1 ರೂ. ಚಿಲ್ಲರೆ ಕೊಡದ ಬಿಎಂಟಿಸಿ ಕಂಡೆಕ್ಟರ್‌ ವಿರುದ್ಧ ಮೊಕದ್ದಮೆ ಹೂಡಿ ಈ ವ್ಯಕ್ತಿ ಗೆದ್ದ ಹಣವೆಷ್ಟು ಗೊತ್ತಾ?

Bengaluru : 1 ರೂ. ಚಿಲ್ಲರೆ ಕೊಡಲು ನಿರಾಕರಿಸಿದ ಬಿಎಂಟಿಸಿ ಕಂಡೆಕ್ಟರ್‌ ವಿರುದ್ಧ ಮೊಕದ್ದಮೆ ಹೂಡಿದ ವ್ಯಕ್ತಿಯೊಬ್ಬರು 3 ವರ್ಷದ ಬಳಿಕ ಈ ಕೇಸ್‌ ಅನ್ನು ನ್ಯಾಯಾಲಯದಲ್ಲಿ ಗೆದ್ದಿದ್ದಾರೆ! ಹೇಗೆ ಅಂತೀರಾ ಈ ವರದಿ (case against bmtc conductor) ಓದಿ ನೋಡಿ.

ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಬೆಳಸಿದ 37 ವರ್ಷದ ತುಮಕೂರು ನಿವಾಸಿಯೊಬ್ಬರು, ಬಸ್ಸಿನ ಮಹಿಳಾ ಕಂಡೆಕ್ಟರ್ 1 ರೂ.

ಹಿಂದಿರುಗಿಸದ ಕಾರಣ ಬಿಎಂಟಿಸಿ ವಿರುದ್ಧ ಮೊಕದ್ದಮೆ ಹೂಡಿ ಈ ವರ್ಷದ ಜನವರಿ ತಿಂಗಳಲ್ಲಿ ಕೇಸ್‌ ತಮ್ಮ ಪರ ಪಡೆದು, 3,000 ರೂ.

ಹಣವನ್ನು ಕೂಡ ಗೆದ್ದಿದ್ದಾರೆ. 37 ವರ್ಷದ ವ್ಯಕ್ತಿ ತುಮಕೂರು ನಿವಾಸಿ ರಮೇಶ್ ನಾಯ್ಕ್ ಎಲ್(Ramesh Naik.L) ಎಂದು ಗುರುತಿಸಲಾಗಿದ್ದು,

ಬಿಎಂಟಿಸಿ ಬಸ್ಸಿನ ಕಂಡಕ್ಟರ್‌ನಿಂದ 1 ರೂಪಾಯಿಯನ್ನು ವಾಪಸ್‌ ಪಡೆಯದ ಕಾರಣ ನ್ಯಾಯಾಲಯಕ್ಕೆ ಹೋಗಿ ಮೊಕದ್ದಮೆ ಹೂಡಿದ್ದರು!

ರಮೇಶ್‌ ನಾಯಕ್ ಅವರು ಬೆಂಗಳೂರಿನ ಶಾಂತಿನಗರ ಬಸ್ ಡಿಪೋದಿಂದ ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸೆಪ್ಟೆಂಬರ್ 2019 ರಲ್ಲಿ ಈ ಘಟನೆ ಸಂಭವಿಸಿದೆ!

ಆ ವೇಳೆ ಅವರು ಪ್ರಯಾಣಿಸುವಾಗ ಇದ್ದ ಪ್ರಯಾಣ ದರ 29 ರೂ. ಆಗಿತ್ತು. ಹೀಗಾಗಿ ಅವರು ಮಹಿಳಾ ಕಂಡಕ್ಟರ್‌ಗೆ 30 ರೂ.

ಪಾವತಿಸಿ 1 ರೂಪಾಯಿ ಚಿಲ್ಲರೆಗೆ ಕೇಳಿದ್ದರು. ಆದಾಗ್ಯೂ, ತಮಗೆ ಮಹಿಳಾ ಕಂಡಕ್ಟರ್‌(Conductor) ಬಾಕಿ ಮೊತ್ತವನ್ನು ಹಿಂದಿರುಗಿಸದೆ, ಅಪಹಾಸ್ಯ ಮಾಡಿದ್ದರು ಎಂಬುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಾರಕ್ಕೆ ಕೋಪಗೊಂಡ ಅವರು ಬಸ್ ಕಂಡಕ್ಟರ್ ವಿರುದ್ಧ ದೂರು ನೀಡಿ ಬಿಎಂಟಿಸಿಯ (BMTC)ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಅಲ್ಲಿ ಯಾವುದೇ ರೀತಿಯ ಪ್ರಯೋಜನವಾಗಿಲ್ಲ!

ಹೀಗಾಗಿ ರಮೇಶ್ ನಾಯಕ್ (Ramesh Naik)ಅವರು ಕಂಡಕ್ಟರ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿ,

ಅವರು ಸೇವೆಯಲ್ಲಿನ ಕೊರತೆ ಎಂದು ಆರೋಪಿಸಿ ಬಿಎಂಟಿಸಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಶಾಂತಿನಗರದಲ್ಲಿರುವ ಬೆಂಗಳೂರು ೪ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮೊಕದ್ದಮೆ ಹೂಡಿದ್ದರು.

ಮೂರು ವರ್ಷಗಳ ನ್ಯಾಯಾಲಯದ ಹೋರಾಟದ ನಂತರ, ನ್ಯಾಯಾಲಯವು ಜನವರಿ 31, 2023 ರಂದು ತನ್ನ ತೀರ್ಪನ್ನು ಪ್ರಕಟಿಸಿತು. ಅದು 1 ರೂ.

https://youtu.be/veXa3V_Hn2g

ಆಗಿದ್ದರೂ ಸಹ, ತನಗೆ ನೀಡಬೇಕಾದ ಬಾಕಿಯನ್ನು ಪಡೆಯುವುದು ಗ್ರಾಹಕರ ಹಕ್ಕು ಎಂದು ಗಮನಿಸಿದ ನ್ಯಾಯಾಲಯವು,

ಸ್ವಭಾವತಃ, ನ್ಯಾಯಾಧೀಶರು ಬಿಎಂಟಿಸಿ ಬಸ್ ಕಂಡಕ್ಟರ್ ಅವರ ನಿರ್ಲಕ್ಷ್ಯ ಮತ್ತು ಅಸಡ್ಡೆ ಸೇವೆ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

ಸರಿಯಾದ ಪರಿಹಾರವನ್ನು ಪಡೆಯಲು ಗ್ರಾಹಕ ಸಂರಕ್ಷಣಾ ಕಾಯಿದೆ, 1986 ರ ಮೂಲಕ ಅವರನ್ನು ರಕ್ಷಿಸಲಾಗಿದೆ ಎಂದು ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ.

ಆದ್ದರಿಂದ ರಮೇಶ್‌ ನಾಯಕ್ ಅವರು 1 ರೂ. ಮರುಪಾವತಿಯನ್ನು ಗೆದ್ದರು ಮತ್ತು ಕಂಡಕ್ಟರ್ ಮತ್ತು ಬಿಎಂಟಿಸಿಯ ಹಿರಿಯ ಅಧಿಕಾರಿಗಳಿಂದ ಅವರು ಎದುರಿಸಿದ ಮುಜುಗರ ಮತ್ತು ಅಪಹಾಸ್ಯಕ್ಕಾಗಿ 3,000 ರೂ. ಹಣವನ್ನು ಪರಿಹಾರವಾಗಿ ಪಡೆದಿದ್ದಾರೆ.

Exit mobile version