ಸಿದ್ದರಾಮಯ್ಯನವರ ʼಉಚಿತʼ ಕೊಡುಗೆಗಳ ಕುರಿತು ಫೇಸ್ಬುಕ್ ಪೋಸ್ಟ್ ಮಾಡಿದ್ದಕ್ಕಾಗಿ ಶಾಲಾ ಶಿಕ್ಷಕನ ಅಮಾನತು!

Chitradurga : ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಸಿದ್ದರಾಮಯ್ಯ (Chitradurga school teacher suspended) ನೇತೃತ್ವದ ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ ಉಚಿತ ಕೊಡುಗೆಗಳ ಕುರಿತು

ಫೇಸ್‌ಬುಕ್‌ (Facebook) ಪೋಸ್ಟ್‌ ಮಾಡಿದ್ದಕ್ಕಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಿರುವ ಘಟನೆ (Chitradurga school teacher suspended) ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಶಾಂತಮೂರ್ತಿ ಎಂ ಜಿ ಎಂದು ಗುರುತಿಸಿಕೊಂಡಿರುವ ಶಾಲಾ ಶಿಕ್ಷಕ, ಸರ್ಕಾರ ಘೋಷಿಸಿರುವ ಉಚಿತ ಕೊಡುಗೆಗಳಿಂದ ರಾಜ್ಯಕ್ಕೆ ಹೊರೆಯಾಗಿದೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಎಸ್ ಎಂ ಕೃಷ್ಣ (S.M.Krishna) ಮುಖ್ಯಮಂತ್ರಿ ಆಗಿದ್ದಾಗ 3,590 ಕೋಟಿ ಸಾಲ ಇತ್ತು, ಧರಂ ಸಿಂಗ್, ಎಚ್ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ,

ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಕ್ರಮವಾಗಿ 15,635, 3,545, 25,653, 9,464 ಮತ್ತು 13, 464 ಕೋಟಿ ಸಾಲ ಇತ್ತು. ಆದರೆ ಸಿದ್ದರಾಮಯ್ಯನವರ (Siddaramaiah) ಅವಧಿಯಲ್ಲಿ ರಾಜ್ಯದ

ಸಾಲ 2,42,000 ಕೋಟಿ ಮುಟ್ಟಿತ್ತು ಎಂದು  ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದರು.

ಇದನ್ನೂ ಓದಿ : https://vijayatimes.com/2000-note-exchange/

ಇನ್ನು ಶಾಂತಮೂರ್ತಿ (Shanthamurthy) ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ನಂತರ, ಅವರು ರಾಜ್ಯದ ನಾಗರಿಕ ಸೇವಾ ನೀತಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ

ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಶಾಂತಮೂರ್ತಿ ಅವರ ಕಾರ್ಯವೈಖರಿ ಬಗ್ಗೆ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.

ರಾಜ್ಯ ಸರ್ಕಾರದ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಪ್ರಜಾಪ್ರಭುತ್ವ ಮತ್ತು ವಾಕ್‌ ಸ್ವಾತಂತ್ರ್ಯದ ಕುರಿತು ಭಾಷಣ ಮಾಡುವ ಕಾಂಗ್ರೆಸ್‌(Congress) ,

ಇದೀಗ ಸಾಮಾನ್ಯ ನಾಗರಿಕರ ವಾಕ್‌ಸ್ವಾತಂತ್ರ್ಯವನ್ನೇ ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರವನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಶಿಕ್ಷಕ ಶಾಂತಮೂರ್ತಿ ಅವರು ಅಂಕಿ-ಅಂಶಗಳ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಅದನ್ನೇ ಅಪರಾಧ ಎಂದು ಬಿಂಬಿಸಲಾಗುತ್ತಿದೆ  ಎಂದು ನೆಟ್ಟಿಗರು ಆಕ್ರೋಶ  ಹೊರಹಾಕಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ (Congress) 135 ಸ್ಥಾನಗಳನ್ನು ಗಳಿಸಿ, ಅಧಿಕಾರದ ಗದ್ದುಗೆಗೇರಿತು. ಬಿಜೆಪಿ (BJP) 66 ಸ್ಥಾನಗಳನ್ನು ಮತ್ತು ಜನತಾದಳ 19 ಸ್ಥಾನಗಳನ್ನು ಗಳಿಸಿದವು.

Exit mobile version