ಮೀಸಲಾತಿ ವಿಚಾರ ; ಸಿದ್ದರಾಮಯ್ಯ ಅವರ ಮಾತಿನಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ : ನಟ ಚೇತನ್

Bengaluru : ಕರ್ನಾಟಕದ(Karnataka) ಬಿಜೆಪಿ ಸರ್ಕಾರವು(BJP Govt) ಮೀಸಲಾತಿಯನ್ನು ಹೆಚ್ಚಿಸಿದ ನಂತರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು  ಬಿಜೆಪಿಯು ‘ಮೀಸಲಾತಿ ವಿರೋಧಿ'(Chethan Over Reservation) ಎಂದು ಪ್ರತಿಪಾದಿಸಿದ್ದಾರೆ.

ಹೀಗಾಗಿ ಸಿದ್ದರಾಮಯ್ಯ ಅವರ ಮಾತಿನಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌(Chethan Over Reservation) ಅಭಿಪ್ರಾಯಪಟ್ಟಿದ್ದಾರೆ.

https://youtu.be/49tPYYDsOhY

ಈ ಕುರಿತು ತಮ್ಮ ಫೇಸ್‌ಬುಕ್‌ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, 

ಕರ್ನಾಟಕದ ಬಿಜೆಪಿ ಸರ್ಕಾರವು ಎಸ್‌.ಸಿ (15-17%) ಮತ್ತು ಎಸ್‌.ಟಿಗಳಿಗೆ (3-7%) ಮೀಸಲಾತಿಯನ್ನು ಹೆಚ್ಚಿಸಿದ ನಂತರ,

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು(Siddaramaiah) ಬಿಜೆಪಿಯು ‘ಮೀಸಲಾತಿ ವಿರೋಧಿ’ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ : https://vijayatimes.com/boy-dies-by-scorpian-bite/

ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ನಿರಂತರವಾಗಿ ಆರೋಪಿಸುತ್ತಿರುವ ಸಿದ್ದರಾಮಯ್ಯನವರು ಇಲ್ಲಿ ಸುಳ್ಳು ಹೇಳುತ್ತಿದ್ದಾರೆ.

ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷ(Congress Party) ಮೀಸಲಾತಿ ಹೆಚ್ಚಿಸಿಲ್ಲ ಆದರೆ ಬಿಜೆಪಿ ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಸಿದ್ದರಾಮಯ್ಯ ಅವರ ಮಾತಿನಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ ಎಂದು ನಟ ಚೇತನ್‌ ಟೀಕಿಸಿದ್ದಾರೆ.

ಇದೇ ವೇಳೆ ಅವರು ತಮ್ಮ ಇನ್ನೊಂದು ಬರಹದಲ್ಲಿ, ಗಾಂಧಿಯವರು ತಮ್ಮ ಜೀವನದುದ್ದಕ್ಕೂ, ಜಾತಿ ಮತ್ತು ಬ್ರಾಹ್ಮಣ್ಯವೇ ‘ಭಾರತೀಯ ಸಂಸ್ಕೃತಿಯ ಜೀವ’ ಎಂದು ಭಾವಿಸಿದ್ದರು.

ವಸಾಹತುಶಾಹಿ ವಿರುದ್ಧ ಬಳಸಿದ ನೈತಿಕ ತತ್ವಗಳನ್ನೇ ಗಾಂಧಿಯವರು ಆಂತರಿಕ ಅನ್ಯಾಯದ ವಿರುದ್ಧ ಹೋರಾಡುವಾಗ ಬಳಸಬೇಕು ಎಂಬುದು ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಆಶಯವಾಗಿತ್ತು.

ಆದರೆ ಗಾಂಧಿ ಹಾಗೆ ಮಾಡಲಿಲ್ಲ. ಆದ್ದರಿಂದ, ಅಂಬೇಡ್ಕರ್ ಮತ್ತು ಪೆರಿಯಾರ್ ಇತಿಹಾಸದಲ್ಲಿ ನಿಲ್ಲುತ್ತಾರೆ. ಗಾಂಧೀಯವರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅವರ ಈ ಹೇಳಿಕೆಗಳು ಇದೀಗ ತೀವ್ರ ಚರ್ಚೆ ಕಾರಣವಾಗಿವೆ.

ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Exit mobile version