ಗಾಲ್ಫ್‌ ಚೆಂಡನ್ನು ಕೋಳಿ ಮೊಟ್ಟೆ ಎಂದು ನುಂಗಿದ ಹಾವು ; ವೀಡಿಯೋ ವೈರಲ್

Bull snake

ಇತ್ತೀಚಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ(United States) ಹಾವೊಂದು ಎರಡು ಗಾಲ್ಫ್ ಬಾಲ್‌ಗಳನ್ನು(Golf Ball) ಕೋಳಿ ಮೊಟ್ಟೆ ಎಂದು ತಪ್ಪಾಗಿ ಭಾವಿಸಿ, ಅವೆರಡನ್ನೂ ತಿಂದು ಬೇಲಿಯಲ್ಲಿ ಹಾದು ಹೋಗುವಾಗ ಮಧ್ಯಕ್ಕೆ ಸಿಲುಕಿಕೊಂಡಿದೆ. ತದನಂತರ ಅದನ್ನು ಸ್ಥಳೀಯರೊಬ್ಬರು ರಕ್ಷಿಸಿದ್ದಾರೆ. ಉತ್ತರ ಕೊಲೊರಾಡೋ(Colorado) ವನ್ಯಜೀವಿ ಕೇಂದ್ರವು ಮಂಗಳವಾರ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ.

ಹಾವು ಬೇಲಿಯಲ್ಲಿ ಸಿಲುಕಿರುವುದನ್ನು ಸ್ಥಳೀಯರೊಬ್ಬರು ನೋಡಿ ವನ್ಯಜೀವಿ ಕೇಂದ್ರದ ಸಿಬ್ಬಂದಿಯನ್ನು ಸಹಾಯ ಮಾಡಲು ಕರೆಸಿದ್ದಾರೆ. ಎರಡು ಗಾಲ್ಫ್ ಚೆಂಡುಗಳನ್ನು ನುಂಗಿದ ನಂತರ ಬೇಲಿಯಲ್ಲಿ ಸಿಲುಕಿಕೊಂಡ ಬುಲ್‌ಸ್ನೇಕ್‌ಗೆ(Bull Snake) ಸಹಾಯ ಮಾಡಲು ಹಾವಿನ ರಕ್ಷಣೆಯ ತಂಡ ಸ್ಥಳಕ್ಕೆ ಕೂಡಲೇ ಧಾವಿಸಿದೆ. ಇನ್ನು ಮೊಟ್ಟೆಯೆಂದು ಗಾಲ್ಫ್‌ ಬಾಲನ್ನು ಹಾವು ನುಂಗಿದೆ. ಬಾಲನ್ನು ಆಹಾರವಾಗಿ ಸೇವಿಸುವ ಕೋಳಿ ಮೊಟ್ಟೆ ಎಂದು ತಪ್ಪಾಗಿ ಭಾವಿಸಿ ನುಂಗಿದೆ. ಕಡೆಯದಾಗಿ ಅದು ಚಲಿಸುವ ಹಾದಿಯ ಮಧ್ಯೆ ಬೇಲಿಗೆ ಸಿಲುಕಿಕೊಂಡಿದೆ.

“ಹಾವನ್ನು ನಾವು ಬೇಲಿಯಿಂದ ಹೊರತೆಗೆದು, ಅದರ ಹೊಟ್ಟೆಯೊಳಗೆ ಇದ್ದ ಎರಡು ಗಾಲ್ಫ್‌ ಚೆಂಡನ್ನು ಹೊರತೆಗೆದಿದ್ದೇವೆ” ಎಂದು ಫೋಟೋಗಳ ಸಮೇತ ಫೇಸ್ ಬುಕ್ ಪುಟದಲ್ಲಿ ಹಾವಿನ ಕುರಿತ ಮಾಹಿತಿಯನ್ನು ಸಿಬ್ಬಂದಿ ಹಂಚಿಕೊಂಡಿದ್ದಾರೆ. ವನ್ಯಜೀವಿ ಕೇಂದ್ರದ ಸಿಬ್ಬಂದಿ ಹಾವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಗಾಲ್ಫ್ ಚೆಂಡುಗಳು ಹಾವಿನ ಕರುಳಿನಲ್ಲಿ ಸಿಲುಕಿಕೊಂಡಿರುವುದು ತಿಳಿದುಬಂದಿದೆ. ನಂತರ ಅವರು ವಿಶೇಷ ತಂತ್ರಗಳನ್ನು ಬಳಸಿಕೊಂಡು ಹಾವಿನ ಬಾಯಿಯಿಂದ ಎರಡು ಚೆಂಡನ್ನು ಹೊರತೆಗೆದಿದ್ದಾರೆ.

ಸದ್ಯ ಈ ಒಂದು ವೀಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್(Viral) ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಾವುಗಳು 3,500ಕ್ಕೂ ಹೆಚ್ಚು ಪ್ರಬೇಧಗಳನ್ನು ಹೊಂದಿವೆ, ಅವುಗಳಲ್ಲಿ ಕೇವಲ 600 ವಾಸ್ತವವಾಗಿ ವಿಷಕಾರಿಯಾಗಿವೆ ಎಂದು ಕಮೆಂಟ್ ಮೂಲಕ ಅಭಿಪ್ರಾಯಗಳು ವ್ಯಕ್ತವಾಗಿವೆ.

Exit mobile version