ಭಯೋತ್ಪಾದನೆ ಕಡಿವಾಣಕ್ಕೆ ಚೀನಾ ತಂತ್ರ!

Terror

ಇಸ್ಲಾಮಿಕ್(Islamic) ಭಯೋತ್ಪಾದನೆ(Terrorism) ಜಾಗತಿಕ ಸ್ವರೂಪ ಪಡೆದು ಅನೇಕ ರಾಷ್ಟ್ರಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಮೇರಿಕಾ(America) ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಇಸ್ಲಾಮಿಕ ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ಸೋತಿವೆ.

ಭಾರತವೂ ಕೂಡಾ ಅನೇಕ ದಶಕಗಳಿಂದ ಭಯೋತ್ಪಾದನೆಯ ವಿರುದ್ದ ಹೋರಾಡುತ್ತಿದ್ದು, ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಯಂತ್ರಿಸುವುದಕ್ಕಾಗಿ ಪರದಾಡುತ್ತಿದೆ. 70ರ ದಶಕದಲ್ಲಿ ಐರೋಪ್ಯ ದೇಶಗಳ ಉದಾರವಾದಿ ನೀತಿಯ ಪರಿಣಾಮ ಇಂದು ಐರೋಪ್ಯ ದೇಶಗಳನ್ನು ಕೂಡಾ ಇಸ್ಲಾಮಿಕ್ ಭಯೋತ್ಪಾದನೆ ಬಾಧಿಸುತ್ತಿದೆ. ಇಸ್ಲಾಮಿಕ ಭಯೋತ್ಪಾದನೆಗೆ ಕಡಿವಾಣು ಹಾಕಲು ಫ್ರಾನ್ಸ್‍ನಂತ ಬಲಿಷ್ಠ ದೇಶಗಳಿಗೂ ಸಾಧ್ಯವಾಗುತ್ತಿಲ್ಲ. ಇಸ್ಲಾಮಿಕ್ ಭಯೋತ್ಪಾನೆ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಚೀನಾ(China) ಮಾತ್ರ ಇಸ್ಲಾಮಿಕ್ ಭಯೋತ್ಪಾದನೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ.

ಇಂದಿಗೂ ಕಮ್ಯೂನಿಷ್ಟ ದೇಶ ಚೀನಾಗೆ ಇಸ್ಲಾಮಿಕ್ ಭಯೋತ್ಪಾದನೆ ಕಾಲಿಟ್ಟಿಲ್ಲ. ಅದೇ ರೀತಿ ಇಸ್ರೇಲ್ ಕೂಡಾ ಭಯೋತ್ಪಾದನೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಿದೆ. ಈ ಎರಡು ದೇಶಗಳು ಇಸ್ಲಾಮಿಕ್ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಸ್ಪಷ್ಟವಾದ ಮತ್ತು ಕಠಿಣ ನಿಲುವು ಹೊಂದಿವೆ. ಚೀನಾ ಮತ್ತು ಇಸ್ರೇಲ್‍ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಸುವ ಅನೇಕ ಆಚರಣೆಗಳಿಗೆ ನಿರ್ಬಂಧ, ವಿದೇಶಿ ಧಾರ್ಮಿಕ ನಾಯಕರಿಗೆ ನಿಷೇಧ, ಪಠ್ಯದಲ್ಲಿ ಧಾರ್ಮಿಕ ಬೋಧನೆಗೆ ಕಡಿವಾಣ,

ವಿದೇಶಿ ಹಣಕಾಸು ವ್ಯವಹಾರದ ಮೇಲೆ ನಿಗಾ, ಇಸ್ಲಾಮಿಕ್ ಕೇಂದ್ರಗಳ ಮೇಲೆ ತೀವ್ರ ನಿಗಾ ಮತ್ತು ದತ್ತಾಂಶ ಸಂಗ್ರಹ, ಭಯೋತ್ಪಾದನೆ ಪ್ರಕರಣಗಳ ತುರ್ತು ವಿಚಾರಣೆ ಮತ್ತು ಕಠಿಣ ಶಿಕ್ಷೆ, ಉದಾರವಾದಿ ನೀತಿಯಿಂದ ಇಸ್ಲಾಮಿಕ ಭಯೋತ್ಪಾದನೆಯನ್ನು ಹೊರಗಿಡುವ ಮೂಲಕ ಈ ಎರಡು ದೇಶಗಳು ಭಯೋತ್ಪಾದನೆಗೆ ಕಡಿವಾಣ ಹಾಕಿವೆ.
ಭಾರತವೂ ಕೂಡಾ ಇಸ್ಲಾಮಿಕ್ ಭಯೋತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಬೇಕಿದೆ. ಧರ್ಮದ ಹೆಸರಿನಲ್ಲಿ ಗಲಭೆ ನಡೆಸುವ ಗಲಭೆಕೋರರಿಗೆ ಕಠಿಣ ಶಿಕ್ಷೆ ನೀಡಬೇಕು. ಧಾರ್ಮಿಕ ಸ್ವಾತಂತ್ರ್ಯವನ್ನು ಬಳಸಿಕೊಂಡು ಕೋಮು ಪ್ರಚೋದಿಸುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.

ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿಯಂತ್ರಿಸದಿದ್ದರೆ ಮುಂದೊಂದು ದಿನ ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಅಪಾಯವಾಗಲಿದೆ.

Exit mobile version