ಇಂಪೀರಿಯಲ್ ಟ್ವಿನ್ ಟವರ್ಸ್‌ನಲ್ಲಿ ವಿಡಿಯೋ ಮಾಡಿದ ಇಬ್ಬರು ರಷ್ಯಾದ ಯೂಟ್ಯೂಬರ್‌ಗಳ ವಿರುದ್ಧ ಕೇಸ್ ದಾಖಲು!

Mumbai : ಮುಂಬೈನ ಇಂಪೀರಿಯಲ್ ಟ್ವಿನ್ ಟವರ್ಸ್ (case against youtubers) ಅನ್ನು ಪ್ರವೇಶಿಸಿ, ವೀಡಿಯೋ ಮಾಡಿದ ಇಬ್ಬರು ರಷ್ಯಾದ ಯೂಟ್ಯೂಬರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಅಷ್ಟಕ್ಕೂ ರಷ್ಯಾ ಮೂಲದ ಇಬ್ಬರು ಯೂಟ್ಯೂಬರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಲು ಕಾರಣವೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ. ಮುಂಬೈ ಪೊಲೀಸರು ನೀಡಿರುವ ವರದಿ ಪ್ರಕಾರ,

ಸೋಮವಾರ ಮುಂಬೈನ ಟಾರ್ಡಿಯೊ ಪ್ರದೇಶದಲ್ಲಿನ ಇಂಪೀರಿಯಲ್ ಟ್ವಿನ್ ಟವರ್ಸ್ ಅನ್ನು ಪ್ರವೇಶಿಸಿದ ನಂತರ ರಷ್ಯಾದ ಇಬ್ಬರು ಯೂಟ್ಯೂಬರ್‌ಗಳು (Youtubers), ಭಯಾನಕ ಸ್ಟಂಟ್ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

https://vijayatimes.com/again-covid-scare/

ಇಬ್ಬರೂ ಸ್ಟಂಟ್ ವಿಡಿಯೋ ರೆಕಾರ್ಡ್ ಮಾಡಲೆಂದೇ ಟವರ್‌ಗಳನ್ನು ಪ್ರವೇಶಿಸಿದ್ದರು! ಈ ಇಬ್ಬರು ಯೂಟ್ಯೂಬರ್‌ಗಳು ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಈ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 452 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯೂಟ್ಯೂಬರ್‌ಗಳನ್ನು ರೋಮನ್ ಪ್ರೋಶಿನ್ (33) ಮತ್ತು ಮ್ಯಾಕ್ಸಿಮ್ ಶೆರ್ಬಕೋವ್ (25) ಎಂದು (case against youtubers) ಗುರುತಿಸಲಾಗಿದೆ.

ಇದನ್ನೂ ಓದಿ: https://vijayatimes.com/2023-odi-world-cup/

ಈ ಘಟನೆಯ ಬಗ್ಗೆ ರಷ್ಯಾದ ಕಾನ್ಸುಲೇಟ್‌ಗೆ ಮಾಹಿತಿ ನೀಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ,

ತಾವು ಮೆಟ್ಟಿಲುಗಳನ್ನು ಬಳಸಿ ಕಟ್ಟಡದ 58ನೇ ಮಹಡಿಗೆ ಏರಿದ್ದೇವು ಎಂದು ಯೂಟ್ಯೂಬರ್‌ಗಳು ಹೇಳಿಕೊಂಡಿರುವುದಾಗಿ ತಿಳಿಸಲಾಗಿದೆ.

ಕಟ್ಟಡದಿಂದ ಕೆಳಗಿಳಿಯಲು ಸಾಹಸ ಮಾಡುವಾಗ ಮತ್ತೊಂದು ವಿಡಿಯೋ ರೆಕಾರ್ಡ್ ಮಾಡಲು ಯೋಜಿಸಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

Exit mobile version