ಬಸವ, ಅಂಬೇಡ್ಕರ್, ಪೆರಿಯಾರ್ ಅನುಯಾಯಿಗಳೆಲ್ಲರೂ ಸಿದ್ದರಾಮಯ್ಯ ನಮ್ಮವರಲ್ಲ ಎಂಬುದನ್ನು ಅರಿತುಕೊಳ್ಳಬೇಕು : ನಟ ಚೇತನ್

chethan

Bengaluru : ಬಸವ, ಅಂಬೇಡ್ಕರ್, ಮತ್ತು ಪೆರಿಯಾರ್ ಅವರ ಅನುಯಾಯಿಗಳೆಲ್ಲರೂ ಸಿದ್ದರಾಮಯ್ಯ(Siddaramaiah) ನಮ್ಮವರಲ್ಲ ಮತ್ತು ಎಂದಿಗೂ ನಮ್ಮವರಾಗಿಲ್ಲಾ ಎಂಬುದನ್ನು ಅರಿತುಕೊಳ್ಳಬೇಕು ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರು, ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವುದನ್ನು ವಿರೋಧಿಸುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅಸಮಾನತೆ ಮತ್ತು ಹಿಂಸೆಯನ್ನು ಅನುಮೋದಿಸುವ ಧಾರ್ಮಿಕ ಪಠ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಬೋಧಿಸುವುದು ಜಾತ್ಯತೀತತೆನೂ ಅಲ್ಲ, ನೈತಿಕತೆನೂ ಅಲ್ಲ.

ಬಸವ, ಅಂಬೇಡ್ಕರ್, ಮತ್ತು ಪೆರಿಯಾರ್ ಅವರ ಅನುಯಾಯಿಗಳೆಲ್ಲರೂ ಸಿದ್ದರಾಮಯ್ಯ ನಮ್ಮವರಲ್ಲ ಮತ್ತು ಎಂದಿಗೂ ನಮ್ಮವರಾಗಿಲ್ಲಾ ಎಂಬುದನ್ನು ಅರಿತುಕೊಳ್ಳಬೇಕು ಎಂದಿದ್ದಾರೆ. ಇನ್ನು ಸರ್ಕಾರ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಮಾಡಲು ಚಿಂತನೆ ನಡೆಸಿದೆ.

ಇದನ್ನೂ ಓದಿ : https://vijayatimes.com/bjp-point-out-congress/

ಸರ್ಕಾರದ ಈ ನಿರ್ಧಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivkumar) ಸ್ವಾಗತಿಸಿದ್ದರು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸರ್ಕಾರ ಭಗವದ್ಗೀತೆ ಜೊತೆಗೆ ಬೈಬಲ್, ಕುರಾನ್ಗೂ ಅವಕಾಶ ನೀಡಲಿ.

ಕುರಾನ್, ಬೈಬಲ್ಗೆ ಯಾಕೆ ಅವಕಾಶವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಗುಜರಾತ್ ಮಾದರಿಯಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಮಾಡಲು ಈಗಾಗಲೇ ನಿರ್ಧಾರವಾಗಿದ್ದು, ಸರ್ಕಾರ ಈಗಾಗಲೇ ಭಗವದ್ಗೀತೆಯ ಬೋಧನೆಗೆ ಸಂಬಂಧ ಸಮಿತಿ ರಚನೆ ಮಾಡಿದೆ.

ಯಾವ ತರಗತಿಗಳಿಗೆ ಯಾವ ಮಾದರಿಯಲ್ಲಿ ಭಗವದ್ಗೀತೆ ಭೋದನೆ ಮಾಡಬೇಕು? ಯಾವ ರೀತಿಯಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂದು ಸಮಿತಿ ವರದಿ ನೀಡಲಿದೆ.

Exit mobile version