ಕಾಂಗ್ರೆಸ್ ಪುಕ್ಸಟ್ಟೆ ಭಾಗ್ಯಗಳನ್ನು ನೀಡಿ ಕರ್ನಾಟಕವನ್ನು ದಿವಾಳಿ ಮಾಡುವ ಆಲೋಚನೆಯಲ್ಲಿದೆ

Karnataka: ಎಡಬಿಡಂಗಿ ಸಿದ್ಧಾಂತ ಪ್ರತಿಪಾದಿಸುವ ಕಾಂಗ್ರೆಸ್ ಪುಕ್ಸಟ್ಟೆ ಭಾಗ್ಯಗಳನ್ನು ನೀಡಿ ಕರ್ನಾಟಕವನ್ನು(congress simply giving offers) ದಿವಾಳಿ ಮಾಡುವ ಆಲೋಚನೆಯಲ್ಲಿದೆ.

ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ(pakisan), ಶ್ರೀಲಂಕಾ(sri lanka) ಆರ್ಥಿಕವಾಗಿ ದಿವಾಳಿಯಾಗಿವೆ. ಭಾರತದ ಆರ್ಥಿಕತೆ ಸಧೃಡವಾಗಿರುವುದು ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲವೇ? ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್‌ ನೀಡಿರುವ 200 ಯುನಿಟ್‌ ಉಚಿತ ವಿದ್ಯುತ್, ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳಿಗೆ 2000 ರೂಪಾಯಿ ಸಹಾಯಧನ ನೇರವಾಗಿ ನೀಡುವ ‘ಗೃಹಲಕ್ಷ್ಮಿ’ ಯೋಜನೆಗಳನ್ನು ಟೀಕಿಸಿರುವ   ಬಿಜೆಪಿ,

  ಕಾಂಗ್ರೆಸ್(Congress) ಎಂದಿಗೂ ತನ್ನ ಸಾಧನೆ ಮೂಲಕ ಮತ ಕೇಳುವ ಸಂಸ್ಕಾರವನ್ನು ಬೆಳೆಸಿಕೊಂಡಿಲ್ಲ.

ಇಂದಿರಾ ಗಾಂಧಿ(Indira gandhi) ಅಮೆರಿಕದಿಂದ ಉಚಿತವಾಗಿ ಬಂದ ಜೋಳವನ್ನೇ ಅಂದು 50 ಪೈಸೆಗೆ ಮಾರಾಟ ಮಾಡಿದ್ದರು.

ಇಂದು ಅವರ ಮೊಮ್ಮಗಳು ಪ್ರಿಯಾಂಕಾ ಗಾಂಧಿ(priyanka gandhi) ಕರ್ನಾಟಕಕ್ಕೆ ಬಂದು ಮಹಿಳೆಯರಿಗೆ 2,000 ರೂ. ಭರವಸೆ ನೀಡಿರುವುದು ಹಾಸ್ಯಾಸ್ಪದ ಎಂದು ಟ್ವೀಟ್‌ಮಾಡಿದೆ.

ಇನ್ನೊಂದು ಟ್ವೀಟ್‌ನಲ್ಲಿ(tweet),  ನಾ ನಾಯಕಿ ಎಂದು ರಾಜ್ಯಕ್ಕೆ ಬಂದ  ಪ್ರಿಯಾಂಕಾ ಗಾಂಧಿ ವಂಶಪಾರಂಪರ್ಯ ನಾಯಕತ್ವವನ್ನು ಉಳಿಸಿಕೊಳ್ಳಲು ಸ್ವಾಭಿಮಾನಿ ಕನ್ನಡಿಗರನ್ನು ಈ ಬಾರಿ ಅವಲಂಬಿಸಿದ್ದಾರೆ.

ರಾಹುಲ್‌ಗಾಂಧಿ(congress simply giving offers) ಉಪಯೋಗಕ್ಕಿಲ್ಲವಾಗಿರುವುದರಿಂದಲೇ ಬೋಗಸ್ ಭಾಗ್ಯದ ಆಮಿಷ ಒಡುತ್ತಿರುವುದು. ಕನ್ನಡಿಗರದ್ದು ಕೊಡುವ ಗುಣವೆಂಬುದು ಅವರು ಮರೆತಂತಿದೆ. 2013-18ರವರೆಗೂ ಕಾಂಗ್ರೆಸ್  ಸಿದ್ದರಾಮಯ್ಯ(siddaramaiah) ನೇತೃತ್ವದಲ್ಲಿ ಕರ್ನಾಟಕವನ್ನು ಕೊಳ್ಳೆ ಹೊಡಿದಿತ್ತು.

  ಕಾಂಗ್ರೆಸ್‌ನೀಡಿದ ದೌರ್ಭಾಗ್ಯಗಳ ಫಲವಾಗಿ ಇಂದು ವಿರೋಧ ಪಕ್ಷದ ಸ್ಥಾನದಲ್ಲಿದೆ. ಸಂಸತ್ತಿನಲ್ಲಿ ವಿಪಕ್ಷ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್‌, ಕರ್ನಾಟಕದಲ್ಲೂ ಈ ದುಸ್ಥಿತಿ ಎದುರಾಗುವ ಆತಂಕದಲ್ಲಿದೆ ಎಂದು ವಾಗ್ದಾಳಿ ನಡೆಸಿದೆ.

ಮತ್ತೊಂದು ಟ್ವೀಟ್‌ನಲ್ಲಿ,  ಕಾಂಗ್ರೆಸ್ ತನ್ನ ಏಳು ದಶಕಗಳ ಸಾಧನೆಯನ್ನು ಜನತೆಯ ಮುಂದಿಟ್ಟು ಮತ ಭಿಕ್ಷೆ ಕೇಳಬೇಕಿತ್ತು. ಅದರ ಬದಲು ಜನರಿಗೆ ಪೂರೈಸಲಾಗದ ಪೊಳ್ಳು ಭರವಸೆಗಳನ್ನು ಕೊಡುತ್ತಿದೆ. ಅಧಿಕಾರದ ಲಾಲಸೆಯಲ್ಲಿರುವ  ಡಿ.ಕೆ.ಶಿವಕುಮಾರ(DK Shiva kumar) ಸ್ವಾಭಿಮಾನಿ ಕನ್ನಡಿಗರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದೆ.

ಇದನ್ನೂ ಓದಿ: https://vijayatimes.com/chetan-statement-about-congress/

ಇನ್ನು ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್‌ ಅನೇಕ  ಭರವಸೆಗಳನ್ನು ನೀಡುತ್ತಿದೆ.

ಇದೀಗ ಮಹಿಳಾ ಮತದಾರರನ್ನು ಸೆಳೆಯುವ ದೃಷ್ಟಿಯಿಂದ  ಪ್ರಿಯಾಂಕಾ  ವಾದ್ರಾ ನೇತೃತ್ವದಲ್ಲಿ ʼನಾ ನಾಯಕಿʼ(Na nayaki) ಅಭಿಮಾನವನ್ನು ಆರಂಭಿಸಿದೆ. ಇದರ ಭಾಗವಾಗಿ  ಗೃಹಿಣಿಯರಿಗೆ ಪ್ರತಿ ತಿಂಗಳಿಗೆ 2000 ರೂಪಾಯಿ ಸಹಾಯಧನ ನೇರವಾಗಿ ನೀಡುವ ‘ಗೃಹಲಕ್ಷ್ಮಿ’ ಯೋಜನೆಯನ್ನು ಕಾಂಗ್ರೆಸ್‌ ಘೋಷಣೆ ಮಾಡಿದೆ.

Exit mobile version