ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌

Bengaluru: ಕರ್ನಾಟಕದ (Bumper Offer for Pilgrims) ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳು ಈಗ ಫುಲ್ ಸ್ಮಾರ್ಟ್ ಆಗಿದ್ದು, ದರ್ಶನ ಪಡೆಯಲು ಇಚ್ಛಿಸುವ

ಭಕ್ತರು ಮೊದಲೇ ಮೊಬೈಲ್ ಆಪ್ ಮೂಲಕ ರೂಂ ಬುಕಿಂಗ್ (Room Booking), ದೇವಸ್ಥಾನಗಳ ಪೂಜಾ ಸೇವೆಗಳನ್ನು ಬುಕಿಂಗ್ ಮಾಡಿಸಿಕೊಳ್ಳಬಹುದು. ಡಿಜಿಟಲೀಕರಣದಿಂದ ಉದ್ದದ ಕ್ಯೂ

ನಿಲ್ಲುವುದೂ ತಪ್ಪಲಿದೆ. ಅಷ್ಟೆ ಅಲ್ಲದೆ ಕಾಶಿಯಾತ್ರೆಯಂತಹ ನಾನಾ ಯಾತ್ರೆಗಳಿಗೆ ಬೇಕಾದ ಸಹಾಯಧನ ಪಡೆಯಲೂ ಸಹ ಮೊಬೈಲ್ ಆಪ್ (Mobile App) ಮೂಲಕ ಅರ್ಜಿ ಸಲ್ಲಿಸಬಹುದು.

ಇನ್ನು ಮುಂದೆ ನಾನಾ ಯಾತ್ರೆಗಳಿಗೆ ತೆರಳುವ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ಸಹಾಯಧನ ಪಡೆಯಲು ಪದೇ ಪದೆ ಇಲಾಖೆಗೆ ಅಲೆಯುವ ತಲೆಬಿಸಿ ಇಲ್ಲ. ಅಲ್ಲದೆ ಆನ್‌ಲೈನ್‌ನಲ್ಲೇ

ಅರ್ಜಿ ಸಲ್ಲಿಸಿ, ಆರ್‌ಟಿಜಿಎಸ್‌ (RTGS) ಮೂಲಕ ನೇರವಾಗಿ ಸಹಾಯಧನ ಪಡೆಯಬಹುದು.
1) ಕಾಶಿ ಯಾತ್ರೆ, ಮಾನಸ ಸರೋವರ ಯಾತ್ರೆ, ಚಾರ್‌ಧಾಮ್‌ ಯಾತ್ರೆ, ಕರ್ನಾಟಕ ಗೌರವ್‌ ಕಾಶಿ-ಯಾತ್ರೆಗೆ ಸಹಾಯಧನಕ್ಕಾಗಿ ಮೊಬೈಲ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ.
2) ತಮ್ಮ ಖಾತೆಗೆ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಸಹಾಯಧನ ಬರಲಿದೆ. ಅದು ದಾಖಲೆ, ವಿವರಗಳು ಸರಿಯಾಗಿದ್ದರೆ ಮಾತ್ರ.
3) ರಾಜ್ಯದ ನಾನಾ ದೇವಾಲಯಗಳಿಗೆ ಹೋಗುವ ಭಕ್ತರು ಇನ್ಮುಂದೆ ಮೊಬೈಲ್‌ ಆ್ಯಪ್‌ನಲ್ಲಿ ತಮಗೆ ಬೇಕಾದ ಸೇವೆಗಳನ್ನು ತಮಗೆ ಬೇಕಾದ ದಿನ ಮತ್ತು ದೇವರ ದರ್ಶನ ಬುಕ್‌ ಮಾಡಿಕೊಂಡು ಹೋಗಬಹುದು.

ಕಾಶಿ ಯಾತ್ರೆ (5 ಸಾವಿರ ರೂ.) ,ಚಾರ್‌ಧಾಮ್‌ ಯಾತ್ರೆ (20 ಸಾವಿರ ರೂ.), ಕರ್ನಾಟಕ ಗೌರವ್‌ ಕಾಶಿ-ಯಾತ್ರೆಗೆ (7,500 ರೂ.),ಮಾನಸ ಸರೋವರ ಯಾತ್ರೆ (30 ಸಾವಿರ ರೂ.) ಸಹಾಯಧನಕ್ಕಾಗಿ ಮೊಬೈಲ್‌

ಆ್ಯಪ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಒದಗಿಸಲಾಗಿದೆ. ಪ್ರತಿ ವರ್ಷ ಸಹಸ್ರಾರು ಜನ ಯಾತ್ರೆಗೆ ತೆರಳುತ್ತಾರೆ. ಹೀಗೆ ಯಾತ್ರೆ ಹೋಗಿ ಬಂದವರು ನಂತರ ಇಲಾಖೆಯಿಂದ ಸಿಗುವ ಸಹಾಯಧನ

ಪಡೆಯಲು ಸಾಕಷ್ಟು ಬಾರಿ ಇಲಾಖೆಗೆ ಅಲೆದಾಡಬೇಕಿತ್ತು.

ಕೆಲವೊಮ್ಮೆ ಆರು ತಿಂಗಳಾದರೂ ಅರ್ಜಿಗಳು ವಿಲೇವಾರಿಯಾಗಿವೆಯೋ, ಇಲ್ಲವೋ ಎಂಬುದೂ ತಿಳಿಯದೆ ದೂರದ ಜಿಲ್ಲೆಗಳಿಂದ ಚಾಮರಾಜಪೇಟೆಯ (Chamarajapete) ಪ್ರಧಾನ ಕಚೇರಿಗೆ

ಬಂದು ಕೇಳುವ ಪರಿಸ್ಥಿತಿಯಿತ್ತು. ಆದರೆ ಈಗ ಕಚೇರಿಗೆ ಬಂದು ವಾಪಾಸ್ ಹೋಗುವ ಹಾಗೆಇಲ್ಲ, ನಿಮಗೆಲ್ಲ ಈಗ ತಿಳಿದಿರಬಹುದು ಎಲ್ಲವೂ ಮೊಬೈಲ್‌ ಆ್ಯಪ್‌ ಮೂಲಕವೇ ವ್ಯವಹರಿಸಬಹುದು.

ಅರ್ಜಿಯೊಂದಿಗೆ, ಸರಿಯಾದ ದಾಖಲೆ ಸಲ್ಲಿಸುವುದು, ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದೂ ಸೇರಿದಂತೆ ಸಮಗ್ರ ಮಾಹಿತಿಯನ್ನುನೀವು ಆ್ಯಪ್‌ನಲ್ಲೇ ನೋಡಬಹುದಾಗಿದೆ.

ದಾಖಲೆ ವಿವರಗಳು ಸರಿಯಾಗಿದ್ದಲ್ಲಿ ತಮ್ಮ ಖಾತೆಗೆ ನೇರವಾಗಿ ಆರ್‌ಟಿಜಿಎಸ್‌ ಮೂಲಕ ಹಣ ಜಮೆಯಾಗಲಿದೆ. ರಾಜ್ಯದ ನಾನಾ ದೇವಾಲಯಗಳಿಗೆ ಹೋಗುವ ಭಕ್ತರು ದಿನ ನಿಗದಿ ಮಾಡಿಕೊಂಡು ಇನ್ಮುಂದೆ

ಮೊಬೈಲ್‌ ಆ್ಯಪ್‌ನಲ್ಲೇ ತಮಗೆ ಬೇಕಾದ ಸೇವೆಗಳನ್ನು ಬುಕ್‌ ಮಾಡಿಕೊಂಡು ಹೋಗಬಹುದಾಗಿದೆ,ಸೇವೆಗಳು ಮಾತ್ರವಲ್ಲದೆ ರೂಂ ಬುಕ್ಕಿಂಗ್‌, ಪಾರ್ಕಿಂಗ್‌ಗೂ (Parking) ಜಾಗ ಬುಕ್‌ ಮಾಡಿಕೊಳ್ಳಬಹುದು.

ದೇವಾಲಯಗಳಿಗೆ ಹೋಗುವ ತಮಗೆ ಸಮಯ ಸಿಕ್ಕಾಗ ಮೊಬೈಲ್‌ನಲ್ಲೇ ಬೇಕಾದರೂ ರೂಮ್, ಬೇಕಾಗಿರುವ ಪೂಜಾ ಸೇವೆಗಳನ್ನು ಮೊಬೈಲ್‌ ಆ್ಯಪ್‌ನಲ್ಲೇ ಬುಕ್‌ ಮಾಡಿಕೊಳ್ಳಬಹುದು ಅಲ್ಲದೆ ನಿಗದಿತ

ಸಮಯಕ್ಕೆ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಐಟಿಎಂಎಸ್‌ ಮೂಲಕ ದೇವಸ್ಥಾನಗಳಿಗೆ ಸಂಬಂಧಿಸಿದ ಸಮಗ್ರ

ಮಾಹಿತಿ ಸಿಗುತ್ತಿತ್ತು.

ವೆಬ್‌ಸೈಟ್‌ (Website) ಮೂಲಕ ಬುಕ್‌ ಮಾಡಬಹುದಿತ್ತು. ಆದರೆ ಇದೀಗ ವೆಬ್‌ಪೋರ್ಟಲ್‌ನೊಂದಿಗೆ ಮೊಬೈಲ್‌ ಆ್ಯಪ್‌ಗಳು ಅಭಿವೃದ್ಧಿಯಲ್ಲಿವೆ. ಹೀಗಾಗಿ ಮೊಬೈಲ್‌ನಲ್ಲೇ ಬುಕ್‌ ಮಾಡಬಹುದಾಗಿದೆ ಎಂದು

ರಾಜ್ಯ ಮುಜರಾಯಿ ಇಲಾಖೆ ಆಯುಕ್ತರಾದ ಡಾ. ಬಸವರಾಜೇಂದ್ರ (Dr. Basavarajendra) ತಿಳಿಸಿದ್ದಾರೆ. ನಾನಾ ಸೇವೆಗಳಿಗೆ, ರೂಂ ಬುಕಿಂಗ್‌ಗೆ ಒಂದು ಮೊಬೈಲ್‌ ಆ್ಯಪ್‌ ಹಾಗೂ ತಿರುಪತಿ ಸೇರಿದಂತೆ

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ (Bumper Offer for Pilgrims) ಕರ್ನಾಟಕ ಭವನ

ಹಾಗೂ ರಾಜ್ಯದಲ್ಲಿರುವ ಪ್ರತಿಷ್ಠಿತ ದೇವಾಲಯಗಳಲ್ಲಿನ ರೂಂ ಬುಕಿಂಗ್‌ಗಾಗಿ ಎಂದೇ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಮೊದಲ ಹಂತದಲ್ಲಿ ತಿರುಪತಿಗೆ (Tirupati) ತೆರಳುವ ಭಕ್ತರಿಗೆ ಅಲ್ಲಿನ

ಕರ್ನಾಟಕ ಭವನದ ರೂಂಗಳನ್ನು ಬುಕ್‌ ಮಾಡಲು ಮೊಬೈಲ್‌ ಆ್ಯಪ್‌ ಇದೀಗ ಸೇವೆಗೆ ಲಭ್ಯವಿದೆ.ಹೀಗೆ ಮುಂದಿನ ದಿನಗಳಲ್ಲಿಇತರೆ ದೇವಾಲಯಗಳಿಗೂ ವಿಸ್ತರಿಸಲಾಗುವುದು ಎಂದು ಮುಜರಾಯಿ

ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಹೇಳಿದರು.

ಇದನ್ನು ಓದಿ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೇಘಾ ಮನೋಹರ ಕಂಪು

Exit mobile version