ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

Health : ಬಿರು ಬೇಸಿಗೆಯಲ್ಲಿ, ಮಾವಿನ ವ್ಯಾಪಾರ ಜೋರಾಗಿ ನಡೆಯುತ್ತೆ. ವ್ಯಾಪಾರಿಗಳೋ ಲಾಭಕ್ಕಾಗಿ ಏನೂ ಮಾಡಲೂ ಹೇಸದ ಸ್ಥಿತಿ ತಲುಪಿದ್ದಾರೆ. ಹಾಗಾಗಿ ವಿಷಕಾರಕ ಕೆಮಿಕಲ್‌ಗಳನ್ನು ಹಾಕಿ ಮಾವನ್ನು (Calcium Carbide in Mangoes) ಕೃತಕವಾಗಿ ಮಾಗಿಸುತ್ತಿದ್ದಾರೆ. ಅದ್ರಲ್ಲೂ ಆರೋಗ್ಯಕ್ಕೆ ಅಪಾಯಕಾರಿ ಅಂತ ಬ್ಯಾನ್ ಮಾಡಿರುವ ಕ್ಯಾಲ್ಸಿಯಂ ಕಾರ್ಬೈಡ್‌ (Calcium carbide) ಅನ್ನು ಬಳಸಿ ಮಾವನ್ನು ಹಣ್ಣು ಮಾಡುತ್ತಿದ್ದಾರೆ.ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.

ಇನ್ನು ಕೆಲವರು ಮಾವಿನ ಹಣ್ಣುಗಳ (Mango fruit) ಹಣ್ಣಾಗುವ ಪ್ರಕ್ರಿಯೆಯನ್ನು ಫಾಸ್ಟ್‌ ಮಾಡಲು ಎಥಿಲೀನ್ ಎಂಬ ರಾಸಾಯನಿಕದಿಂದ ಸಂಸ್ಕರಿಸುತ್ತಿದ್ದಾರೆ.

ಈ ರಾಸಾಯನಿಕಗಳ ಬಳಕೆಯಿಂದ ಕೇವಲ ಎರಡು ದಿನಗಳಲ್ಲಿ ಮಾವನ್ನು ಹಣ್ಣು ಮಾಡಬಹುದು. ಅಲ್ಲದೇ ಈ ಮಾವುಗಳ ಬಣ್ಣ ಜನರ ಕಣ್ಣು ಕುಕ್ಕುವಂತಿದೆ.

ದುರದೃಷ್ಟವಶಾತ್, ಕೆಲವು ಮಾರಾಟಗಾರರು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ ಮತ್ತು ಈ ಕೃತಕವಾಗಿ ಮಾಗಿದ ಹಣ್ಣುಗಳನ್ನು ಗ್ರಾಹಕರಿಗೆ ಮಾರಿ ಭರ್ಜರಿ ಲಾಭ ಪಡೆಯುತ್ತಾರೆ.

ಕೃತಕವಾಗಿ ಮಾಗಿದ ಹಣ್ಣುಗಳನ್ನು ಸೇವಿಸುವುದರಿಂದ ಹಾರ್ಮೋನುಗಳ (hormone) ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ಹೈಪೋಥೈರಾಯ್ಡಿಸಮ್,

ಮಧುಮೇಹ (Diabetes), ಗರ್ಭಾಶಯದ ಸಮಸ್ಯೆಗಳು ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಪೌಷ್ಟಿಕತಜ್ಞರು ಎಚ್ಚರಿಸಿದ್ದಾರೆ.

ಹಾಲುಣಿಸುವ ಮಹಿಳೆಯರು ಕೆಮಿಕಲ್‌ನಿಂದ ಹಣ್ಣಾದ ಮಾವನ್ನು ಸೇವಿಸದಿರುವುದೇ ಒಳ್ಳೆಯದು. ಯಾಕಂದ್ರೆ ಈ ಮಾವಿನ ಕೆಮಿಕಲ್‌ನ ಪ್ರಭಾವದಿಂದ ಮಗುವಿನ ಆರೋಗ್ಯ ಕೆಡಬಹುದು.

ಕೆಮಿಕಲ್ ಮಾವು ಪತ್ತೆ ಹಚ್ಚೋದು ಹೇಗೆ?
ನಾವು ಸೇವಿಸುವ ನೈಸರ್ಗಿಕವಾಗಿ ಮಾಗಿದ ಮತ್ತು ಕೃತಕವಾಗಿ ಮಾಗಿದ ಹಣ್ಣುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

ಹಾಗಾದ್ರೆ ಬನ್ನಿ ಒಂದು ಸಣ್ಣ ಪ್ರಯೋಗ ಮಾಡಿ ಭಾರೀ ಅಪಾಯದಿಂದ ಪಾರಾಗೋಣ.


ಮಾವಿನ ಹಣ್ಣುಗಳನ್ನು ಖರೀದಿಸಿದ ನಂತರ, ಒಂದು ಪಾತ್ರೆಯಲ್ಲಿ ನೀರು ತುಂಬಿಸಿ, ಅದಕ್ಕೆ ಮಾವುಗಳನ್ನು ಹಾಕಿ. ಅದು ನೈಸರ್ಗಿಕವಾಗಿ (Calcium Carbide in Mangoes) ಮಾಗಿದ ಹಣ್ಣಾಗಿದ್ದರೆ ಅದು ಕೆಳಕ್ಕೆ ಮುಳುಗುತ್ತದೆ.

ಅದು ಮೇಲಕ್ಕೆ ತೇಲಿದರೆ, ಅದು ಕೃತಕವಾಗಿ ಮಾಗಿದ ಹಣ್ಣು.


ಬಣ್ಣ: ಕೃತಕವಾಗಿ ಮಾಗಿದ ಮಾವಿನ ಸಿಪ್ಪೆ ಅಲ್ಲಲ್ಲಿ ಹಸಿರು ಬಣ್ಣವನ್ನು ಹೊಂದಿರುತ್ತದೆ.

ಅದರ ಹಳದಿ ಬಣ್ಣವು ತಿಳಿ ಬಣ್ಣದ್ದಾಗಿದ್ದರೆ, ಅದು ಕೃತಕವಾಗಿ ಮಾಗಿದ ಹಣ್ಣು. ಕೃತಕ ಮಾವಿನಹಣ್ಣುಗಳು ತೆಳು ಅಥವಾ ಗಾಢ ಹಳದಿ ಬಣ್ಣದಲ್ಲಿರುತ್ತವೆ.

ನೈಸರ್ಗಿಕವಾಗಿ ಮಾಗಿದ ಹಣ್ಣುಗಳು ಸೋಂಕಿತ ಮತ್ತು ಹೊರಭಾಗದಲ್ಲಿ ಕೊಳೆತಿರುವ ಹಾಗೆ ಕಾಣಿಸಬಹುದು.

ಕೃತಕ ಮಾವು ಹಣ್ಣಾಗಿದ್ದರೂ, ತಿರುಳು ದೃಢವಾಗಿರುತ್ತದೆ. ನೈಸರ್ಗಿಕ ಹಣ್ಣು ಹಾಗಲ್ಲ ಮತ್ತು ಮೆತ್ತಗಿರುತ್ತದೆ. ಮಾಂಸವು ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ.

ರುಚಿ: ಕೃತಕವಾಗಿ ಮಾಗಿದ ಹಣ್ಣನ್ನು ಸೇವಿಸುವುದರಿಂದ ಬಾಯಿ ಅಥವಾ ತುಟಿಗಳಿಗೆ ಸ್ವಲ್ಪ ಕಿರಿಕಿರಿ ಉಂಟಾಗುತ್ತದೆ.

ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಅಡ್ಡ ಪರಿಣಾಮಗಳನ್ನು ಕೆಲವು ಜನರುಎದುರಿಸಿದ್ದಾರೆ. ತುಂಬಾ ಕಡಿಮೆ ರಸವನ್ನು ಕೃತಕ ಹಣ್ಣುಗಳು ಹೊಂದಿರುವುದಿಲ್ಲ. ರಸವನ್ನು ಸೃಷ್ಟಿಸುವ ರಾಸಾಯನಿಕ ಎಥಿಲೀನ್ (Ethylene Chemical) ಇದಕ್ಕೆ ಕಾರಣವಾಗಿದೆ.

Exit mobile version