ಚಾಟ್‌ ಜಿಪಿಟಿಗೆ ಕಡಿವಾಣ ಹಾಕಲು ಕಾಲೇಜುಗಳು ನಿರ್ಧಾರ

Bengaluru : ಸದ್ಯ ಟೆಕ್ (Tech)ಜಗತ್ತಿನಲ್ಲಿ ಭಾರೀ ಸದ್ದು ಮಾಡುತ್ತಿರುವ ಚಾಟ್-ಜಿಪಿಟಿಯನ್ನು(colleges decided stop chatgpt) ಬಳಸದಂತೆ ಕಡಿವಾಣ ಹಾಕಲು ಅನೇಕ ಕಾಲೇಜುಗಳು ಮುಂದಾಗಿವೆ.

ಚಾಟ್ ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್ಫಾರ್ಮರ್(Chat generative pre trained transformer) ಎಂಬ ಹೆಸರಿನ ಈ ತಂತ್ರಜ್ಞಾನ ನವೆಂಬರ್ 2022 ರಲ್ಲಿ ಬಿಡುಗಡೆ ಮಾಡಿದ ಚಾಟ್ಬಾಟ್ ಆಗಿದೆ.

ಕೃತಕ ಬುದ್ದಿಮತ್ತೆಯ ಈ ತಂತ್ರಜ್ಞಾನ ಆಧಾರಿತ ಕಂಪನಿ ಜಗತ್ತಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ  ಈ ಕಂಪನಿ 29 ಶತಕೋಟಿ ಅಮೇರಿಕನ್ ಡಾಲರ್ ಮೌಲ್ಯಗಳಿಸಿದೆ.

ಓಪನ್ಎಐ (OpenAI)  ಕೃತಕ ಬುದ್ಧಿಮತ್ತೆ ಸಂಶೋಧನಾ ಕಂಪನಿ ಅಭಿವೃದ್ಧಿಪಡಿಸಿದ  ಈ ತಂತ್ರಜ್ಞಾನದ ಮೂಲಕ ನಾವು ನಮ್ಮ ಅನೇಕ ಕೆಲಸಗಳನ್ನು ಸುಲಭಗೊಳಿಸಬಹುದು. 

ಪತ್ರ ಬರವಣಿಗೆ, ಕವನ ಬರೆಯುವುದು, ಪ್ರೋಜೇಕ್ಟ್ ಬರವಣಿಗೆ, ಸಂಶೋಧನಾ ಲೇಖನ,

ಇ-ಮೇಲ್ ಪ್ರತಿಕ್ರಿಯೆ, ಪ್ರಬಂಧ ಸೇರಿದಂತೆ ಅನೇಕ ಕಾರ್ಯಗಳನ್ನು ಈ ಚಾಟ್-ಜಿಪಿಟಿ ಕೃತಕ ಬುದ್ದಿಮತ್ತೆಯನ್ನು ಉಪಯೋಗಿಸಿಕೊಂಡು (colleges decided stop chatgpt) ಮಾಡುತ್ತದೆ. 

ಈ ತಂತ್ರಜ್ಞಾನವನ್ನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಳಸಲು ಆರಂಭಿಸಿದರೆ, ಶಿಕ್ಷಕರು ನೀಡುವ ಎಲ್ಲ ಕಾರ್ಯಗಳನ್ನು ಈ ಚಾಟ್-ಜಿಪಿಟಿ ಮೂಲಕವೇ ವಿದ್ಯಾರ್ಥಿಗಳು ಮಾಡುತ್ತಾರೆ.

ಇದನ್ನೂ ಓದಿ: 2019 ರಿಂದ ಪ್ರಧಾನಿ ಮೋದಿಯ 21 ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ 22.76 ಕೋಟಿ ರೂ!

ಪ್ರೋಜೆಕ್ಟ್ ರಿಪೋರ್ಟ್(Project Report) ಸೇರಿದಂತೆ ಎಲ್ಲವನ್ನೂ ಈ ತಂತ್ರಜ್ಞಾನ ಬಳಸಿ ಮಾಡಿದರೆ, ವಿದ್ಯಾರ್ಥಿಗಳ ಕಲಿಕೆಗೆ ಇದು ಮಾರಕವಾಗಿದೆ. ಹೀಗಾಗಿ ಇದರ ಪರಿಣಾಮಗಳನ್ನು ಅರಿತಿರುವ ಬೆಂಗಳೂರಿನ ಅನೇಕ ಕಾಲೇಜುಗಳು ಈ ತಂತ್ರಜ್ಞಾನವನ್ನು ಬಳಸದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿವೆ.

ಚಾಟ್ ಜಿಪಿಟಿ ಅಂದ್ರೆ ಏನು?

ಚಾಟ್ ಜಿಪಿಟಿ ಎಂಬುದು ಒಂದು ಮಷಿನ್ ಲರ್ನಿಂಗ್ ಮಾಡೆಲ್(Machine Learning model). ಕೃತಕ ಬುದ್ಧಿಮತ್ತೆ ಆಧಾರಿತವಾದ ಈ ಚಾಟ್ ಜಿಪಿಟಿ ಅತ್ಯಾಧುನಿಕ ಚಾಟ್ ತಂತ್ರಜ್ಞಾನಗಳಿಗಿಂತ ಮುಂದಿದೆ.

ನಾನು ಕೇಳುವ ಪ್ರಶ್ನೆಗಳಿಗೆ ವಿವರವಾದ ಉತ್ತರಗಳನ್ನು ಕ್ಷಣಾರ್ಧದಲ್ಲೇ ಒದಗಿಸುತ್ತದೆ. ನಾವು ಹೇಳುವ ಕೆಲಸಗಳನ್ನು ಮಾಡುತ್ತದೆ. ನಮ್ಮ ಪ್ರಶ್ನೆಗಳಿಗೆ  ನಿಖರವಾಗಿ ಮತ್ತು ಸ್ಪಷ್ಟವಾಗಿ ನಮಗೆ ಪ್ರತಿಕ್ರಿಯಿಸುತ್ತದೆ.

ನಾವು ಕೇಳುವ ಎಲ್ಲ ವಿಭಾಗಗಳ ಪ್ರಶ್ನೆಗಳಿಗೆ ಈ ಚಾಟ್-ಜಿಪಿಟಿ ಉತ್ತರಿಸುತ್ತದೆ.  ನಿರ್ದಿಷ್ಟ ವಿಷಯ ಸೂಚಿಸಿ ಕತೆ ಬರೆದುಕೊಡುತ್ತೆ, ಕವಿತೆ ಬರೆಯಲು ಹೇಳಿದರೆ ಅದನ್ನೂ ಮಾಡುತ್ತದೆ, ಗಣಿತದ ಸೂತ್ರಗಳನ್ನು ಬಿಡಿಸುತ್ತದೆ.

ಲೆಕ್ಕಗಳನ್ನು ಮಾಡುತ್ತದೆ. ಆದರೆ ಈ ತಂತ್ರಜ್ಞಾನ ಮಕ್ಕಳ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರದ ಹೊರತಾಗಿ ಇತರ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನ ದೊಡ್ಡ  ಕ್ರಾಂತಿಯನ್ನೆ ಮಾಡಬಹುದು.
Exit mobile version