ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚೀನಾ ಬೋಟುಗಳು (Chinese boats in India) ಮೀನುಗಾರಿಕೆ ನಡೆಸಿ ಸಮುದ್ರದ ಒಡಲು ಬರಿದಾಗಿಸುತ್ತಿವೆ. ಚೀನಾ ಬೋಟ್ಗಳು ಭಾರತೀಯ ಸಮುದ್ರದಲ್ಲಿರುವ
ವಿಡಿಯೋ ಇದು ಎಂದು ಹೇಳಲಾಗುತ್ತಿದೆ. ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರಿಂದ ಈ ವಿಡಿಯೋ ಸೆರೆಯಾಗಿದೆ. ಇದರ ಆಧಾರದಲ್ಲಿ ಭಾರತೀಯ ಕರಾವಳಿಗೆ (Indian coast) ಚೀನಾ ಹಡಗುಗಳ
ಲಗ್ಗೆ ಬಗ್ಗೆ ಅನುಮಾನ ಪಡಲಾಗಿದೆ. ಮೀನುಗಾರರೇ ಈ ಕುರಿತು ಕೋಸ್ಟ್ಗಾರ್ಡ್ಗೆ (Coast Guard) ಮಾಹಿತಿ ನೀಡಿದ್ದು, ಕೋಸ್ಟ್ ಗಾರ್ಡ್ ಅಧಿಕಾರಿಗಳು ಕೂಡ ಈ ಬಗ್ಗೆ ತನಿಖೆಯಲ್ಲಿ ತೊಡಗಿದ್ದಾರೆ.
Mangalore : ಕಳೆದ ಕೆಲ ದಿನಗಳಿಂದ ಕರ್ನಾಟಕದ ಕರಾವಳಿಯ ಕಡಲಲ್ಲಿ ವಿಪರೀತ ಮತ್ಸ್ಯಕ್ಷಾಮ (fish famine) ಉಂಟಾಗಿದೆ. ಈ ರೀತಿ ಮತ್ಸ್ಯಕ್ಷಾಮಕ್ಕೆ ಅಕ್ರಮವಾಗಿ ಭಾರತದ ಮೀನುಗಾರಿಕಾ ಪ್ರದೇಶ
ಪ್ರವೇಶಿಸಿ ಮೀನುಗಾರಿಕೆ ನಡೆಸುವ ಚೀನಾ ಬೋಟ್ಗಳೇ ಕಾರಣ ಎಂಬ ಆರೋಪ ಮೀನುಗಾರರಿಂದ ವ್ಯಕ್ತವಾಗಿದೆ. ಭಾರತೀಯ ಮೀನುಗಾರಿಕಾ ಪ್ರದೇಶದಲ್ಲಿ (Indian Fisheries Area) ಚೀನಾ ಬೋಟ್ಗಳ
ಮತ್ಸ್ಯಬೇಟೆಯ ವಿಡಿಯೋ ಕೂಡ ಜಾಲತಾಣಗಳಲ್ಲಿ (Chinese boats in India) ವೈರಲ್ ಆಗುತ್ತಿದೆ.
ಭಾರತದ ಸಮುದ್ರದಲ್ಲಿ ಚೀನಾ ಬೋಟ್ಗಳು ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿವೆ. ಅವೈಜ್ಞಾನಿಕ ಮೀನುಗಾರಿಕೆಯಿಂದ (Unscientific fishing) ಮೀನಿನ ಸಂತಾನೋತ್ಪತ್ತಿಗೆ ದೊಡ್ಡ ಹೊಡೆತ ಬೀಳುತ್ತಿದೆ.
ರಾತ್ರಿ ಲೈಟಿಂಗ್ ಮೀನುಗಾರಿಕೆ ನಿಷೇಧ ಇದ್ದರೂ ಚೀನಾದ ದೊಡ್ಡ ಬೋಟ್ಗಳು ಎಗ್ಗಿಲ್ಲದೆ ಮೀನುಗಾರಿಕೆಯಲ್ಲಿ ತೊಡಗಿವೆ. ಇದೇ ಕಾರಣದಿಂದ ಕರಾವಳಿಯ ಕಡಲಿನಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ.
ಸುಮಾರು 25 ವರ್ಷಗಳ ಬಳಿಕ ಸಮುದ್ರದಲ್ಲಿ ಭಾರೀ ಮೀನಿನ ಕೊರತೆ ಇದೇ ಮೊದಲ ಬಾರಿ ಕಂಡುಬಂದಿದೆ. ಈ ಹಿಂದೆ ಸಾಕಷ್ಟು ಮೀನು ಸಿಗುತ್ತಿದ್ದ ಈ ಕಡಲಿನಲ್ಲಿ ಈಗ ಏಕಾಏಕಿ ಮತ್ಸ್ಯಕ್ಷಾಮ
ತಲೆದೋರಿರುವುದು ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.
ಇದನ್ನು ಓದಿ : ಚುನಾವಣಾ ಬಾಂಡ್ ಹಗರಣ: ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದ ನಟ ಕಿಶೋರ್