ಇತಿಹಾಸದಲ್ಲಿ ಹತ್ತನೇ ಬಾರಿಗೆ ಐಪಿಎಲ್‌ನ ಫೈನಲ್‌ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್

Chennai : ಎಂಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತನ್ನ ಇತಿಹಾಸದಲ್ಲಿ ಹತ್ತನೇ ಬಾರಿಗೆ ಐಪಿಎಲ್‌ನ ಫೈನಲ್‌ಗೆ ಪ್ರವೇಶಿಸಿದೆ. ಮೊದಲ ಕ್ವಾಲಿಫೈಯರ್ (Chennai Super Kings 2023) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 15 ರನ್‌ಗಳ ಜಯ ಸಾಧಿಸಿತ್ತು.

ಅದೇನೇ ಇರಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ (Second Qualifier Match) ಗೆದ್ದು ಫೈನಲ್ ಪ್ರವೇಶಿಸುವ ಸಂಕಲ್ಪ ತೊಟ್ಟಿದೆ.

ಮತ್ತು ಗುಜರಾತ್ ಟೈಟಾನ್ಸ್ ಪವರ್ ಪ್ಲೇನಲ್ಲಿ 41 ರನ್ ಗಳಿಸುವ ಮೂಲಕ ಬಲಿಷ್ಠವಾಗಿ ಪ್ರಾರಂಭಿಸಿತು.

ಆದರೆ, ವೃದ್ಧಿಮಾನ್ ಸಹಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ವಿಕೆಟ್ ಕಳೆದುಕೊಂಡು ತಂಡಕ್ಕೆ ಸಂಕಷ್ಟ ತಂದೊಡ್ಡಿತು.

ಶುಭಮನ್ ಗಿಲ್ (Shubman Gill) (42 ರನ್) ಮತ್ತು ರಶೀದ್ ಖಾನ್ (Rashid Khan) (30 ರನ್) ಅವರ ಆಕರ್ಷಕ ಬ್ಯಾಟಿಂಗ್ ಹೊರತಾಗಿಯೂ,

ಗುಜರಾತ್ ಟೈಟಾನ್ಸ್ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು 157 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದನ್ನೂ ಓದಿ : https://vijayatimes.com/american-it-company-fined/

ಮಂಗಳವಾರ, ಎಂ ಚಿದಂಬರಂ ಸ್ಟೇಡಿಯಂನಲ್ಲಿ (M Chidambaram Stadium), ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 15 ರನ್‌ಗಳ ಭರ್ಜರಿ ಜಯ ಸಾಧಿಸಿತು,

ಈ ಮೂಲಕ ಐಪಿಎಲ್ ಟೂರ್ನಿಯ ಫೈನಲ್‌ಗೆ ಮುನ್ನಡೆಯಿತು. ಗುಜರಾತ್ ಟೈಟಾನ್ಸ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಅನ್ನು ಆಯ್ಕೆ ಮಾಡಿಕೊಂಡಿತು.

ಚೆನ್ನೈ ಸೂಪರ್ ಕಿಂಗ್ಸ್‌ನ ಗಾಯಕ್‌ವಾಡ್ 60 ರನ್‌ಗಳ ಕೊಡುಗೆ ನೀಡಿದರು ಮತ್ತು ಕಾನ್ವೆ ತಮ್ಮ ತಂಡದ (Chennai Super Kings 2023) ಸ್ಕೋರ್‌ಗೆ 40 ರನ್ ಸೇರಿಸಿದರು.

ಮೊದಲ ವಿಕೆಟ್‌ನಿಂದ 87 ರನ್‌ಗಳು ಹೊರಬಂದವು. ನಂತರದ ಯಾವೊಬ್ಬ ಆಟಗಾರನೂ ಅಂತಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 16 ಎಸೆತಗಳಲ್ಲಿ 22 ರನ್ ಅನ್ನು ಕೊನೆಯಲ್ಲಿ ರವೀಂದ್ರ ಜಡೇಜಾ ಗಳಿಸಿದರು.

ಅಂತಿಮವಾಗಿ, ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 173 ರನ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 172 ರನ್ ಗಳಿಸಿತು.

ಆದರೂ ತನ್ನ ಬ್ಯಾಟಿಂಗ್ ಶಕ್ತಿಯನ್ನು ಲೆಕ್ಕಾಚಾರ ಮಾಡಿದ ಗುಜರಾತ್ ಸುಲಭವಾಗಿ ಗೆಲ್ಲಬಹುದು. , ಚೆನ್ನೈನ ಬೌಲಿಂಗ್ ದಾಳಿಯಿಂದಾಗಿ ಗುಜರಾತ್ ಅಂತಿಮವಾಗಿ 20 ರನ್ ಮತ್ತು 157 ರನ್‌ಗಳಿಂದ ಸೋತಿತು.

ಚೆನ್ನೈ ತಂಡವನ್ನು ಪ್ರತಿನಿಧಿಸಿದ ದೀಪಕ್ ಚಹಾರ್, ಮಹೇಶ್ ತೀಕ್ಷನಾ, ರವೀಂದ್ರ ಜಡೇಜಾ, ಮಥೀಶ್ ಪಥಿರಣಾ ತಲಾ ಎರಡು ವಿಕೆಟ್ ಪಡೆದು ಗುಜರಾತ್ ತಂಡದಲ್ಲಿ ಪ್ರಮುಖ ಪಾತ್ರವಹಿಸಿದರು. ಗುಜರಾತ್ (Gujarat) ಪರ ಶುಭಮನ್ ಗಿಲ್ 42 ಮತ್ತು ರಶೀದ್ ಖಾನ್ 30 ರನ್ ಗಳಿಸಿದರು.

Exit mobile version