Karnataka: ಕರ್ನಾಟಕದ ಮೇಕೆದಾಟು ಯೋಜನೆಗೆ ಮತ್ತೆ ತಗಾದೆ ತೆಗೆದ ತಮಿಳುನಾಡು. ದಿಲ್ಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ (Tamilnadu against Mekeddatu scheme) ಗಜೇಂದ್ರ ಸಿಂಗ್ ಶೇಖಾವತ್
ಅವರನ್ನು ಭೇಟಿ ಮಾಡಿದ ತಮಿಳುನಾಡು ಜಲ ಸಂಪನ್ಮೂಲ ಖಾತೆ ಸಚಿವ ದೊರೈ ಮುರುಗನ್ (Dorai Murugan)ನೇತೃತ್ವದ ನೀಯೋಗವು ತಮಿಳುನಾಡಿಗೆ ಅಧಿಕಾರಯುತವಾಗಿ ಸೇರಬೇಕಾದ
ಕಾವೇರಿ ನೀರಿನಲ್ಲಿ ಕರ್ನಾಟಕ ಕಡಿತ ಮಾಡಿದೆ ಎಂದು ಆರೋಪಿಸಿದೆ.

ನ್ಯೂ ದಿಲ್ಲಿ :-ಕರ್ನಾಟಕವು ಮೇಕೆದಾಟು (Mekedatu) ಬಳಿ ಅಣೆಕಟ್ಟು ನಿರ್ಮಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡು ಮತ್ತೊಮ್ಮೆ ಕ್ಯಾತೆ ತೆಗೆದಿದೆ. ಇದೇ ವೇಳೆಯಲ್ಲಿ
ತಮಿಳುನಾಡಿಗೆ (Tamilnadu against Mekeddatu scheme) ಹರಿಸಬೇಕಾದ ನೀರಿನಲ್ಲಿ ಕಡಿತ ಮಾಡಲಾಗಿದೆ ಎಂದು ಕೇಂದ್ರಕ್ಕೆ ದೂರು ನೀಡಿದೆ.
ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ರವರು ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಂಬಂಧ ಪಟ್ಟಿರುವ ವಿವಾದವನ್ನು ಕೇಂದ್ರದ ಗಮನಕ್ಕೆ ತರುವ ಸಲುವಾಗಿ ದಿಲ್ಲಿ
(Delhi) ಭೇಟಿ ಕೈಗೊಂಡು ಕೇಂದ್ರ ಜಲಾಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ತದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು “ಕಾವೇರಿ ನೀರಿನ
ವಿಚಾರವು ಸಾಮಾನ್ಯವಾದುದಲ್ಲ ಅದೊಂದು ಜೀವನದ ಪ್ರಶ್ನೆ ನೀರಿನ ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನ (Supreme Court) ತೀರ್ಪನ್ನು ಪಾಲಿಸುವದು ಕರ್ನಾಟಕ ಸರ್ಕಾರದ ಹೊಣೆಯಾಗಿದೆ.
ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಮ್ಮ ಜೊತೆ ಯಾವುದೇ ಸಭೆ ನಡೆಸಿದರು, ಪತ್ರ ಬರೆದರೂ, ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ತಮಿಳುನಾಡಿಗೆ ಹರಿಯಬೇಕಿದ್ದ ಕಾವೇರಿ (Kaveri) ನೀರಿನ ಪ್ರಮಾಣ ಜುಲೈ3 ರ ವರೆಗೆ ಕಡಿಮೆಯಾಗಿದೆ ಆದ್ದರಿಂದ ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗಿದೆ. ಇದೇ ರೀತಿ ಮುಂದುವರೆದರೆ ನದಿ ನೀರನ್ನೇ
ನಂಬಿಕೊಂಡಿರುವ ಜಿಲ್ಲೆಗಳಲ್ಲಿ ಅಲ್ಪಾವಧಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಬಗ್ಗೆ ಜಲಸಂಪನ್ಮೂಲ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾದ ಸೌಮಿತ್ರ ಕುಮಾರ್ ಹಲ್ವಾರ್ (Soumitra Kumar Halwar) ಅವರನ್ನು ಕೂಡ ದೊರೈ ಮುರುಗನ್ ಅವರು ಭೇಟಿ ಮಾಡಿ ಕಾವೇರಿ ನದಿ ನೀರು
ಹಂಚಿಕೆ ವಿಚಾರದಲ್ಲಿ ತಮಿಳುನಾಡಿನ ನಿಲುವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಭವ್ಯಶ್ರೀ ಆರ್. ಜೆ