ಏಪ್ರಿಲ್ 1 ರಿಂದ ಎಲ್ಪಿಜಿ(LPG) ಸಿಲಿಂಡರ್(Cylinder) ಬೆಲೆ 250 ರೂ.ಗಳಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೊಮ್ಮೆ ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತೆ ಮಾಡಿದೆ. ಹೌದು, ಶುಕ್ರವಾರದಿಂದ ದೆಹಲಿಯಲ್ಲಿ19 ಕೆಜಿ ವಾಣಿಜ್ಯ ಸಿಲಿಂಡರ್(Commercial Cylinder) ಬೆಲೆ 2,253 ರೂ. ಅದೇ ಸಿಲಿಂಡರ್ ಈಗ ಕೋಲ್ಕತ್ತಾದಲ್ಲಿ 2,351 ರೂ., ಮುಂಬೈನಲ್ಲಿ 2,205 ರೂ. ಮತ್ತು ಚೆನ್ನೈನಲ್ಲಿ 2,406 ರೂ. ಏರಿಕೆ ಕಂಡಿದೆ.

ಈ ಹಿಂದೆ ಮಾರ್ಚ್ 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಮಾರ್ಚ್ 22 ರಂದು ಅದರ ಬೆಲೆಯನ್ನು 9 ರೂ.ಗಳಷ್ಟು ಕಡಿತಗೊಳಿಸಲಾಯಿತು. ಆದ್ರೆ, ಗೃಹಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಏರಿಕೆ ಮತ್ತು ಇಳಿಕೆ ಕಂಡುಬಂದಿಲ್ಲ. ದೇಶೀಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ ರೂ 949.50, ಕೋಲ್ಕತ್ತಾದಲ್ಲಿ ರೂ 976, ಮುಂಬೈನಲ್ಲಿ ರೂ 949.50 ಮತ್ತು ಚೆನ್ನೈನಲ್ಲಿ ರೂ 965.50 ಕ್ಕೆ ಲಭ್ಯವಿದೆ.

ಮಾರ್ಚ್ 22 ರಂದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಯಿತು. ಅಕ್ಟೋಬರ್ ಆರಂಭದ ನಂತರ ಗೃಹಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಇದು ಮೊದಲ ಬಾರಿಗೆ ಏರಿಕೆಯಾಯಿತು. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಸಿಕ ಪರಿಷ್ಕರಿಸಲಾಗುತ್ತದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ.