಕ್ಷಣ ಕೋರ್ಸ್ಗಳ (BU Distance Education – Admission Open) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಹಾಗೂ ಸ್ನಾತಕೋತ್ತರ

ಪದವಿ ಕೋರ್ಸ್ಗಳ ಪ್ರವೇಶಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಎಲ್ಲ ಕೋರ್ಸ್ಗಳಿಗೆ UGCಯ ಮಾನ್ಯತೆ ಇದ್ದು, ಅರ್ಜಿ ಸಲ್ಲಿಸಿ ಕೋರ್ಸ್ ಅಧ್ಯಯನ ಮಾಡಬಹುದು ಅರ್ಜಿ ಸಲ್ಲಿಕೆ, ಶುಲ್ಕ,

ಅರ್ಹತೆ ಸೇರಿದಂತೆ (BU Distance Education – Admission Open) ಸಂಪೂರ್ಣ ಮಾಹಿತಿ ಇಲ್ಲಿದೆ.

ಕೋರ್ಸ್ಗಳು :
ಬಿ.ಕಾಂ ಪದವಿ : 3 ವರ್ಷಗಳು
ಬಿ.ಎ ಪದವಿ : 3 ವರ್ಷಗಳು
ಎಂಎ : 2 ವರ್ಷಗಳು : ಕನ್ನಡ, ಇಂಗ್ಲಿಷ್, ಹಿಂದಿ, ಅರ್ಥಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ.
ಎಂ.ಕಾಂ – 2 ವರ್ಷಗಳು
ಎಂ.ಎಸ್ಸಿ (ಗಣಿತಶಾಸ್ತ್ರ) – 2 ವರ್ಷಗಳು

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 20-10-2023

ಸೂಚನೆ : ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದಿಂದ ನೀಡಲಾಗುವ ಕೋರ್ಸ್ಗಳಿಗೆ ದೇಶದ/ವಿದೇಶದ ಯಾವುದೇ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು

ಅರ್ಹರಾಗಿರುತ್ತಾರೆ. ಪ್ರವೇಶಾತಿಯ ಎಲ್ಲ ಪ್ರಕ್ರಿಯೆಗಳು ಆನ್ಲೈನ್ (Online) ಮತ್ತು ದೂರ ಶಿಕ್ಷಣ ಕಚೇರಿಯಲ್ಲಿ ನಡೆಯಲಿವೆ.

ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು :
SSLC ಅಂಕಪಟ್ಟಿ
PUC ಅಂಕಪಟ್ಟಿ
ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಪದವಿ ಪ್ರಮಾಣ ಪತ್ರ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ವೈಯಕ್ತಿಕ ವಿವರಗಳು
ಇ-ಮೇಲ್ ವಿಳಾಸ

ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ – www.bangaloreuniversity.karnataka.gov.in

ಇದನ್ನು ಓದಿ: ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸರ್ಕಾರ ರಚನೆ: ಯುದ್ದಕ್ಕಾಗಿ ಒಂದಾದ ಇಸ್ರೇಲ್ ರಾಜಕಾರಣಿಗಳು

Exit mobile version