ಭಾರತದ ಇತಿಹಾಸ, ಕಾಂಗ್ರೆಸ್ ಇತಿಹಾಸ ಒಂದೇ : ರಾಜ್ಯ ಕಾಂಗ್ರೆಸ್

Bengaluru : ಕಾಂಗ್ರೆಸ್‌ ಸ್ಥಾಪನೆಗೊಂಡ ದಿನವನ್ನು ಉಲ್ಲೇಖಿಸಿ ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌(Congress Foundation Day), ಭಾರತದ ಇತಿಹಾಸ, ಕಾಂಗ್ರೆಸ್‌ ಇತಿಹಾಸ ಎರಡು ಒಂದೇ ಆಗಿದೆ ಎಂದು ಹೇಳಿದೆ.

ದೇಶವನ್ನು ದಾಸ್ಯಮುಕ್ತಗೊಳಿಸಲು ಸ್ಥಾಪನೆಯಾದ ಕಾಂಗ್ರೆಸ್ ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರಿಂದ ಸ್ವತಂತ್ರಕ್ಕಾಗಿ(Congress Foundation Day) ಹೋರಾಡಿತ್ತು.

ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡತನ, ಮೌಢ್ಯ, ಅನಕ್ಷರತೆ, ತಾರತಮ್ಯದ ವಿರುದ್ಧ ಹೋರಾಡಿದೆ. ಇಂದು ದ್ವೇಷ, ಮೂಲಭೂತವಾದದ ವಿರುದ್ಧ ಹೋರಾಡುತ್ತಿದೆ ಎಂದು ಟ್ವೀಟ್‌ನಲ್ಲಿ ಹೇಳಿದೆ.

ಇದನ್ನೂ ಓದಿ: https://vijayatimes.com/messi-gave-special-gift/

ಇನ್ನು ಕರ್ನಾಟಕ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ(Siddaramaiah), ಭಾರತವನ್ನು ದಾಸ್ಯದಿಂದ ಮುಕ್ತಗೊಳಿಸಲು ಸ್ಥಾಪನೆಗೊಂಡು,ಸ್ವಾತಂತ್ರ್ಯ ನಂತರ ಬಡವರು, ಶೋಷಿತರು, ಅವಕಾಶವಂಚಿತ ಜನರ ದನಿಯಾಗಿ, ಪ್ರಜಾಪ್ರಭುತ್ವದ ಕಾವಲುಗಾರನಾಗಿ, ದೇಶದ ಏಕತೆ ಮತ್ತು ಸಮಗ್ರತೆಯ ಪ್ರತಿಪಾದಕನಾಗಿ ನಿರಂತರ ಚಳವಳಿಯಂತೆ ಸಾಗಿ ಬಂದಿರುವ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಗೊಳಿಸೋಣ.

ಕಾಂಗ್ರೆಸ್ ಸಂಸ್ಥಾಪನಾ ದಿನದ ಶುಭಹಾರೈಕೆಗಳು ಎಂದು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಿಡಿ ಬೆಂಕಿಯಾಗಿ ಪರಿವರ್ತನೆಗೊಂಡಿದ್ದು, ರಾಜ್ಯ ಬಿಜೆಪಿ(State BJP) ಸರ್ಕಾರದ ಹಗರಣಗಳನ್ನು ಎತ್ತಿಹಿಡಿದು ಕಾಂಗ್ರೆಸ್‌ ಟೀಕಿಸುತ್ತಿದೆ.

ಇದೇ ಸಾಲಿನಲ್ಲಿ ಬಿಜೆಪಿ ಕೂಡ ಕಾಂಗ್ರೆಸ್‌ ಆರೋಪಗಳನ್ನು ತಳ್ಳಿಹಾಕಿ, ಕಾಂಗ್ರೆಸ್‌ ತಂತ್ರೋಪಾಯಗಳನ್ನು ಬಹಿರಂಗಪಡಿಸುವಲ್ಲಿ ನಿರತವಾಗಿದೆ.

ಸರಣಿ ಟ್ವೀಟ್‌ ಮುಖೇನ ಬಿಜೆಪಿ ಸರ್ಕಾರದ ಲೋಪದೋಷಗಳನ್ನು ಪ್ರತ್ಯೇಕವಾಗಿ ಟೀಕಿಸಿರುವ ಕಾಂಗ್ರೆಸ್‌, ಅತಿಥಿ ಶಿಕ್ಷಕರನ್ನು ಅನಾಥ ಶಿಕ್ಷಕರನ್ನಾಗಿಸಿದೆ ಭ್ರಷ್ಟ ಬಿಜೆಪಿ ಸರ್ಕಾರ.

ಜೈಲಿನ ಖೈದಿಗಳ ಭತ್ಯೆ ಏರಿಕೆ ಮಾಡುವ ಸರ್ಕಾರಕ್ಕೆ ಅತಿಥಿ ಶಿಕ್ಷಕರಿಗೆ ಸಮರ್ಪಕ ವೇತನ ನೀಡುವ ಮನಸ್ಸಿಲ್ಲ.

ಬಿಜೆಪಿ ಸರ್ಕಾರದಿಂದ ಕಂಗೆಟ್ಟವರು ಕಾಂಗ್ರೆಸ್ ರೂಪಿಸಿದ ನರೇಗಾ ಯೋಜನೆಯ ಆಸರೆ ಪಡೆದಿದ್ದಾರೆ.
ಇದು ನಮ್ಮ ಜನಪರ ನೀತಿಯ ಸಾರ್ಥಕತೆಗೆ ಸಾಕ್ಷಿ.

ಮತ್ತೊಂದು ಟ್ವೀಟ್‌ನಲ್ಲಿ, ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಸಾರಿಗೆ ನೌಕರರು,

ಇವರೆಲ್ಲ ಹೋರಾಟ ಮಾಡಿದರೂ ವೇತನ ಹೆಚ್ಚಳ ಮಾಡದ ಬಿಜೆಪಿ ಸರ್ಕಾರ ಖೈದಿಗಳ ಭತ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದೆ! ಹೊರಗೆ ರೌಡಿಗಳಿಗೆ ಮಣೆ, ಜೈಲೊಳಗಿನ ಖೈದಿಗಳಿಗೆ ಮನ್ನಣೆ, ಇದು ಬಿಜೆಪಿಯ ಕ್ರಿಮಿನಲ್‌ಗಳ ಮೇಲಿನ ಪ್ರೇಮ! ಎಂದು ಆರೋಪಿಸಿದೆ.

Exit mobile version