ಬಿಜೆಪಿ ಒಮ್ಮೆಯೂ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ : ಕಾಂಗ್ರೆಸ್‌

Karnataka : ರಾಜ್ಯ ಬಿಜೆಪಿ (Congress Straight Allegation) ಪಕ್ಷದ ಪ್ರಮುಖ ಕಳ್ಳತನಗಳು. ಶಾಸಕರ ಕಳ್ಳತನ, ಕಮಿಷನ್ ಕಳ್ಳತನ,

ಸರ್ಕಾರಿ ಹುದ್ದೆಗಳ ಕಳ್ಳತನ, ಮತದಾರರ (Congress Straight Allegation) ಮಾಹಿತಿ ಕಳ್ಳತನ. ಬಿಜೆಪಿ ಒಮ್ಮೆಯೂ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ.

ಪ್ರಜಾಪ್ರಭುತ್ವ (Democracy) ವ್ಯವಸ್ಥೆಯನ್ನು ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು ಎಂದು ರಾಜ್ಯ ಕಾಂಗ್ರೆಸ್‌ (State Congress) ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ರಾಜ್ಯ ಬಿಜೆಪಿ ಪಕ್ಷದ ಪ್ರಮುಖ ಕಳ್ಳತನಗಳು. ಶಾಸಕರ ಕಳ್ಳತನ, ಕಮಿಷನ್ ಕಳ್ಳತನ, ಸರ್ಕಾರಿ ಹುದ್ದೆಗಳ ಕಳ್ಳತನ, ಮತದಾರರ ಮಾಹಿತಿ ಕಳ್ಳತನ. ಬಿಜೆಪಿ ಒಮ್ಮೆಯೂ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ.

ಇದನ್ನೂ ಓದಿ : https://vijayatimes.com/rishab-shetty-about-culture/

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು.  ಹಗರಣಗಳ ಬಗ್ಗೆ ಬಿಜೆಪಿ ವರಸೆಗಳು, ಮೊದಲು – ಅಕ್ರಮವೇ ನಡೆದಿಲ್ಲ ಎಂದು ನಿರಾಕರಿಸುವುದು, ಹಗರಣ ಹೊರಬಂದ ನಂತರ – ಸಣ್ಣ ಲೋಪ ಎಂಬಂತೆ ಮಾತಾಡುವುದು,

https://youtu.be/-vaB267p8Tc

ಹಗರಣದ ತೀವ್ರತೆ ಹೊರಬಂದಾಗ ಪ್ರಭಾವಿಗಳ ರಕ್ಷಣೆಗೆ ತಂತ್ರ ಹೂಡುವುದು, PSI ಅಕ್ರಮದಿಂದ ಹಿಡಿದು ಚಿಲುಮೆ ಹಗರಣದವರೆಗೂ  ಬಿಜೆಪಿ ನಡೆದುಕೊಂಡ ರೀತಿ ಇದು ಎಂದು ಟೀಕಿಸಿದೆ. ಇನ್ನು ಅಕ್ರಮ ನಡೆದೇ ಇಲ್ಲ ಎಂಬಂತೆ ಮಾತನಾಡುತ್ತಿದ್ದ  ಬೊಮ್ಮಾಯಿ ಅವರೇ,

ಇದನ್ನೂ ಓದಿ : https://vijayatimes.com/sc-verdict-opposed/

ಮತದಾರರ ಮಾಹಿತಿ ಕಳ್ಳತನದ ಅಕ್ರಮದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಅಮಾನತಾಗಿದ್ದು ಏಕೆ? ಸರ್ಕಾರದ ಹಸ್ತಕ್ಷೇಪ, ಬಿಜೆಪಿಯ ಹಿತಾಸಕ್ತಿ,

ಮುಖ್ಯಮಂತ್ರಿಗಳ ಸಹಕಾರ ಇಲ್ಲದೆ ಐಎಎಸ್ ಮಟ್ಟದ ಅಧಿಕಾರಿಗಳು ಚಿಲುಮೆಗೆ ಸಹಕರಿಸಲು ಸಾಧ್ಯವೇ? ದಮ್ಮು ತಾಕತ್ತು ಇದ್ದರೆ ಉತ್ತರಿಸಿ ಎಂದು ರಾಜ್ಯ ಕಾಂಗ್ರೆಸ್‌ ಸವಾಲು ಹಾಕಿದೆ.
Exit mobile version