ರಾಜ್ಯದಲ್ಲಿ 2 ಸರ್ವೆ ನಡೆಸಿದ ಬಿಜೆಪಿ-ಕಾಂಗ್ರೆಸ್ಗೆ ಗೊಂದಲ? ; ವ್ಯತ್ಯಾಸ ಹೀಗಿದೆ ನೋಡಿ!

Karnataka : 2023ರ ವಿಧಾನಸಭೆ ಚುನಾವಣೆ (Confusion of assembly elections) ಕಿಡಿ ಈಗಾಗಲೇ ಹತ್ತಿಕೊಂಡಿದ್ದು, ರಾಜ್ಯ ರಾಜಕೀಯ ಅಖಾಡದಲ್ಲಿ ಬಿಜೆಪಿ ,

ಕಾಂಗ್ರೆಸ್ , ಮತ್ತು ಜೆಡಿಎಸ್ (JDS) ಚುನಾವಣಾ ರಣಕಹಳೆಗೆ ಬಲಿಷ್ಠವಾಗಿ ಸಜ್ಜಾಗಿದೆ. ಸದ್ಯ ಬಸವರಾಜ್ ಬೊಮ್ಮಾಯಿ (Basavaraj Bommai) ನೇತೃತ್ವದ,

ರಾಜ್ಯ ಬಿಜೆಪಿ (Confusion of assembly elections) ಮತ್ತು ರಾಜ್ಯ ಕಾಂಗ್ರೆಸ್ ನಡುವೆ ಭಾರಿ ಗದ್ದಲ, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದೆ.

ಅತ್ತ ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರ 40% ಸರ್ಕಾರ, ಪಿಎಸ್ಐ (PSI) ಪರೀಕ್ಷೆ ಅಕ್ರಮ, ಗುತ್ತಿಗೆದಾರ ಸಂತೋಷ್ ಸಾವು, ಪೇ ಸಿಎಂ ಅಕ್ರಮ, ರಸ್ತೆ ನಿರ್ಮಾಣದಲ್ಲಿ ಅಕ್ರಮ ಹೀಗೆ ಹಲವು ಕಾರಣಗಳನ್ನು ಮುಂದಿಟ್ಟು ಬಿಜೆಪಿಗೆ ಹಿಡಿದ ಕನ್ನಡಿ ಎಂದು ಕಾಂಗ್ರೆಸ್ ನೇರ ಆರೋಪ ಎಸಗಿದೆ.

ಇತ್ತ ರಾಜ್ಯ ಬಿಜೆಪಿ, ಕಾಂಗ್ರೆಸ್ ತನ್ನ ತಪ್ಪನ್ನು ತಿಳಿಯದೇ ಬೇರೆಲ್ಲಾ ಕೆಲಸ ಮಾಡುವುದರಲ್ಲಿ ಮುಂದಿದೆ. ಸಿದ್ದರಾಮಯ್ಯ (Siddaramaih) ಹಾಗು ಡಿಕೆಶಿ ನಡುವಿನ ಜಿದ್ದನ್ನೇ ಬಗೆಹರಿಸಿಕೊಳ್ಳಲಾಗದ ನಾಯಕರು,

ಮುಂದೇನು ಮಾಡುವರು?, ತಮ್ಮ ಪಕ್ಷದ ದುರವಸ್ಥೆಯನ್ನು ಸರಿಪಡಿಸಿಕೊಳ್ಳಲಾಗದ ಪಕ್ಷ ಎಂದು ಆರೋಪಿಸಿದೆ.

ಇದನ್ನೂ ಓದಿ : https://vijayatimes.com/amazing-garden-of-india/

ಸದ್ಯ ಈ ಪೈಕಿ ಚುನಾವಣಾ ಅಂಗವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ತಮ್ಮದೇ ಆಂತರಿಕ ಸರ್ವೇ ನಡೆಸಿದೆ. ರಾಜ್ಯ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ 1 ವರ್ಷದ ಸರ್ಕಾರವನ್ನು ಪೂರ್ಣಗೊಳಿಸಿದಾಗ ಮೊದಲನೇ ಸರ್ವೆ ನಡೆಸಿತು.

ಆ ಸಮಯಕ್ಕೆ ಬಿಜೆಪಿಗೆ 80 ರಿಂದ 85 ಸ್ಥಾನ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿತು. ಆದ್ರೆ, ಈಗ ಬಿಜೆಪಿ ಪಕ್ಷ ಎರಡನೇ ಸರ್ವೆ ನಡೆಸಿದೆ.

ಈ ಸರ್ವೆಯಲ್ಲಿ 90 ರಿಂದ 95 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಬಿಜೆಪಿ ಸರ್ಕಾರಕ್ಕೆ ಚಿಂತೆಯ ಕಂತೆ ಹೆಗೆಲೇರಿದೆ.

ಇದರ ಮಧ್ಯೆ ಗೆಲುವಿನ ಲೆಕ್ಕಾಚಾರ ಹಾಕೊಂಡಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಗುರಿಯನ್ನು ಪ್ರಬಲವಾಗಿ ಹೊಂದಿದೆ. ಇನ್ನು ರಾಜ್ಯ ಕಾಂಗ್ರೆಸ್ ಇಲ್ಲಿಯವರೆಗೂ ಒಟ್ಟು ನಾಲ್ಕು ಸರ್ವೆ ನಡೆಸಿದೆ.

ಅದರಲ್ಲಿ ಮೊದಲ ಸರ್ವೆಯಲ್ಲಿ 64 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿತು,

https://fb.watch/hdA8u8i_wW/ ವಿಜಯ ಟೈಮ್ಸ್ ರಿಯಾಲಿಟಿ ಚೆಕ್!!! ಪೊಲೀಸರ ಅಧಿಕಾರ ದುರ್ಬಳಕೆಗೇ ಪಟ್ಟು ಬಿಡದೇ ದಂಡ ಹಾಕಿಸಿದ ವಿಜಯ ಟೈಮ್ಸ್ ತಂಡ.

ಎರಡನೇ ಸರ್ವೆಯಲ್ಲಿ 106 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದು ತಿಳಿದು ಬಂದಿದೆ. ಆದ್ರೆ, ಇದ್ಯಾವ ಲೆಕ್ಕಕ್ಕೂ ಕೆಪಿಸಿಸಿ ಅಧಿಕೃತ ಮುದ್ರೆ ಒತ್ತಿಲ್ಲ ಎಂಬುದು ಗಮನಾರ್ಹ!

ಒಟ್ಟಾರೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗೆಲುವಿನ ಲೆಕ್ಕಾಚಾರದ ಹಣಾಹಣಿ ಭರ್ಜರಿಯಾಗಿ ನಡೆಯುತ್ತಿದ್ದು, ಪೈಪೋಟಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದೇ ಹೇಳಬಹುದು.
Exit mobile version