ಕಾಫಿಯೊಳಗೆ ಚಿಕೋರಿ ಹಾಕೋದನ್ನು ಬ್ಯಾನ್ ಮಾಡಿ: ಕಾಫಿ ಮಂಡಳಿಯಿಂದ ಒತ್ತಾಯ

Health : ನಿಜವಾಗ್ಲೂ ಕಾಫಿ (Coffee) ಪ್ರಿಯರಿಗೆ ಇದೊಂದು ಕಹಿ ಸುದ್ದಿಯೇ. ಅದ್ರಲ್ಲೂ ದಿನ ಬೆಳಗಾದ್ರೆ ಚಿಕೋರಿಯುಕ್ತ ಖಡಕ್ ಕಾಫಿ ಕುಡಿಯುವವರಿಗೆ ಇದು ಕೆಟ್ಟ ನ್ಯೂಸೇ ಸರಿ. ಯಾಕಂದ್ರೆ ಕಾಫಿ ಜೊತೆ ಚಿಕೋರಿ (chicory root benefits) ಹಾಕುವುದನ್ನು ಬ್ಯಾನ್‌ ಮಾಡಿ ಅಂತ ಭಾರತೀಯ ಕಾಫಿ ಮಂಡಳಿಯೇ ಆಹಾರ ಸುರಕ್ಷತಾ ಇಲಾಖೆಗೆ ಮನವಿ ಮಾಡಿದೆ.

ಒಂದು ವೇಳೆ ನಿಮ್ಮಿಂದ ಬ್ಯಾನ್ ಮಾಡಲು ಸಾಧ್ಯವಾಗದಿದ್ದರೆ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಅನ್ನೋ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದೆ.

ಹಾಗಾದ್ರೆ ಭಾರತೀಯ ಕಾಫಿ ಮಂಡಳಿ ಕಾಫಿಯೊಳಗೆ ಚಿಕೋರಿ ಮಿಕ್ಸ್‌ ಮಾಡುವುದನ್ನು ಇಷ್ಟೊಂದು ಸ್ಟ್ರಾಂಗ್ ಆಗಿ ಯಾಕೆ ವಿರೋಧಿಸುತ್ತಿದ್ದಾರೆ? ಇದರಿಂದ ಆರೋಗ್ಯಕ್ಕೇನಾದ್ರೂ ಹಾನಿಯಾಗುತ್ತಾ? ತಿಳಿಯೋಣ ಬನ್ನಿ.


ಕಾಫಿಯೊಳಗೆ ಚಿಕೋರಿ ಬೆರೆಸೋದು ಹೊಸತೇನಲ್ಲ. ಶತಮಾನಗಳಿಂದಲೇ ಈ ಕಲಬೆರಕೆ ನಡೆಯುತ್ತಲೇ ಇದೆ.

ಎರಡನೇ ಮಹಾಯುದ್ಧದ ಬಳಿಕವಂತು ಕಾಫಿಗೆ ಚಿಕೋರಿ ಮಿಕ್ಸಿಂಗ್ ತುಂಬಾ ಜಾಸ್ತಿಯಾಯ್ತು.

ಇನ್ನು ಭಾರತದಲ್ಲಿ ಕಾಫಿ ಪುಡಿಗೆ ಶೇಕಡಾ 10-20ರಷ್ಟು ಚಿಕೋರಿ ಪುಡಿ ಮಿಕ್ಸ್‌ ಮಾಡಲು ಅವಕಾಶ ನೀಡಲಾಗಿತ್ತು.

ಹಾಗಾಗಿ ಜನ ಚಿಕೋರಿ ಮಿಶ್ರಿತ ಕಾಫಿಗೆ ಅಡಿಕ್ಟ್‌ ಆದ್ರು.

ಇದನ್ನೂ ಓದಿ : https://vijayatimes.com/banana-stem-benifits/

ಆದ್ರೆ ಈಗ ಇದೇ ಅಡಿಕ್ಷನ್ ಸಮಸ್ಯೆಯಾಗಿದೆ. ಕಾಫಿ ಪುಡಿ ಮಾರಟಗಾರರುg ಶೇಕಡಾ 10 ಬಿಟ್ಟು40- 50ರಷ್ಟು ಪ್ರಮಾಣದಷ್ಟು ಚಿಕೋರಿ ಮಿಕ್ಸ್‌ ಮಾಡ್ತಿದ್ದಾರೆ.

ಇದು ಅಪಾಯಕಾರಿ ಅಂತಿದೆ ಕಾಫಿ ಮಂಡಳಿ.


ಚಿಕೋರಿ ಅಂದ್ರೆ ಏನು?

ಈ ಕೆಳಗೆ ನೀಡಿರುವ ಚಿತ್ರದಲ್ಲಿ ಗಮನಿಸಿ ಇದುವೇ ಚಿಕೋರಿ ಬೇರು (Chicory root) , ಪಕ್ಕಾ ಮೂಲಂಗಿ ಥರಾ ಇದೆ. ಇದರ ಮೂಲ ಫ್ರಾನ್ಸ್‌.

ಕಾಫಿ ಕೊರತೆವುಂಟಾದಾಗ 1800ರಲ್ಲಿ ಇದನ್ನು ಕಂಡು ಹಿಡಿಯಲಾಯಿತು ಎನ್ನಲಾಗ್ತಿದೆ.

ನಮ್ಮ ದೇಶದಲ್ಲಿ ರಾಜಸ್ಥಾನದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಳೀತಾರೆ. ಇದೊಂದು ನೈಸರ್ಗಿಕ ಬೇರು.

ಚಿಕೋರಿ ಬೇರಿನ ಪುಡಿಯನ್ನು ಕಾಫಿಗೆ ಬೆರೆಸಿದ್ರೆ ಕಾಫಿಯ ಕಹಿ ಕಡಿಮೆಯಾಗುತ್ತೆ ಮತ್ತು ಕಾಫಿಪುಡಿ ಬೇಗ ಹಾಳಾಗಲ್ಲ.

ಚಿಕೋರಿ ಪುಡಿಯನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದ್ರೆ ಸಮಸ್ಯೆ ಏನು ಇಲ್ಲ. ಆದ್ರೆ ಮಿತಿಯನ್ನು ಮೀರಿದ್ರಿಂದ (chicory root benefits) ಸಾಕಷ್ಟು ಆರೋಗ್ಯ ಸಮಸ್ಯೆಗಳೂ ಉಂಟಾಗ್ತಿವೆ.


ಗರ್ಭಿಣಿಯರೇ ಜಾಗ್ರತೆ ! :
ಹೆಚ್ಚು ಪ್ರಮಾಣದಲ್ಲಿ ಚಿಕೋರಿ ಬೆರೆಸಿದ ಕಾಫಿಯನ್ನು ಗರ್ಭಿಣಿಯರು ಕುಡಿಯುವುದು ಅಪಾಯಕಾರಿ. ಇದರಿಂದ ರಕ್ತಸ್ರಾವವುಂಟಾಗಿ ಗರ್ಭಪಾತವೂ ಆಗಬಹುದು.

ಹಾಗಾಗಿ ಗರ್ಭಿಣಿಯರು ಚಿಕೋರಿ ಸೇವನೆಯಿಂದ ದೂರ ಉಳಿಯುವುದು ಲೇಸು.

ಇನ್ನು ಮಗುವಿಗೆ ಹಾಲುಣಿಸೋ ತಾಯಂದಿರೂ ಸಹ ಅತೀ ಹೆಚ್ಚು ಚಿಕೋರಿಯುಕ್ತ ಕಾಫಿ ಸೇವನೆಯನ್ನು ಮಾಡಬೇಡಿ.

ಇದನ್ನೂ ಓದಿ : https://vijayatimes.com/cattle-transportation-in-rajasthan/


ಚಿಕೋರಿಯಿಂದ ಅಲರ್ಜಿ ಸಮಸ್ಯೆ : ಚಿಕೋರಿ ಸೇವನೆ ಕೆಲವರಲ್ಲಿ ಅಲರ್ಜಿಯ ಸಮಸ್ಯೆವುಂಟು ಮಾಡಬಹುದು. ಅಸ್ತಮಾ (Asthma) ಇರುವವರು ಚಿಕೋರಿ ಸೇವನೆಯನ್ನು ತೊರೆಯುವುದೇ ಲೇಸು.

ಪಿತ್ತಕೋಶದ ಕಲ್ಲಿನ ಸಮಸ್ಯೆ: ಹೆಚ್ಚಿನ ಪ್ರಮಾಣದ ಚಿಕೋರಿ ಸೇವನೆ ಪಿತ್ತಕೋಶದ ಕಲ್ಲಿನ ಸಮಸ್ಯೆಗೆ ಕಾರಣ ಆಗಬಹುದು.

ಹೊಟ್ಟೆನೋವು :

ಹೊಟ್ಟೆ ಉಬ್ಬಿದಂತಾಗುವುದು ಮುಂತಾದ ತೊಂದರೆಗಳು ಬರಬಹುದು. ಕೊನೆಯದಾಗಿ ಚಿಕೋರಿ ಬೆರೆಸಿದ ಕಾಫಿ

ಕಷಾಯವು ಕೆಲವೇ ಗಂಟೆಗಳಲ್ಲಿ ಮೇಲ್ಬಾಗದಲ್ಲಿ ಬಿಳಿ ಬಿಳಿಯಾದ ನೊರೆ ಬಂದು ಹುಳಿ ಬರಲಾರಂಭಿಸುತ್ತದೆ.

ಇದನ್ನು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ, ತಲೆ ಸುತ್ತು ಸಮಸ್ಯೆಗಳು ಕಾಡುತ್ತವೆ.

ಈ ಎಲ್ಲಾ ಸಂಗತಿಗಳನ್ನು ಮನಗಂಡು ಕಾಫಿ ಮಂಡಳಿಯು ಕಾಫಿ ಪುಡಿಯೊಂದಿಗೆ ಚಿಕೋರಿ ಬೆರೆಸುವುದನ್ನು ಕೂಡಲೆ ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದೆ.

Exit mobile version