Tel Aviv: ಇಸ್ರೇಲ್ (Israel) ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ನಂತರ (Emergency Govt – All Israel Politicians) ಹಮಾಸ್ ಉಗ್ರರ ಮೇಲೆ ಪೂರ್ಣಪ್ರಮಾಣದ ಯುದ್ದಘೋಷಣೆ
ಮಾಡಿರುವ ಇಸ್ರೇಲ್ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದುಗೂಡಿ “ತುರ್ತು ಸರ್ಕಾರ”ವನ್ನು ರಚನೆ ಮಾಡಿವೆ. ಇಸ್ರೇಲ್ನಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ದೇಶಕ್ಕಾಗಿ ತಮ್ಮ ರಾಜಕೀಯ
ವೈಷಮ್ಯಗಳನ್ನು ಬದಿಗಿಟ್ಟು, (Emergency Govt – All Israel Politicians) ದೇಶಕ್ಕಾಗಿ ಒಂದಾಗಿದ್ದಾರೆ.
ಯುದ್ಧವನ್ನು ನಿಭಾಯಿಸಲು ಹೊಸ ಸರಕಾರ ಮತ್ತು ನೂತನ ಸಚಿವ ಸಂಪುಟವನ್ನು ಪ್ರಧಾನಿ ನೆತನ್ಯಾಹು ಮತ್ತು ಪ್ರತಿಪಕ್ಷಗಳ ನಾಯಕರು ರಚಿಸಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು
(Benjamin Netanyahu) ರಚನೆ ಮಾಡಿರುವ ನೂತನ ಸರ್ಕಾರದಲ್ಲಿ ಇಸ್ರೇಲ್ನಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಇದ್ದು, ಯುದ್ದದ ವೇಳೆ ಅವರು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ.
ಪ್ರತಿಪಕ್ಷ ಸೆಂಟ್ರಿಸ್ಟ್ ಪಾರ್ಟಿ (Centrist Party) ನಾಯಕ ಮತ್ತು ಮಾಜಿ ರಕ್ಷಣಾ ಸಚಿವರು ಕೂಡ ಆಗಿರುವ ಬೆನ್ನಿ ಗ್ಯಾಂಟ್ಜ್ ಅವರು ಹಮಾಸ್ ಉಗ್ರರನ್ನು ಮಟ್ಟಹಾಕಲು ಹೊಸ ‘ರಣತಂತ್ರ’ ಹೆಣೆಯುತ್ತಿದ್ದಾರೆ.
ಬೆನ್ನಿ ಗ್ಯಾಂಟ್ಜ್ ಹಾಲಿ ರಕ್ಷಣಾ ಸಚಿವ ಯೊಯಾವ್ ಗ್ಯಾಲ್ಲೆಂಟ್ಗೆ (Yoav Gallant) ಮಾರ್ಗದರ್ಶನ ಮಾಡುತ್ತಿದ್ದಾರೆ. ಹೀಗೆ ಪ್ರತಿಯೊಂದು ಹಂತದಲ್ಲಿಯೂ ಇಸ್ರೇಲ್ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ
ಕಾರ್ಯನಿರ್ವಹಿಸುತ್ತಿವೆ. ಇಸ್ರೇಲ್ ಮೇಲೆ ನಡೆದಿರುವ ದಾಳಿಗೆ ಪ್ರತಿಕಾರ ತಿರಿಸಿಕೊಳ್ಳುವವರೆಗೂ ಶ್ರಮಿಸುವುದಿಲ್ಲ ಎಂದು ಇಸ್ರೇಲ್ ಸೇನೆ ನಿರ್ಧರಿಸಿದೆ ಎಂದು ಪ್ರಧಾನಿ ನೆತನ್ಯಾಹು ಘೋಷಿಸಿದ್ದಾರೆ.
ಇ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಫೋನ್ ಕರೆ ಮಾಡಿ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಮೆರಿಕ ವಾಯುಪಡೆಯ ಯುದ್ಧ
ವಿಮಾನವು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಇಸ್ರೇಲ್ಗೆ ಬಂದಿಳಿದಿದೆ. ಅಮೇರಿಕಾ ಸೇನೆಯ ಬೆಂಬಲದೊಂದಿಗೆ ಇಸ್ರೇಲ್ ಸೇನೆ ಗಾಜಾಪಟ್ಟಿಯ ಮೇಲೆ ನಿರಂತರವಾಗಿ ವಾಯುದಾಳಿ ನಡೆಸುತ್ತಿದ್ದು,
ಹಮಾಸ್ (Hamas) ಕಮಾಂಡರ್ ಮೊಹಮ್ಮದ್ ದೀಫ್ನ ಮನೆಯನ್ನು ರಾಕೆಟ್ ಇಸ್ರೇಲ್ ಪಡೆಗಳು ಧ್ವಂಸ ಮಾಡಿವೆ. ದಾಳಿಯಲ್ಲಿ ಮೊಹಮ್ಮದ್ ದೀಫ್ನ ಕುಟುಂಬ ಸದಸ್ಯರು ಮೃತರಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಕಣ್ಣಿನ ತೊಂದರೆಯಿಂದ ಬಳಲುತ್ತಿರುವಿರಾ? ಹಾಗಾದ್ರೆ ಕಣ್ಣಿನ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ