Kerala : ಭಾರತ್ ಜೋಡೋ ಯಾತ್ರೆಗೆ ಕೇವಲ 2000 ಬದಲು 500 ರೂ. ಕೊಟ್ಟಿದ್ದಕ್ಕೆ ನನ್ನ ಅಂಗಡಿ ಧ್ವಂಸಗೊಳಿಸಿದ್ರು : ತರಕಾರಿ ವ್ಯಾಪಾರಿ

Congress

Kerala : ಕೇರಳದ ಕೊಲ್ಲಂನಲ್ಲಿ ಕಾಂಗ್ರೆಸ್ ಕಾರ್ಯಕರ್ತರು (Congress Workers) ತರಕಾರಿ ಅಂಗಡಿ ಮಾಲೀಕರಿಗೆ ಬೆದರಿಕೆ ಹಾಕಿದ್ದಲ್ಲದೇ ತರಕಾರಿ (Vegetable) ವ್ಯಾಪಾರಿಯ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ನಡೆಸುತ್ತಿರುವ ಭಾರತ್ ಜೋಡೋ(Bharat Jodo) ಯಾತ್ರೆಗೆ ಪಕ್ಷದ ಕಾರ್ಯಕರ್ತರು ಬ್ಯಾನರ್ ಹಿಡಿದು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ವ್ಯಾಪಾರಿಯೊಬ್ಬರ ಬಳಿ 2,000 ರೂ. ನೀಡಲು ಕೇಳಿದ್ದಾರೆ.

ಇದನ್ನೂ ಓದಿ : https://vijayatimes.com/putin-laughs-during-meeting-with-pak-cm/

ಆದ್ರೆ, ಅಂಗಡಿ ಮಾಲಿಕ ಕೇವಲ 500 ರೂ. ಕೊಟ್ಟು ಕಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಕಾರ್ಯಕರ್ತರು ತರಕಾರಿ ವ್ಯಾಪಾರಿಯ ಅಂಗಡಿಯ ತರಕಾರಿಗಳನ್ನು ರಸ್ತೆಗೆ ಎಸೆದು,

ಹಲ್ಲೆ ಮಾಡಲು ಯತ್ನಿಸಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಂಗಡಿ ಮಾಲಿಕ ಆರೋಪಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ನಿಧಿ ಸಂಗ್ರಹದ ಹೆಸರಿನಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಮತ್ತು ನನ್ನ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರು, ಅವರು 2,000 ರೂ. ಕೇಳಿದರು.

ಆದರೆ ನಾನು ಕೇವಲ 500 ರೂ. ನೀಡಬಹುದು ಎಂದು ಅಂಗಡಿ ಮಾಲಿಕ ಎಸ್. ಫವಾಜ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ನನ್ನ ಅಂಗಡಿ ಮತ್ತು ನನ್ನ ಗ್ರಾಹಕರನ್ನು ಕೂಡ ಅವಮಾನಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನನಗೆ ಕೊಲೆ ಬೆದರಿಕೆ ಹಾಕಿದ್ದು, ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದರು ಎಂದು ಫವಾಜ್ ಆರೋಪಿಸಿದ್ದಾರೆ.

ತನ್ನ ಅಂಗಡಿಯನ್ನು ಧ್ವಂಸ ಮಾಡಿದ ಐದು ಜನರಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಅನೀಶ್ ಖಾನ್ ಕೂಡ ಸೇರಿದ್ದಾರೆ ಎಂದು ಫವಾಜ್ ಹೇಳಿದ್ದಾರೆ.

ವೀಡಿಯೊ ವೈರಲ್ ಆದ ನಂತರ, ಕಾಂಗ್ರೆಸ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಕೃತ್ಯವನ್ನು “ಫ್ರಿಂಜ್ ಎಲಿಮೆಂಟ್ಸ್” ನಿಂದ ಮಾಡಲಾಗಿದೆ ಮತ್ತು ಪಕ್ಷವು ಕಠಿಣ ಕ್ರಮ ಕೈಗೊಂಡಿದೆ ಎಂದು ತಿಳಿಸಿದೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ವರ್ಷಗಳಿಂದ ಕ್ರೌಡ್‌ಫಂಡಿಂಗ್ ಮಾಡುತ್ತಿದೆ.

ರಾಜಕೀಯವು ತಳಮಟ್ಟದಲ್ಲಿ ಸಣ್ಣ ದೇಣಿಗೆಗಳ ಮೇಲೆ ನಡೆಯುತ್ತದೆ. ಆದರೆ ಈ ರೀತಿ ಆಗಬಾರದಿತ್ತು! ಪಿಸಿಸಿ ಅಧ್ಯಕ್ಷರು ತಕ್ಷಣವೇ ಅನುಕರಣೀಯ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/jiona-chana-is-worlds-largest-family/

ಘಟನೆಯಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ತಿಳಿಸಿದ್ದಾರೆ.

Source : India Today

Exit mobile version