ಮತ್ತೆ ದಡಾರ ಪತ್ತೆ: ದಕ್ಷಿಣ ಕನ್ನಡದಲ್ಲಿ ಅತಿ ವೇಗವಾಗಿ ಯುವಕರಿಗೆ ಹರಡುತ್ತಿದೆ ದಡಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳು ಹಾಗೂ ಯುವಜನರಲ್ಲಿ ಕೋವಿಡ್‌ಗಿಂತ ವೇಗವಾಗಿ ದಡಾರ ಪ್ರಕರಣಗಳು (chicken pox spreading – Mangalore) ಹಬ್ಬುತ್ತಿವೆ.

ಎರಡು ತಿಂಗಳಲ್ಲಿ 141 ಪ್ರಕರಣ (chicken pox spreading – Mangalore) ದಾಖಲಾಗುತ್ತಿದ್ದು ಆರೋಗ್ಯ

ಇಲಾಖೆಯ ಮಿಷನ್‌ ಇಂದ್ರಧನುಷ್ ಮೂಲಕ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ,ಪತ್ತೆಯಾದ ಪ್ರಕರಣಗಳಲ್ಲಿ 10 ತಿಂಗಳ ಹಸುಗುಸುವಿನಿಂದ ಹಿಡಿದು 33 ವರ್ಷದ ಯುವಕರವರೆಗೆ ಪ್ರಕರಣ

ಪತ್ತೆಯಾಗಿರುವ ದಾಖಲೆ ಇಲಾಖೆಯ ಬಳಿ ಇದೆ.

ಸ್ಟೀವನ್‌ ರೇಗೊ
Mangalore: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ ಮಕ್ಕಳಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಮಕ್ಕಳಲ್ಲಿ ಮಾತ್ರವಲ್ಲ ಯುವಜನತೆಯಲ್ಲೂ

ಕಾಣಿಸಿಕೊಳ್ಳುವ ಜೊತೆಗೆ ಇದರ ಹರಡುವಿಕೆಯ ಪ್ರಮಾಣ ಕೋವಿಡ್‌ಗಿಂತ ತೀವ್ರವಾಗಿದೆ. ಇದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ 81 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಕೇವಲ ಮೂವರಿಗೆ ದಡಾರ ಪ್ರಕರಣ ಸಾಬೀತಾಗಿತ್ತು. ಜೊತೆಗೆ ಎರಡು ರುಬೆಲ್ಲಾ ಪ್ರಕರಣ ಕಾಣಿಸಿಕೊಂಡಿತ್ತು.

ಆದರೆ ಈ ಬಾರಿ 221(ಜು.25ರವರೆಗೆ) ಮಂದಿಯಲ್ಲಿ 98 ಜನರಿಗೆ ದಡಾರ ದೃಢಪಟ್ಟರೆ, ಸೆ.4ರವರೆಗಿನ ಅಂಕಿ ಅಂಶ ಪ್ರಕಾರ 299 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 141 ಮಂದಿಯಲ್ಲಿ

ದಡಾರ ಪತ್ತೆಯಾಗಿದೆ. 8 ರುಬೆಲ್ಲಾ ಪ್ರಕರಣ ಕಾಣಿಸಿಕೊಂಡಿದೆ. ಕಳೆದ ವರ್ಷ ಮಂಗಳೂರು ಭಾಗದಲ್ಲಿ 40 ಮಂದಿಯಲ್ಲಿ ಇಬ್ಬರಲ್ಲಿ ದಡಾರ ಕಾಣಿಸಿಕೊಂಡರೆ, ಜು.25ರ ವರೆಗೆ 127 ಮಂದಿ ಆಸ್ಪತ್ರೆಗೆ

ದಾಖಲಾಗಿದ್ದು, 55 ಮಂದಿಯಲ್ಲಿ ದಡಾರ ಹಾಗೂ ಸೆ.4ರ ವರೆಗಿನ ಲೆಕ್ಕಾಚಾರದಲ್ಲಿ 176 ಮಂದಿಯಲ್ಲಿ 76 ದಡಾರ ಪ್ರಕರಣಗಳು ಕಾಣಿಸಿಕೊಂಡಿದೆ.

ಯುವಕರಲ್ಲೂ ದಡಾರ ಪತ್ತೆ
ಪತ್ತೆಯಾದ ಪ್ರಕರಣಗಳಲ್ಲಿ 10 ಶಿಶುವಿನಲ್ಲಿ ತಿಂಗಳ ಶಿಶುವಿನಿಂದ ಹಿಡಿದು 33 ವರ್ಷದ ಯುವಕನವರೆಗೆ ಪ್ರಕರಣ ಪತ್ತೆಯಾಗಿರುವ ದಾಖಲೆ ಇಲಾಖೆಯ ಬಳಿ ಇದೆ. ವಿಶೇಷವಾಗಿ ಕಾಯಿಲೆಗೆ

ಸಂಬಂಧಿಸಿದಂತೆ ರಕ್ತ ಮಾದರಿ ಪರೀಕ್ಷೆಯನ್ನು ರಾಜ್ಯದ ಎರಡು ಕಡೆ ಮಾತ್ರ ಮಾಡಲಾಗುತ್ತಿದೆ. ಇದರಿಂದ ವರದಿ ಬರುವಾಗ ವಿಳಂಬವಾಗುತ್ತಿದೆ. ಕಾಯಿಲೆ ಹರಡುವ ಪ್ರಮಾಣ ಕೂಡ ಹೆಚ್ಚುತ್ತಿದೆ.

ಹಾಸನದ ಎಚ್‌ಐಎಂಎಸ್‌ ಹಾಗೂ ಬೆಂಗಳೂರಿನ ಎನ್‌ಐವಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಮಂಗಳೂರಿನಲ್ಲಿ ಇದಕ್ಕೆ ಬೇಕಾಗಿರುವ ಲ್ಯಾಬ್‌ ಸ್ಥಾಪನೆಗೆ ಬೇಡಿಕೆ ಪಟ್ಟಿ ಸಲ್ಲಿಕೆಯಾಗಿದೆ ಎಂದು

ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಯಿ ಸಾಕಾಣಿಕೆಗೆ ಹೊಸ ರೂಲ್ಸ್ ಜಾರಿ ಮಾಡಿದ BBMP: ನಿಯಮ ಉಲ್ಲಂಘಿಸಿದ್ರೆ ದಂಡ..!

ದಡಾರ ಪ್ರಕರಣ ಹೆಚ್ಚುತ್ತಿದೆ. ಆದರೆ ಅದಕ್ಕೆ ಪೂರಕವಾಗಿ ಲಸಿಕೆ ತೆಗೆದುಕೊಳ್ಳಲು ಉದಾಸೀನ ಮಾಡುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ಎರಡು ಡೋಸ್‌ ಲಸಿಕೆ ಪಡೆದುಕೊಳ್ಳಬೇಕು ಎಂದು

ಜಾಗೃತಿ ಮುಡಿಸುತ್ತಿದೆ ಆದರೆ ಒಂದು ಡೋಸ್‌ ಪಡೆದು ಮತ್ತೊಂದು ಡೋಸ್‌ ಪಡೆಯಲುವಿಳಂಬ ಮಾಡುವುದರಿಂದ ದಡಾರ ಸಂಖ್ಯೆ ಹೆಚ್ಚಳವಾಗುತ್ತಿದೆ. ಲಸಿಕೆಗಾಗಿ ಅಭಿಯಾನ ಕೈಗೊಳ್ಳಲಾಗುತ್ತಿದೆ

ಎಂದು ದ.ಕ. ಆರೋಗ್ಯ ಇಲಾಖೆ, ಆರ್‌ಸಿಎಚ್‌ ಅಧಿಕಾರಿ ಡಾ.ರಾಜೇಶ್‌, ಹೇಳಿದ್ದಾರೆ.

Exit mobile version