ಲಿಂಗಾಯತರು ಯಾವತ್ತೂ ಹಿಂದೂಗಳು ಅಥವಾ ವೀರಶೈವರು ಆಗಿರಲಿಲ್ಲ : ನಟ ಚೇತನ್

Actor

ಲಿಂಗಾಯತರು(Lingayats) ಯಾವತ್ತೂ ಹಿಂದೂಗಳು ಅಥವಾ ವೀರಶೈವರು ಆಗಿರಲಿಲ್ಲ ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್‌(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯ ಈಗ ಮತ್ತೆ ಸುದ್ದಿಯಲ್ಲಿದೆ, ರಂಭಾಪುರಿ ಶ್ರೀಗಳು ಸಿದ್ದರಾಮಯ್ಯನವರು(Siddaramaiah) ಇದರ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರೆ, ಮಾಜಿ ಸಿಎಂ ಅವರು ಕೇವಲ ವಿವರಿಸಿದರು ಎಂದು ಹೇಳುತ್ತಾರೆ.

https://fb.watch/f4t1RsD5LU/

ಶ್ರೀ ಸಿದ್ದರಾಮಯ್ಯ ಅವರ ಸರ್ಕಾರದಿಂದ ಆಗಿರುವ ಒಂದು ನಿಜವಾದ ಪರಿವರ್ತನಾ ಕ್ರಮ ಎಂದರೆ ಈ ಸಮರ್ಥನೀಯ ಆದೇಶ. ಲಿಂಗಾಯತರು ಯಾವತ್ತೂ ಹಿಂದೂಗಳು ಅಥವಾ ವೀರಶೈವರು ಆಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ಬರಹದಲ್ಲಿ ಎಎಪಿ(AAP) ಮತ್ತು ಕೇಜ್ರಿವಾಲ್(Aravind Kejrival) ಅವರನ್ನು ಟೀಕಿಸಿರುವ ಅವರು, ಎಎಪಿ ಮತ್ತು ಅದರ ಮುಖ್ಯಸ್ಥರಾದಂತಹ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯ ವಿಷಯಗಳ ಬಗ್ಗೆ ಮೌನವಾಗಿರುತ್ತಾರೆ.

ಹಿಂದಿನ ದೆಹಲಿ ಚುನಾವಣೆಗಳಲ್ಲಿ, ಸಿಎಎ-ಎನ್ಆರ್ಸಿ ಬಗ್ಗೆ ಮೌನವಾಗಿದ್ದರೆ. ಈಗ ಮುಂಬರುವ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ, 2002 ರಲ್ಲಿ ಸಾಮೂಹಿಕ ಅತ್ಯಾಚಾರ(Gang Rape) ಎಸಗಿದ್ದ 11 ಅಪರಾಧಿಗಳ ಬಿಡುಗಡೆಯ ವಿಷಯದಲ್ಲಿ ಮೌನವಾಗಿದ್ದಾರೆ. ಹೀಗಾಗಿ ಎಎಪಿ ಮತ್ತು ಅರವಿಂದ್‌ ಕೇಜ್ರಿವಾಲ್ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ : https://vijayatimes.com/pramod-muthalik-furious-statement/

ಇನ್ನು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅವರು, ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ ಎಂಬ ನಿಲುವನ್ನು ಹೊಂದಿದ್ದು, ಲಿಂಗಾಯತರು ಬಸವಣ್ಣನವರ ನಿಜವಾದ ಅನುಯಾಯಿಗಳು. ಲಿಂಗಾಯತ ಕನ್ನಡನಾಡಿದ ಸ್ವತಂತ್ರ್ಯ ಧರ್ಮ, ಇದು ಸಮಾನತೆಯನ್ನು ಪ್ರತಿಪಾದಿಸುತ್ತದೆ ಎಂದು ಪ್ರತಿಪಾದಿಸಿದ್ದರು.

Exit mobile version