Politics ; ಬೊಮ್ಮಾಯಿ ಅವರೇ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆನಿದೆ? : ಕಾಂಗ್ರೆಸ್‌

cm

Karnataka : ಉದ್ಯೋಗ ನೀಡಲಾಗದ 40% ಸರ್ಕಾರ ಮಂಜುರಾದ ಕೆಲವೇ ಕೆಲವು ನೇಮಕಾತಿಯಲ್ಲೂ ಅಕ್ರಮ ನಡೆಸಿದೆ. FDA, SDA, PSI, KPTCL, ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಎಲ್ಲಾದರಲ್ಲೂ ಅಕ್ರಮ ನಡೆಸಿದ ಸರ್ಕಾರಕ್ಕೆ ಬಡ ಅಭ್ಯರ್ಥಿಗಳು ಪೆನ್ನುಗಳ ಲಂಚ ನೀಡಲು ತಯಾರಾಗಿದ್ದಾರೆ.

ಬಸವರಾಜ ಬೊಮ್ಮಾಯಿ(Basavaraj Bommai) ಅವರೇ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆನಿದೆ? ಎಂದು ಕಾಂಗ್ರೆಸ್‌(Congress) ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌, 40% ಸರ್ಕಾರಕ್ಕೆ ಲಂಚ ಕೊಡಲು ರೊಕ್ಕವಿಲ್ಲ ನಮ್ಮ ಪಾಲಿನ ರೊಟ್ಟಿಯಾದರೂ ಕೊಡುತ್ತೇವೆ ಕೆಲಸ ಕೊಡಿ ಎಂಬುದು ಅಭ್ಯರ್ಥಿಗಳ ವೇದನೆ, ನಿವೇದನೆ ಎಲ್ಲವೂ.

ಅವರೇ, ಈ ರೊಟ್ಟಿಯ ಲಂಚದಲ್ಲಿ ಯುವಕರ ಬದುಕಿನ ಕನಸಿದೆ, ಭವಿಷ್ಯದ ಆತಂಕವಿದೆ, ಶ್ರಮವಿದೆ, ಪ್ರಾಮಾಣಿಕತೆಯಿದೆ. ಬಸವರಾಜ ಬೊಮ್ಮಾಯಿ ಇದನ್ನು ಪಡೆದಾದರೂ ಉದ್ಯೋಗ ನೀಡಿ.

ಲಂಚ ಪಡೆದು PSI ಪರಿಕ್ಷಾರ್ಥಿಗಳಿಗೆ ಬ್ಲೂಟೂತ್ ನೀಡಿದ 40% ಸರ್ಕಾರಕ್ಕೆ ಲಂಚ ಕೊಡಲಾಗದ ಅಭ್ಯರ್ಥಿಗಳು ಬ್ಲೂಟೂತ್ ಅನ್ನೇ ಲಂಚವಾಗಿ ಕೊಡ್ತಿದಾರೆ ಎಂದು ಲೇವಡಿ ಮಾಡಿದೆ.

ಇದನ್ನೂ ಓದಿ : https://vijayatimes.com/hindu-temple-being-targeted/

ಪವರ್ ಲೆಸ್ ಸಿಎಂಗೆ, ಅಭ್ಯರ್ಥಿಗಳು ಪವರ್ ಬ್ಯಾಂಕ್ ನೀಡಲು ತಯಾರಿದ್ದಾರೆ. ಅದನ್ನು ಪಡೆದಾದರೂ ಉದ್ಯೋಗ ನೀಡುವ ಪವರ್ ತೋರಿಸುವಿರಾ ಬಸವರಾಜ ಬೊಮ್ಮಾಯಿ ಅವರೇ? ನಿಮ್ಮ ‘ಜನಸ್ಪಂದನೆ’ ತೋರುವಿರಾ? ಲಕ್ಷಾಂತರ ಸರ್ಕಾರಿ ಹುದ್ದೆಗಳು ಖಾಲಿ ಇವೆ.

ಉದ್ಯೋಗಾಕಾಂಕ್ಷಿಗಳು ನೋಟಿಫಿಕೇಶನ್ಗಾಗಿ ಕಾಯುತ್ತಿದ್ದಾರೆ. ಮಂಜೂರಾದ ಕೆಲವೇ ಹುದ್ದೆಗಳು ಮಾರಾಟವಾಗುತ್ತಿವೆ. ಪೆನ್, ಪುಸ್ತಕಗಳೇ ಅಭ್ಯರ್ಥಿಗಳ ಆಸ್ತಿ. ಲಂಚವಿಲ್ಲದೆ ಕೆಲಸ ಮಾಡದ 40% ಸರ್ಕಾರಕ್ಕೆ ಅವುಗಳೇ ಲಂಚವಾಗಿ ನೀಡುತ್ತಿದ್ದಾರೆ. ಈ ಲಂಚ ಪಡೆದಾದರೂ ಕೆಲಸ ಕೊಡಿ ಬಸವರಾಜ ಬೊಮ್ಮಾಯಿ ಅವರೇ.

ಈ ಯುವಕರು ತಮ್ಮ ಕುಟುಂಬಸ್ಥರಿಗೆ ನೌಕರಿ ಪಡೆಯುವ ಭರವಸೆ ಕೊಟ್ಟು ಓದಿದ್ದಾರೆ, ಪೋಷಕರು ತಮ್ಮ ಮಗ ಉದ್ಯೋಗಸ್ಥನಾಗಿ ಮನೆಗೆ ಬೆಳಕಾಗುತ್ತಾನೆ ಎಂದು ಆಸೆ ಕಂಗಳಲ್ಲಿ ನೋಡ್ತಿದಾರೆ. ಭ್ರಷ್ಟ ಸರ್ಕಾರದಿಂದ ಈ ಯುವಕರು ಮನೆಯಲ್ಲಿ ಮುಖ ತೋರಿಸಲಾಗದ ಸ್ಥಿತಿಯಲ್ಲಿದ್ದಾರೆ.

ಇದನ್ನೂ ಓದಿ : https://vijayatimes.com/chemical-food/

ಬಸವರಾಜ ಬೊಮ್ಮಾಯಿ ಅವರೇ, ತಾವು ಇವರ ಗೋಳು ಕೇಳುವುದು ಯಾವಾಗ? ಎಂದು ಪ್ರಶ್ನಿಸಿದೆ. 40% ಸರ್ಕಾರದಲ್ಲಿ ಲಂಚವೇ ಸತ್ಯ, ಲಂಚಕ್ಕೇ ಪ್ರಾಶಸ್ತ್ಯ, ಲಂಚವೇ ದೇವರು, ಲಂಚವೇ ಸರ್ವಸ್ವ, ಲಂಚವೇ ಸರ್ವವ್ಯಾಪಿ, ನಿದ್ದೆ, ಊಟ ಬಿಟ್ಟು, ಸರ್ಕಾರಿ ನೌಕರಿಗಾಗಿ ಭವಿಷ್ಯ ಪಣಕ್ಕಿಟ್ಟು ಓದಿ ಪರೀಕ್ಷೆ ಬರೆದು ಉದ್ಯೋಗಾಕಾಂಕ್ಷಿಗಳು ಕಾಯ್ತಾ ಇದ್ದಾರೆ.

ಬೊಮ್ಮಾಯಿ ಅವರೇ. ಕೇಳಿಸಿಕೊಳ್ಳಿ, ಉದ್ಯೋಗಾಕಾಂಕ್ಷಿಗಳ ಬಳಿ ಪುಸ್ತಕ, ಪೆನ್ನು, ಭವಿಷ್ಯದ ಕನಸು ಬಿಟ್ಟರೆ ಬೇರೇನೂ ಇಲ್ಲ. ಸರ್ಕಾರಕ್ಕೆ ಲಂಚದ ಆಸೆ, ಕಮಿಷನ್ ಲಾಲಸೆ ಬಿಟ್ಟರೆ ಬೇರೇನೂ ಇಲ್ಲ. 40% ಸರ್ಕಾರ ನಡೆಸಿದ PSI ಅಕ್ರಮದಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ, ಬದುಕು ಛಿದ್ರವಾಗಿದೆ. ಇವರ ಆತಂತ್ರದ ಬದುಕಿಗೆ ಪರಿಹಾರವೇನು ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದೆ.

ಮಹೇಶ್.ಪಿ.ಎಚ್

Exit mobile version