ಮಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಪ್ರಸ್ತಾವನೆ ; ಒಪ್ಪಿಗೆ ವಿರೋಧಿಸಿದ ಕಾಂಗ್ರೆಸ್!

Mangaluru : ಛತ್ರಪತಿ ಶಿವಾಜಿ (Congress Disagree Shivaji Statue) ಮಹಾರಾಜರ ಸಂಘವು ಮಂಗಳೂರಿನಲ್ಲಿ ಸ್ವಂತ ಹಣದಲ್ಲಿ ಶಿವಾಜಿ  ಮಹಾರಾಜರ ಪ್ರತಿಮೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದೆ. ಮಂಗಳೂರು ಮಹಾನಗರ ಪಾಲಿಕೆಯೂ ಇದಕ್ಕೆ ಒಪ್ಪಿಗೆ ನೀಡಿದೆ.

ಆದರೆ, ಪಾಲಿಕೆ ಒಪ್ಪಿಗೆ ನೀಡಿದ್ದಕ್ಕೆ ಕಾಂಗ್ರೆಸ್‌ (Congress Disagree Shivaji Statue) ವಿರೋಧ ವ್ಯಕ್ತಪಡಿಸಿದೆ.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಪಂಪ್‌ವೆಲ್ ಜಂಕ್ಷನ್‌ನಲ್ಲಿರುವ ಇಂದಿರಾ ಕ್ಯಾಂಟೀನ್ (Indira Canteen) ಬಳಿ ಜಾಗ ನೀಡಲು ಪಾಲಿಕೆ ಒಪ್ಪಿಗೆ ನೀಡಿತ್ತು.

ಇದೇ ವೇಳೆ, ಶಿವಾಜಿ ಮಹಾರಾಜರಿಗಿಂತ ಮೊದಲು ಸ್ಥಳೀಯ ವೀರರ ಪ್ರತಿಮೆಗಳು ಬೇಕು ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಪೊರೇಟರ್‌ಗಳು ವಾದಿಸಿದರು.

ಇದನ್ನೂ ಓದಿ : https://vijayatimes.com/no-seperate-collages-says-cm/

ಇನ್ನು ಕಾಂಗ್ರೆಸ್ ಪ್ರತಿಮೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್, ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕಾಂಗ್ರೆಸ್ ಏಕೆ ವಿರೋಧಿಸುತ್ತಿದೆ ಎಂದು ನನಗೆ ತಿಳಿದಿಲ್ಲ. ಅವರು ಭಾರತದಾದ್ಯಂತ ಪರಿಚಿತ ವ್ಯಕ್ತಿ. ಅದೊಂದು ಪ್ರವಾಸಿ ತಾಣವಾಗಲಿದೆ.

ಇದನ್ನೂ ಓದಿ : https://vijayatimes.com/chetan-slams-rishab-shetty/

ಕೋಟಿ ಚೆನ್ನಯರಂತಹ ಸ್ಥಳೀಯ ವೀರರ ಪ್ರತಿಮೆಗಳನ್ನು ಮಾಡಿ ಎಂದು ಕಾಂಗ್ರೆಸ್ ಹೇಳುತ್ತದೆ. ಕೋಟಿ ಚೆನ್ನಯ್ಯ ಸರ್ಕಲ್ ಮಾಡಿದ ಕಾಂಗ್ರೆಸ್ನವರು, ಇವತ್ತು ಆ ಸರ್ಕಲ್ ಅವಸ್ಥೆ ನೋಡಿ. ನಾವು ಅದನ್ನು ಪುನಃ ಮಾಡುತ್ತಿದ್ದೇವೆ.

ಯಾರೇ ವಿರೋಧ ಮಾಡಿದರು ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ಕೂಡ ಪ್ರತಿಮೆಯನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಒಂದೆಡೆ ವೀರ್ ಸಾವರ್ಕರ್ (Veera Savrkar) ವಿರುದ್ಧ ಕಾಂಗ್ರೆಸ್ ಅಸಭ್ಯ ಭಾಷೆ ಬಳಸಿದರೆ,

ಮತ್ತೊಂದೆಡೆ ಮಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೋಧಿಸುತ್ತದೆ.

https://youtu.be/LNyZGCf7aoc ಮಣ್ಣಿಲ್ಲದೆಯೇ ಕೃಷಿ! ಬರಿ ನೀರು, ತೆಂಗಿನ ನಾರಿನಿಂದ ಕೃಷಿ

ಶಿವಾಜಿ ಮಹಾರಾಜರು ಕೇವಲ ರಾಷ್ಟ್ರದ ನಾಯಕರಲ್ಲ, ಅವರು ವಿಶ್ವದ ಅತ್ಯಂತ ದಕ್ಷ ಮತ್ತು ಕೆಚ್ಚೆದೆಯ ಯೋಧ. ಆತನೇ ನಮಗೆ ದೇವರು.

ನಮ್ಮ ದೇಶವನ್ನು ವಿದೇಶಿ ದಾಳಿಕೋರರಿಂದ ರಕ್ಷಿಸಿದ ನಮ್ಮ ಹಿಂದೂ ನಾಯಕರನ್ನು ಕಾಂಗ್ರೆಸ್ ಯಾವಾಗಲೂ ಏಕೆ ವಿರೋಧಿಸುತ್ತದೆ? ನಮ್ಮ ಮಹಾನ್ ನಾಯಕನ ಪ್ರತಿಮೆಯನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Exit mobile version