ಆಮ್ ಆದ್ಮಿ ಪಕ್ಷವು ತನ್ನ ಈ ರೀತಿಯ ಬ್ರಾಹ್ಮಣ್ಯದ ಬೂಟಾಟಿಕೆಯನ್ನು ನಿಲ್ಲಿಸಬೇಕು : ನಟ ಚೇತನ್‌

chethan

Bengaluru : ಆಮ್‌ಆದ್ಮಿ ಪಕ್ಷ (Aam Aadmi Party) ಪ್ರತಿ ಅವಕಾಶದಲ್ಲೂ ಹನುಮಾನ್ ಚಾಲೀಸಾವನ್ನು ಪಠಿಸುತ್ತಾ ಬಾಬಾಸಾಹೇಬರನ್ನು ಅನುಸರಿಸುತ್ತದೆ ಎಂದು ಹೇಳುಕೊಳ್ಳುತ್ತದೆ.

ಆಮ್ ಆದ್ಮಿ ಪಕ್ಷವು ತನ್ನ ಈ ರೀತಿಯ ಬ್ರಾಹ್ಮಣ್ಯದ ಬೂಟಾಟಿಕೆಯನ್ನು ನಿಲ್ಲಿಸಬೇಕು ಎಂದು ನಟ (Actor) ಮತ್ತು ಸಾಮಾಜಿಕ ಹೋರಾಟಗಾರ (Social Activist) ಚೇತನ್‌(Chethan Ahimsa) ಅಭಿಪ್ರಾಯಪಟ್ಟಿದ್ದಾರೆ. https://youtu.be/INGJxZauZx0

ಈ ಕುರಿತು ತಮ್ಮ ಫೇಸ್‌ಬುಕ್‌ (Facebook) ಮುಖಪುದಲ್ಲಿ ಬರೆದುಕೊಂಡಿರುವ ಅವರು,

ಇದನ್ನೂ ಓದಿ : https://vijayatimes.com/army-dog-zoom-injured/

ಅಶೋಕ ವಿಜಯದಶಮಿಯಂದು ನಡೆಸಿದ ನವಯಾನ ದೀಕ್ಷೆಗಾಗಿ ದೆಹಲಿ (Chethan allegation over AAP) ಸಚಿವ ರಾಜೇಂದರ್ ಪಾಲ್ ಗೌತಮ್ ವಿರುದ್ಧ ಅರವಿಂದ್ ಕೇಜ್ರಿವಾಲ್ ‘ಅತ್ಯಂತ ಅಸಮಾಧಾನ’ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಗೌತಮ್ ಅವರು ಇದರ ಪರಿಣಾಮವಾಗಿ ರಾಜೀನಾಮೆ (Resign) ನೀಡಿದ್ದಾರೆ/ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ.

ಆಮ್ ಆದ್ಮಿ ಪಕ್ಷ– ಧಾರ್ಮಿಕ ತೀರ್ಥಯಾತ್ರೆಗಳಿಗೆ ತೆರಿಗೆದಾರರ ನಿಧಿಯನ್ನು ಬಳಸುತ್ತಾ ಮತ್ತು ಪ್ರತಿ (Chethan allegation over AAP) ಅವಕಾಶದಲ್ಲೂ ಹನುಮಾನ್ ಚಾಲೀಸಾವನ್ನು ಪಠಿಸುತ್ತಾ— ಬಾಬಾಸಾಹೇಬರನ್ನು ಅನುಸರಿಸುತ್ತದೆ ಎಂದು ಹೇಳುಕೊಳ್ಳುತ್ತದೆ. ಆಮ್ ಆದ್ಮಿ ಪಕ್ಷವು ತನ್ನ ಈ ರೀತಿಯ ಬ್ರಾಹ್ಮಣ್ಯದ ಬೂಟಾಟಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : https://vijayatimes.com/siddaramaiah-over-sc-st-reservation/

ಮತ್ತೊಂದು ಬರಹದಲ್ಲಿ ನವಯಾನದಲ್ಲಿ ಸಾವಿರಾರು ಜನರನ್ನು ಸೇರಿಸುವ ಮೂಲಕ ರಾಷ್ಟ್ರವ್ಯಾಪಿ ಸಮಾನತಾವಾದಿ ಚಳುವಳಿಯನ್ನು ನಡೆಸುತ್ತಿರುವ ದಿಲ್ಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರೊಂದಿಗೆ ನಾನು ಈಗಷ್ಟೇ ಮಾತನಾಡಿದೆ.

ಕಳೆದ ವರ್ಷ ಗೋವಾದಲ್ಲಿ, ಶ್ರೀ ಗೌತಮ್ ಅವರು, ಬಾಬಾಸಾಹೇಬರ ನವ ಬೌದ್ಧಧರ್ಮವನ್ನು ಎಲ್ಲೆಡೆ ಹರಡುವ ತಮ್ಮ ಕನಸನ್ನು ನನ್ನ ಬಳಿ ಹಂಚಿಕೊಂಡಿದ್ದರು.

ಈಗ ಅವರು ತಮ್ಮ ಮಾತಿಗೆ ತಕ್ಕಂತೆಯೇ ಬದುಕುತ್ತಿದ್ದಾರೆ ಎಂದು ನಟ ಚೇತನ್‌ ದೆಹಲಿ ಸಚಿವ ರಾಜೇಂದರ್ ಪಾಲ್ ಗೌತಮ್ ನಿಲುವನ್ನು ಬೆಂಬಲಿಸಿದ್ದಾರೆ.

Exit mobile version