ಬಬಲೇಶ್ವರ್‌ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್‌ ಅರ್ಜಿ ; ಎಂ.ಬಿ.ಪಾಟೀಲ್‌ ಕೆಂಡಾಮಂಡಲ

Vijayapura : ಕಾಂಗ್ರೆಸ್‌ ಪಕ್ಷದ ಭಿನ್ನಮತ ಇದೀಗ ವಿಜಯಪುರ(Vijayapurta) ಜಿಲ್ಲೆಗೂ ಕಾಲಿಟ್ಟಿದೆ.  ಜಿಲ್ಲೆಯ ಪ್ರಬಲ ಕಾಂಗ್ರೆಸ್‌ ಶಾಸಕರಾದ ಎಂ.ಬಿ.ಪಾಟೀಲ್‌(MB Patil) ಮತ್ತು ಶಿವಾನಂದ ಪಾಟೀಲ್‌ ನಡುವೆ (competition in Babaleshwar Constituency) ಬಹಿರಂಗ ಸಮರ ಏರ್ಪಟ್ಟಿದೆ. 

ಬಸವನ ಬಾಗೇವಾಡಿ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಶಿವಾನಂದ ಪಾಟೀಲ್‌(Shivananda s Patil),

ಕಾಂಗ್ರೆಸ್‌ನ ಹಾಲಿ ಶಾಸಕ ಎಂ.ಬಿ.ಪಾಟೀಲ್‌ವಿರುದ್ದ ಸ್ಪರ್ಧಿಸಲು ಬಬಲೇಶ್ವರ್‌ ಕ್ಷೇತ್ರದಿಂದ ಟಿಕೆಟ್‌ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಸುದ್ದಿ ಇದೀಗ ಕೈ ಪಡೆಯಲ್ಲಿ ಭಾರೀ ಭಿನ್ನಮತ ಸೃಷ್ಟಿಸಿದೆ.‌

ಇನ್ನು ಎಂ.ಬಿ.ಪಾಟೀಲರು ಈ ಹಿಂದೆ ತಿಕೋಟದಿಂದ ಸ್ಪರ್ಧಿಸಿ ಲಿಂಗಾಯತ(Lingayath) ಪಂಚಮಸಾಲಿ ಸಮುದಾಯಕ್ಕೆ ಸೇರಿದ ಹಾಲಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲರ ವಿರುದ್ದ ಸೋತಿದ್ದರು.

ಮುಂದೆ 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಆದ ನಂತರ ತಿಕೋಟ ಕ್ಷೇತ್ರ ಮಾಯವಾಗಿ ಹೊಸದಾಗಿ ಬಬಲೇಶ್ವರ ಕ್ಷೇತ್ರ ಅಸ್ತಿತ್ವಕ್ಕೆ ಬಂತು.

ಆಗ ಎಂ.ಬಿ.ಪಾಟೀಲರು ಶಿವಾನಂದ ಪಾಟೀಲರನ್ನು ಪಕ್ಕದ ಬಸವನ ಬಾಗೇವಾಡಿ(Basavana Bagewadi) ಕ್ಷೇತ್ರಕ್ಕೆ ಕಳುಹಿಸಿದರು.

ಹೊಸದಾಗಿ ರಚಿತವಾಗಿದ್ದ ಬಬಲೇಶ್ವರ ಕ್ಷೇತ್ರದಲ್ಲಿ 2008ರಲ್ಲಿ ಎಂ.ಬಿ.ಪಾಟೀಲ್ ಸುಲಭವಾಗಿ ಜಯಗಳಿಸಿದರು.

ಆದರೇ ಪಕ್ಕದ ಬಸವನಬಾಗೇವಾಡಿಯಲ್ಲಿ ಎಸ್.ಕೆ.ಬೆಳ್ಳುಬ್ಬಿ ಎದುರು ಶಿವಾನಂದ ಪಾಟೀಲರು ಸೋಲುಂಡರು. 

ನಂತರ 2013 ಮತ್ತು 2018ರಲ್ಲಿ  ಶಿವಾನಂದ ಪಾಟೀಲ್‌ ಬಸವನ ಬಾಗೇವಾಡಿಯಿಂದ ಮತ್ತು ಎಂ.ಬಿ.ಪಾಟೀಲ್‌ ಬಬಲೇಶ್ವರದಿಂದ (competition in Babaleshwar Constituency) ಗೆದ್ದರು.

2013ರಲ್ಲಿ ಎಂ.ಬಿ.ಪಾಟೀಲರನ್ನು ಸಿದ್ದರಾಮಯ್ಯ(Siddaramaiah) ತಮ್ಮ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದರು.

ಆದರೆ ಅಂದು ಸಚಿವ ಸ್ಥಾನಕ್ಕೆ ಅರ್ಹವಾಗಿದ್ದು ಶಿವಾನಂದ ಪಾಟೀಲರು. ವಿಜಯಪುರ ಜಿಲ್ಲೆಯಲ್ಲಿ ಎಂ.ಬಿ.ಪಾಟೀಲರ ಕುಡು ಒಕ್ಕಲಿಗ ಸಮುದಾಯಕ್ಕಿಂತ ,

ಶಿವಾನಂದ ಪಾಟೀಲರ ಪಂಚಮಸಾಲಿ ಸಮುದಾಯ ಬಹಳ ಬಲಾಢ್ಯ ಹಾಗೂ ಪ್ರಭಾವಿ.

ಪಂಚಮಸಾಲಿ ಸಮುದಾಯದ  ನಾಯಕನಿಗೆ  ಸಚಿವ ಸ್ಥಾನ ಸಿಗದಿದ್ದಕ್ಕೆ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತಗೌಡ ಪಾಟೀಲ್‌(Yashwantha gowda Patil) ಕೂಡಾ ಶಿವಾನಂದ ಪಾಟೀಲ್‌ ಬೆಂಬಲಕ್ಕೆ ನಿಂತರು.

ಇದರ ಪರಿಣಾಮ ಶಿವಾನಂದ ಪಾಟೀಲ್‌ಗೆ ಆರೋಗ್ಯ ಸಚಿವ ಸ್ಥಾನ ಸಿಕ್ಕಿತು. ಹೀಗೆ ಅನೇಕ ದಶಕಗಳಿಂದ ವಿಜಯಪುರ ಜಿಲ್ಲೆಯಲ್ಲಿ ಶಿವಾನಂದ ಪಾಟೀಲ್‌ಮತ್ತು ಎಂ.ಬಿ.ಪಾಟೀಲ್‌ನಡುವೆ ಸಮರ ನಡೆಯುತ್ತಲೇ ಇದೆ.

ಆದರೆ ಈಗ ಬಹಿರಂಗವಾಗಿಯೇ ಶಿವಾನಂದ ಪಾಟೀಲ್‌ ಬಬಲೇಶ್ವರ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವ ಸವಾಲು ಹಾಕಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ತಲೆನೋವು ತಂದಿದೆ.

Exit mobile version