ಸಂಸ್ಕೃತ ಕಂಪ್ಯೂಟರ್‍ಗೆ ಸುಲಭವಾಗಿ ಅರ್ಥವಾಗುವ ಭಾಷೆ : ಡಾ. ಸುಬ್ರಮಣಿಯನ್ ಸ್ವಾಮಿ!

Dr subramanian swamy

ಸಂಸ್ಕೃತ ಭಾಷೆ(Sanskrit Language)ಅನೇಕ ವಿಶೇಷತೆಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಈಗಾಗಲೇ ಅನೇಕ ಸಂಶೋಧನೆಗಳು ವಿವರಿಸಿವೆ. ಸಂಸ್ಕೃತ ಭಾಷೆ ಕಂಪ್ಯೂಟರ್‍ಗೆ(Computer) ಸುಲಭವಾಗಿ ಅರ್ಥವಾಗುವ ಭಾಷೆ, ಹೀಗಾಗಿ ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆಯಲ್ಲಿ ಸಂಸ್ಕೃತ ಭಾಷೆಯನ್ನು ಬಳಸುವ ಕುರಿತು ಸಂಶೋಧನೆ ನಡೆದಿದೆ ಎಂದು ಬಿಜೆಪಿ ಸಂಸದ(BJP MP) ಡಾ. ಸುಬ್ರಮಣಿಯನ್ ಸ್ವಾಮಿ(Dr. Subramanian) ಹೇಳಿದರು.

ಮೈಸೂರಿನಲ್ಲಿ ಹಿಂದೂ ಪೋರಂ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತ ಭಾಷೆಯ ಮಹತ್ವವನ್ನು ಅನೇಕ ಸಂಶೋಧನೆಗಳು ಒತ್ತಿ ಹೇಳಿವೆ. ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ, ಸಂಸ್ಕೃತ ಭಾಷೆ ಕುರಿತು ಅಧ್ಯಯನ ನಡೆಸಿ, ಈ ಭಾಷೆ ಕೃತಕ ಬುದ್ದಿಮತ್ತೆಗೆ ಹೆಚ್ಚು ಸಹಕಾರಿ ಎಂದು ಹೇಳಿದೆ. ಬ್ರಿಟಿಷರ ಪ್ರಭಾವದಿಂದ ನಮ್ಮ ದೇಶದಲ್ಲಿ ಇಂಗ್ಲಿಷ್ ಭಾಷೆ ಹರಡಿತು. ಆದರೆ ಇಂಗ್ಲಿಷ್‍ಗಿಂತ ಸಂಸ್ಕೃತ ಶ್ರೇಷ್ಠ ಭಾಷೆಯಾಗಿದೆ ಎಂದರು.

ಇನ್ನು ಇದೇ ವೇಳೆ ಆರ್ಯ-ದ್ರಾವಿಡ ಕುರಿತು ಮಾತನಾಡಿದ ಅವರು, ಆರ್ಯ ಮತ್ತು ದ್ರಾವಿಡ ಎಂಬುದು ಎರಡು ನಿರ್ದಿಷ್ಟ ಜನಾಂಗಗಳಲ್ಲ. ದಕ್ಷಿಣ ಭಾರತದಲ್ಲಿದ್ದವರನ್ನು ದ್ರಾವಿಡರು ಎಂದು ಕರೆಯಲಾಯಿತು. ದ್ರಾವಿಡ-ಆರ್ಯ ಎಂಬುದು ಎರಡು ಜನಾಂಗಗಳು ಎಂಬುದು ಸುಳ್ಳು. ಇನ್ನು ಭಾರತದಲ್ಲಿರುವ ಹಿಂದೂ ಮತ್ತು ಮುಸ್ಲಿಮರ ಡಿಎನ್‍ಎ ಒಂದೇ ಆಗಿದೆ. ಈ ಕುರಿತು ಹೈದ್ರಾಬಾದ್‍ನ ಮೈಕ್ರೋಬಯಾಲಜಿ ಸಂಸ್ಥೆಯೊಂದು ಸುಧೀರ್ಘ ಅಧ್ಯಯನ ನಡೆಸಿದೆ. ಹಿಂದೂಗಳು ಮತ್ತು ಭಾರತೀಯ ಮುಸ್ಲಿಮರ ಡಿಎನ್‍ಎ ಒಂದೇ ಎಂಬ ಅಂಶ ಬೆಳಕಿಗೆ ಬಂದಿದೆ.

ಇನ್ನು ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಅವರಂತ ರಾಜಮನೆತನಗಳು ಎಂದಿಗೂ ಹೊರಗಿನವರ ಆಕ್ರಮಣವನ್ನು ಸಹಿಸಲಿಲ್ಲ. ಹೀಗಾಗಿಯೇ ಇಂದಿಗೂ ಭಾರತದಲ್ಲಿ ಶೇ.80ರಷ್ಟು ಹಿಂದೂಗಳಿದ್ದಾರೆ. ಮುಂದಿನ ದಿನಗಳಲ್ಲಿ ಕಾಶಿ ಮತ್ತು ಮಥುರಾ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುತ್ತೇವೆ ಎಂದರು.

Exit mobile version