ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 105 ರೂಪಾಯಿ ಏರಿಕೆ ; ಎಲ್ಲೆಲ್ಲಿ ಹೆಚ್ಚಾಗಿದೆ?

ವಾಣಿಜ್ಯ ಉದ್ದೇಶದಲ್ಲಿ ಬಳಸಲಾಗುವ ಎಲ್.ಪಿ.ಜಿ ಸಿಲಿಂಡರ್ ಗ್ಯಾಸ್ ಬೆಲೆ 105 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆಯೂ ಕೂಡ ವಾಣಿಜ್ಯ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿತ್ತು. ಸದ್ಯ ಈಗ ಮತ್ತೊಮ್ಮೆ ವಾಣಿಜ್ಯ ಗ್ಯಾಸ್ ಬಳಕೆಗೆ ಹೊಡೆತ ಬಿದ್ದಿದೆ. ಹೌದು, ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ದರದಲ್ಲಿ 105 ರೂ. ಹೆಚ್ಚಳ ಮಾಡಿದೆ. ಈ ಸುದ್ದಿ ಹೋಟೆಲ್ ಮಾಲೀಕರಿಗೆ ಬಹಳ ಕಷ್ಟಕರವಾಗಿದೆ. ಹೋಟೆಲ್ ಮಾಲೀಕರು ಬೇರೆ ದಾರಿಯಿಲ್ಲದೆ ತಿಂಡಿ, ತಿನಿಸುಗಳ ಬೆಲೆಯನ್ನು ಕೂಡ ಹೆಚ್ಚಿಸುವ ಅನಿವಾರ್ಯತೆ ಕಾಡುತ್ತದೆ.

19 ಕೆಜಿ ಎಲ್.ಪಿ.ಜಿ ಸಿಲಿಂಡರ್ ಬೆಲೆಯನ್ನು ಮಾರ್ಚ್ 1 ರಿಂದ ದೆಹಲಿಯಲ್ಲಿ ಮತ್ತು ಕೊಲ್ಕತ್ತಾದಲ್ಲಿ 108 ರೂ. ಹೆಚ್ಚಿಸಲಾಗಿದೆ. ಇದು ಕೇವಲ ವಾಣಿಜ್ಯ ಬಿಟ್ಟರೇ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳಿಗೆ ಅನ್ವಯಿಸುವುದಿಲ್ಲ. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ಗೆ ಸದ್ಯ ಯಾವುದೇ ಏರಿಕೆ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಮಂಗಳವಾರದಿಂದ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2012 ರೂ. ಆಗಿದೆ. 5 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯೂ 27 ರೂ. ಏರಿಕೆಯನ್ನು ಕಂಡಿದೆ.

Exit mobile version