245 ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Karnataka: ಕರ್ನಾಟಕ ಲೋಕಸೇವಾ ಆಯೋಗವು 245 ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗಳ ನೇಮಕಾತಿಗೆ ಕಳೆದ ಸೆಪ್ಟೆಂಬರ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ (September) 30 ರವರೆಗೆ ಅವಕಾಶ ನೀಡಲಾಗಿತ್ತು. ಆಡಳಿತಾತ್ಮಕ ಕಾರಣಗಳಿಂದ ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೇಮಕಾತಿ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆ : ವಾಣಿಜ್ಯ ತೆರಿಗೆ ಇಲಾಖೆ
ಹುದ್ದೆ ಹೆಸರು : ವಾಣಿಜ್ಯ ತೆರಿಗೆ ಪರಿವೀಕ್ಷಕರು
ಹುದ್ದೆಗಳ ಸಂಖ್ಯೆ : 230+15 (ಹೈದ್ರಾಬಾದ್ ಕರ್ನಾಟಕ ಮೀಸಲು)
ವೇತನ ಶ್ರೇಣಿ : 33,450-62,600ರೂ.ಗಳು

ಶೈಕ್ಷಣಿಕ ಅರ್ಹತೆಗಳು : ಅರ್ಥಶಾಸ್ತ್ರ / ವಾಣಿಜ್ಯ / ಗಣಿತ ವಿಷಯದಲ್ಲಿ ಪದವಿ
ವಯೋಮಿತಿ : ಕನಿಷ್ಠ 21 ವರ್ಷ ಆಗಿರಬೇಕು. GM ಕೆಟಗರಿಗೆ – 35 ವರ್ಷ, OBC– 38 ವರ್ಷ, SC, ST, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ
ವಾಣಿಜ್ಯ ತೆರಿಗೆ ಪರಿವೀಕ್ಷಕರು : 31-10-2023
ವಾಣಿಜ್ಯ ತೆರಿಗೆ ಪರಿವೀಕ್ಷಕರು (ಕಲ್ಯಾಣ ಕರ್ನಾಟಕ ವೃಂದ) : 30-10-2023

ಪರೀಕ್ಷಾ ದಿನಾಂಕಗಳು
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ : 04-11-2023
ಸ್ಪರ್ಧಾತ್ಮಕ ಪರೀಕ್ಷೆ : 05-11-2023

ಅರ್ಜಿ ಶುಲ್ಕ ವಿವರ
GM ಅಭ್ಯರ್ಥಿಗಳಿಗೆ ರೂ.600.
OBC ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
SC / ST/ ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಅರ್ಜಿ ಸಲ್ಲಿಸುವ ವಿಧಾನ
1ನೇ ಹಂತ : ಪ್ರೊಫೈಲ್ ಕ್ರಿಯೇಟ್ (Profile Create)
2ನೇ ಹಂತ : ಅಪ್ಲಿಕೇಶನ್ ಸಬ್ಮಿಷನ್ (Application Submission)
3ನೇ ಹಂತ : ಶುಲ್ಕ ಪಾವತಿ

ಅಧಿಕೃತ ಮಾಹಿತಿಗಾಗಿ : www.kpsc.kar.nic.in ಗೆ ಭೇಟಿ ನೀಡಿ.

Exit mobile version