ಸಿಬಿಎಸ್‌ಇ ಇಂದ 10th, 12th ಪರೀಕ್ಷೆ ವೇಳಾಪಟ್ಟಿ, ಶೀಘ್ರದಲ್ಲೇ ಪ್ರಕಟಣೆ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ

2024ನೇ ಸಾಲಿನ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳಿಗೆ ವೇಳಾಪಟ್ಟಿಯನ್ನು (CBSE Exam Time Table) ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ

ಇದ್ದು, ವಿಂಟರ್‌ ಬೌಂಡ್ ಶಾಲೆಗಳಲ್ಲಿ ಈಗಾಗಲೇ ಪ್ರಾಯೋಗಿಕ (CBSE Exam Time Table) ಪರೀಕ್ಷೆಗಳು ಆರಂಭವಾಗಿವೆ.

ಸಿಬಿಎಸ್‌ಇ ಕ್ಲಾಸ್ 10th, 12th ಪರೀಕ್ಷೆಗಳು ಫೆಬ್ರುವರಿ 15 ರಿಂದ ಆರಂಭವಾಗುವ ಸಾಧ್ಯತೆ ಇದ್ದು, ಈಗಾಗಲೇ ನವೆಂಬರ್ 14 ರಿಂದ Winter Bound ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ

ಪರೀಕ್ಷೆಗಳು ಆರಂಭವಾಗಿದೆ. ಡಿಸೆಂಬರ್ 14 ಕ್ಕೆ (December 14) ಮುಗಿಯಲಿದ್ದು, ಇತರೆ ವಲಯಗಳ ವಿದ್ಯಾರ್ಥಿಗಳಿಗೆ ಜನವರಿ 1 ರಿಂದ ಫೆಬ್ರುವರಿ 15 ರವರೆಗೆ ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ

ಪ್ರಾಕ್ಟಿಕಲ್ ಎಕ್ಸಾಮ್‌ (Practical Exam) ನಡೆಯಲಿದೆ..

ವಿದ್ಯಾರ್ಥಿಗಳು ಸಿಬಿಎಸ್‌ಇ ಡೇಟ್‌ ಶೀಟ್‌ ಅನ್ನು ನವೆಂಬರ್ 17 ರೊಳಗೆ ಪಡೆಯಬಹುದು ಎಂದು ಮೂಲಗಳ ಪ್ರಕಾರ ಹೇಳಲಾಗಿದೆ. ಆದರೆ ಸಿಬಿಎಸ್‌ಇ (CBSE) ಈ ಕುರಿತು ಯಾವುದೇ ಅಧಿಕೃತ ಮಾಹಿತಿ

ನೀಡಿಲ್ಲ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ cbse.gov.in ನಲ್ಲಿ ಚೆಕ್‌ ಮಾಡಿಕೊಳ್ಳಬಹುದಾಗಿದೆ.

ಪರೀಕ್ಷಾ ವೇಳಾಪಟ್ಟಿ ಡೌನ್‌ಲೋಡ್‌ ವಿಧಾನ

ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಯನ್ನು ಈ ಬಾರಿ ಕೇಂದ್ರ ಪ್ರೌಢ ಶಿಕ್ಷಣ (Central Secondary Education ) ಮಂಡಳಿಯು ಬಹುಬೇಗ ಮುಗಿಸುವ ಅಗತ್ಯವಿದ್ದು, 2024 ರ

ಲೋಕಸಭೆ ಚುನಾವಣೆಯು ಇರುವ ಕಾರಣದಿಂದ ಪರೀಕ್ಷೆಗಳನ್ನು ಬೇಗ ಮುಗಿಸುವ ಅಗತ್ಯವಿದೆ.

ಇದನ್ನು ಓದಿ: ವಿಶ್ವಕಪ್ ಸೆಮೀಸ್ : ಹೈವೋಲ್ಟೇಜ್ ಪಂದ್ಯ ನೋಡಲು ಮುಂಬೈಗೆ ಗಣ್ಯರ ದಂಡು: ಯಾರೆಲ್ಲಾ ಇರ್ತಾರೆ

Exit mobile version