ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟ ಅಪ್ಪ-ಮಗ ; ಇಕ್ಕಟ್ಟಿಗೆ ಸಿಲುಕಿ ತಲೆಕೆಡಿಸಿಕೊಂಡ ಕಾಂಗ್ರೆಸ್‌ ನಾಯಕರು

Bengaluru : ಒಂದೇ ಕ್ಷೇತ್ರದ ಮೇಲೆ ಅಪ್ಪ-ಮಗ ಇಬ್ಬರೂ ಕಣ್ಣಿಟ್ಟಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಧರ್ಮ ಸಂಕಟಕ್ಕೆ ಕಾಂಗ್ರೆಸ್‌ (Congress leaders confused)ನಾಯಕರು ಸಿಲುಕಿದ್ದಾರೆ.

ಇನ್ನೊಂದೆಡೆ ಅಪ್ಪ-ಮಗ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಕೂಡಾ ತಯಾರಿ ನಡೆಸಿದ್ದು, ಇದಕ್ಕೂ ಕಾಂಗ್ರೆಸ್‌ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೌದು, ಮೈಸೂರು(Mysore) ಜಿಲ್ಲೆಯ ಟಿ.ನರಸೀಪುರ ವಿಧಾನಸಭಾ ಕ್ಚೇತ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಜಿ ಸಚಿವ ಮತ್ತು ಸಿದ್ದರಾಮಯ್ಯನವರ ಆಪ್ತ ಹೆಚ್.ಸಿ.ಮಹದೇವಪ್ಪ(HC Mahadevappa) ಮತ್ತು ಅವರ ಮಗ ಸುನೀಲ್‌ (Sunil Bose)ಬೋಸ್‌ ಇಬ್ಬರೂ ಕೂಡಾ ಟಿ.

ನರಸೀಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲು ಒಲವು ತೋರಿದ್ದಾರೆ. ಮಗನಿಗಾಗಿ ಮಹದೇವಪ್ಪ ಕ್ಷೇತ್ರ ತ್ಯಾಗ ಮಾಡ್ತಾರಾ ಅಥವಾ ಅಪ್ಪನಿಗಾಗಿ ಮಗ ಕ್ಷೇತ್ರ ತ್ಯಾಗ ಮಾಡ್ತಾನಾ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಕರ್ನಾಟಕದಲ್ಲಿ ತೆಲಂಗಾಣದಂತಹ ಯೋಜನೆಗಳನ್ನು ತರುತ್ತೇವೆ : ಹೆಚ್‌ಡಿಕೆ ಭರವಸೆ

ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀಪುರ(T Narasipura) ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಹೆಚ್.ಸಿ.ಮಹದೇವಪ್ಪ ಅವರು ಜೆಡಿಎಸ್‌(JDS) ಅಭ್ಯರ್ಥಿ ಅಶ್ವಿನ್‌ಕುಮಾರ್‌(Ashwin Kumar) ವಿರುದ್ದ ಸೋಲು ಕಂಡಿದ್ದರು.

ನಂತರ ಅವರು ಪಕ್ಕದ ನಂಜನಗೂಡು ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಆರಂಭದಲ್ಲಿ ನರಸೀಪುರ ಕ್ಷೇತ್ರವನ್ನು ಮಗ ಸುನೀಲ್‌ಬೋಸ್‌ಗೆ ಬಿಟ್ಟು,

ತಾನು ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಹೆಚ್.ಸಿ.ಮಹದೇವಪ್ಪ ಅನೇಕ ದಿನಗಳಿಂದಲೇ ತಯಾರಿ ನಡೆಸಿದ್ದರು.

ಆದರೆ ಇದೀಗ ನಂಜನಗೂಡು ಕ್ಷೇತ್ರದ ಮೇಲೆ ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಕಣ್ಣಿಟ್ಟಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಧ್ರುವನಾರಾಯಣ್‌ರಾಜ್ಯ ರಾಜಕೀಯಕ್ಕೆ ಬರಲು ತಯಾರಿ ನಡೆಸಿದ್ದಾರೆ.

ಹೀಗಾಗಿ ಮೀಸಲು ಕ್ಷೇತ್ರವಾಗಿರುವ ನಂಜನಗೂಡಿನಿಂದ ಸ್ಪರ್ಧೆ ಮಾಡಲು ಧ್ರುವನಾರಾಯಣ್‌ಮುಂದಾಗಿದ್ದಾರೆ.

ಮಹದೇವಪ್ಪ ಪುತ್ರ ಸುನೀಲ್ ಬೋಸ್ ಅನೇಕ ವರ್ಷಗಳಿಂದ ನರಸೀಪುರ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ನನಗೆ ಈ ಸಲ ಸ್ಪರ್ಧೆಗೆ(Congress leaders confused) ಅವಕಾಶ ಸಿಗದಿದ್ದರೆ ನನ್ನ ರಾಜಕೀಯ ಭವಿಷ್ಯ ಕಷ್ಟ ಎಂಬುದು ಸುನೀಲ್ ಬೋಸ್ ವಾದ.

ಇನ್ನೊಂದೆಡೆ ಅಪ್ಪ-ಮಗನಿಗೆ, ಅಕ್ಕಪಕ್ಕದ ಕ್ಷೇತ್ರಗಳನ್ನು ಕೊಡುವುದು ಬೇಡ ಎಂಬುದು ಕಾಂಗ್ರೆಸ್‌ ನಾಯಕರ ವಾದ.

ಯಾವುದಾದರು ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಈಗಾಗಲೇ ಹೆಚ್.ಸಿ.ಮಹದೇವಪ್ಪನವರಿಗೆ ಸೂಚನೆ ನೀಡಲಾಗಿದೆ.

ಹೀಗಾಗಿ ಮಗ ಸುನೀಲ್‌ಬೋಸ್‌ಗೆ ವಿಧಾನಸಭೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿ,

ನನಗೆ ಲೋಕಸಭೆಗೆ ಸ್ಪರ್ಧೆ ಮಾಡಲು ಅವಕಾಶ ನೀಡಿ ಎಂಬ ಸಂಧಾನ ಸೂತ್ರವನ್ನು ಹೆಚ್.ಸಿ.ಮಹದೇವಪ್ಪ ಕಾಂಗ್ರೆಸ್‌ವರಿಷ್ಠರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

Exit mobile version