ರಜನೀಕಾಂತ್ (chetan post against rajinikanth) ಅವರ ಸ್ಟಾರ್ಡಮ್ /ತಾರಾಪಟ್ಟ ವರ್ತಮಾನದಲ್ಲಿ ‘ಐತಿಹಾಸಿಕ’ ಎನಿಸಬಹುದು; ಆದರೆ ಅವರ ಮಾತುಗಳು ಮತ್ತು ಕ್ರಿಯೆಗಳ ಮೂಲಕ
ನಿರ್ಣಯಿಸುವುದಾದರೆ ಅದು ಇತಿಹಾಸದಲ್ಲಿ ಅವರು ಅತ್ಯಲ್ಪ ಅಡಿಟಿಪ್ಪಣಿಯಂತೆ ಕಾಣುತ್ತಾರೆ ಎಂದು ಕನ್ನಡದ ನಟ ಚೇತನ್ ಅಹಿಂಸಾ (Chetan Ahisma) ಲೇವಡಿ ಮಾಡಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ರಜನಿಕಾಂತ್ ಅವರು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರ ಕಾಲಿಗೆ
ಬಿದ್ದು ಸಿಕೋಫಾನ್ಸಿ ತೋರಿದ್ದಾರೆ. ನಂತರ ರಜನಿಕಾಂತ್ ಅಯೋಧ್ಯೆಯಲ್ಲಿ (Ayodhya) ನಿರ್ಮಾಣ ಹಂತದಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಅವರು ದೇವಾಲಯವನ್ನು ‘ಐತಿಹಾಸಿಕ’ ಎಂದು
ಕರೆಯುತ್ತಾರೆ. ನಮ್ಮಲ್ಲಿ ಕೆಲವೇ ಕೆಲವರು ಮಾತ್ರ ನಿಜವಾಗಿಯೂ ಇತಿಹಾಸದ ಪರೀಕ್ಷೆಯಲ್ಲಿ ಏನು ನಿಲ್ಲುತ್ತದೆ ಎಂಬುದನ್ನು ಊಹಿಸಬಹುದು ರಜನೀಕಾಂತ್ ಅವರ ಸ್ಟಾರ್ಡಮ್ /ತಾರಾಪಟ್ಟ ವರ್ತಮಾನದಲ್ಲಿ
‘ಐತಿಹಾಸಿಕ’ ಎನಿಸಬಹುದು; ಆದರೆ ಅವರ ಮಾತುಗಳು ಮತ್ತು ಕ್ರಿಯೆಗಳ ಮೂಲಕ ನಿರ್ಣಯಿಸುವುದಾದರೆ ಅದು ಇತಿಹಾಸದಲ್ಲಿ ಅವರು ಅತ್ಯಲ್ಪ ಅಡಿಟಿಪ್ಪಣಿಯಂತೆ ಕಾಣುತ್ತಾರೆ ಎಂದು ಟೀಕಿಸಿದ್ದಾರೆ.
ಇನ್ನೊಂದು ಬರಹದಲ್ಲಿ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ನೂತನ ಪಠ್ಯಕ್ರಮವನ್ನು ಟೀಕಿಸಿರುವ ಅವರು, ಕರ್ನಾಟಕ ಕಾಂಗ್ರೆಸ್ ಪಕ್ಷವು ಪಠ್ಯಪುಸ್ತಕಗಳಲ್ಲಿ ಭಗತ್ ಸಿಂಗ್ (Bhagat Singh) ಮತ್ತು
ಹೆಡ್ಗೆವಾರ್ ಪಾಠಗಳನ್ನು ತೆಗೆದು ನೆಹರು ಅವರು ಮಗಳು ಇಂದಿರಾಗೆ ಬರೆದ ಪತ್ರಗಳೊಂದಿಗೆ ಬದಲಾಯಿಸಿದೆ ನೆಹರೂ ಮತ್ತು ಇಂದಿರಾ ಇಬ್ಬರೂ ಅನರ್ಹ ಡೈನಸ್ಟಗಳು/ರಾಜವಂಶಗಳು ಅವರು ಪ್ರಧಾನವಾಗಿ
ತಮ್ಮ ತಂದೆಯ ಹಣ/ಜಾತಿ/ಸವಲತ್ತು/ಸಂಪರ್ಕಗಳಿಂದಾಗಿ ಪ್ರಧಾನ ಮಂತ್ರಿಗಳಾದರು ಬಿಜೆಪಿಯು ಪಠ್ಯಪುಸ್ತಕಗಳಲ್ಲಿ ಹಿಂದುತ್ವವಾದಿ ಐಕಾನಗಳನ್ನು ಮುಳುಗಿಸಿದಂತೆ, ಕಾಂಗ್ರೆಸ್ ತನ್ನ ಮೊದಲ
ಕುಟುಂಬ ಮತ್ತು ಗಾಂಧಿಯವರೊಂದಿಗೆ ಅದೇ ರೀತಿ ಮಾಡುತ್ತಿದೆ/ಮಾಡುತ್ತದೆ (chetan post against rajinikanth) ಎಂದು ಟೀಕಿಸಿದ್ದಾರೆ.

ಇನ್ನು ಇತ್ತೀಚಿಗೆ ಜೈಲರ್ (Jailer) ಚಿತ್ರದ ಸಕ್ಸಸ್ ನಂತರ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ಖ್ಯಾತ ನಟ ರಜನಿಕಾಂತ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು
ಭೇಟಿಯಾಗಿದ್ದರು. ಈ ವೇಳೆ 72 ವರ್ಷದ ರಜನಿಕಾಂತ್ ಅವರು 52 ವರ್ಷದ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತ್ ಅವರ
ಈ ನಡೆಗೆ ಅನೇಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.