ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ, ಕಟ್ಟಡ ಕಾರ್ಮಿಕರಿಗೆ 50,000 ಧನಸಹಾಯ ಘೋಷಣೆ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ

Chhattisgarh: ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ ಹಾಗೂ ಕಟ್ಟಡ ಕಾರ್ಮಿಕರಿಗೆ 50,000 ಆರ್ಥಿಕ ಸಹಾಯ ನೀಡುವುದಾಗಿ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್(Chhattisgarh cm announced schemes) ಅವರು ಇಂದು ಘೋಷಿಸಿದರು.

ಇಷ್ಟು ಮಾತ್ರವಲ್ಲ ರಾಯ್‌ಪುರ ವಿಮಾನ ನಿಲ್ದಾಣದ ಬಳಿ ಏರೋಸಿಟಿ(Aero city) ಸ್ಥಾಪನೆ,

ಕಾರ್ಮಿಕರಿಗೆ ವಸತಿ ನೆರವು ಯೋಜನೆ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆ ಸೇರಿದಂತೆ ಹಲವಾರು ಇತರ ಲಾಭದಾಯಕ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.


ಹಣಕಾಸು ವರ್ಷದಿಂದ ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ ನೀಡಲಾಗುವುದು ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭೂಪೇಶ್ ಬಘೇಲ್ ಅವರು,

ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆಯನ್ನು ಕಾಂಗ್ರೆಸ್ 2018ರ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿತ್ತು. ಈಗ ಅದನ್ನು ಈಡೇರಿಸಿದೆ ಅಂತ ಹೇಳಿದ್ರು.

ಗುರುವಾರ ಗಣರಾಜ್ಯೋತ್ಸವದ(Republic Day) ಅಂಗವಾಗಿ ಬಸ್ತಾರ್ ಜಿಲ್ಲೆಯ ಪ್ರಧಾನ ಕಛೇರಿ ಜಗದಲ್‌ಪುರದ ಲಾಲ್‌ಬಾಗ್ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬಘೇಲ್,

ರಾಯ್‌ಪುರ ವಿಮಾನ ನಿಲ್ದಾಣದ ಬಳಿ ಏರೋಸಿಟಿ, ವಸತಿಗೃಹ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಘೋಷಣೆ ಮಾಡಿದರು.

ಕಾರ್ಮಿಕರಿಗೆ ಸಹಾಯ ಯೋಜನೆ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆಗಳನ್ನು ಮುನ್ನೆಲೆಗೆ ತಂದಿದ್ದಾರೆ.

ಸದ್ಯ ಮುಂಬರುತ್ತಿರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಪ್ರಸ್ತಾಪಿಸಿದೆ.


ಮುಂದಿನ ಹಣಕಾಸು ವರ್ಷದಿಂದ ಅಂದ್ರೆ(2023-24) ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ(Chhattisgarh cm announced schemes) ಭತ್ಯೆ ನೀಡಲಾಗುವುದು ಎಂದು ಸಿಎಂ ಬಘೇಲ್ ಹೇಳಿದರು.

ಆದ್ರೆ, ನಿರುದ್ಯೋಗ ಭತ್ಯೆಯ ಮೊತ್ತವನ್ನು ನಿರ್ದಿಷ್ಟ ಪಡಿಸದೆ ಹೇಳಿರುವುದು ಗಮನಾರ್ಹ.

ಇದನ್ನೂ ಓದಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮದುವೆಗೆ ಒಪ್ಪಿಗೆ ನೀಡಿದ ಕರ್ನಾಟಕ ಹೈಕೋರ್ಟ್

ಮೊತ್ತವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಮತ್ತು ತಂಡವು ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಛತ್ತೀಸ್‌ಗಢ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬರುವ ಆರ್ಥಿಕ ವರ್ಷದಿಂದ ರಾಜ್ಯದ ಬಸ್ತಾರ್ ವಿಭಾಗ,

ಸುರ್ಗುಜಾ ವಿಭಾಗ ಮತ್ತು ಪರಿಶಿಷ್ಟ ಪ್ರದೇಶಗಳಲ್ಲಿ ಬುಡಕಟ್ಟು ಹಬ್ಬಗಳನ್ನು ಆಯೋಜಿಸಲು ಪ್ರತಿ ಗ್ರಾಮ ಪಂಚಾಯಿತಿಗೆ 10,000 ರೂ. ಅನುದಾನ ನೀಡಲಾಗುವುದು ಎಂದು ಘೋಷಣೆಯಲ್ಲಿ ತಿಳಿಸಿದರು.


ಇನ್ನು ಇದರೊಟ್ಟಿಗೆ ಛತ್ತೀಸ್‌ಗಢ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸತತ ಮೂರು ವರ್ಷಗಳ ಕಾಲ ನೋಂದಣಿ ಮಾಡಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ 50,000 ರೂ. ಆರ್ಥಿಕ ನೆರವು ನೀಡಲು ಮತ್ತೊಂದು ಯೋಜನೆಯನ್ನು ಪರಿಚಯಿಸಲಾಗುವುದು ಎಂದು ಹೇಳಿದರು.

Exit mobile version