ಸಚಿವ ಸ್ಥಾನಕ್ಕಾಗಿ ಲಾಬಿ ಶುರು: ಗುಂಪು ಗುಂಪಾಗಿ ದೆಹಲಿಗೆ ಪ್ರಯಾಣ ಬೆಳೆಸಿದ ಶಾಸಕರು

Bengaluru : ಕರ್ನಾಟಕದ ಆಡಳಿತ ನಡೆಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ (Consultation with High Command) ಮತ್ತು ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದೆ.

ನಾಳೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ (DCM) ಡಿಕೆ ಶಿವಕುಮಾರ್‌ ಅವರು ಮೇ 20ರಂದು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಆದ್ರೆ ಈಗ ಕುತೂಹಲ ಮೂಡಿಸಿರುವುದೇನಂದ್ರೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವ ಭಾಗ್ಯ ಯಾರಿಗೆ ಎಂಬುದು. ಸಿದ್ದರಾಮಯ್ಯ ಅವರು ಇಂದು

(ಮೇ 19) ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಲಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದನ್ನು (Consultation with High Command) ನಿರ್ಧರಿಸಲಿದ್ದಾರೆ.

ಇದಲ್ಲದೇ ಸಿದ್ದರಾಮಯ್ಯ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಗುಂಪು ಗುಂಪಾಗಿ ದೆಹಲಿಗೆ (Delhi) ಪ್ರಯಾಣ ಬೆಳೆಸಿದ್ದಾರೆ. ಸಚಿವ ಸಂಪುಟ ರಚನೆಗಾಗಿ ಸಿದ್ದರಾಮಯ್ಯ ಹಾಗೂ

ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದು, ಸಚಿವರಾಗುವ ಆಸೆ ಹೊತ್ತಿರುವ ಶಾಸಕರು ಬೆಳ್ಳಂಬೆಳಗ್ಗೆಯೇ ಮೂರು ಪ್ರತ್ಯೇಕ ತಂಡಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ : https://vijayatimes.com/gujarat-titans-entered-playoffs/

ಇಂದು ಬೆಳಗ್ಗೆ 6 ರಿಂದ 7 ಗಂಟೆಯ ನಡುವೆ ಒಟ್ಟು 22 ಶಾಸಕರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ (Kempegowda International Airport) ನಿಲ್ದಾಣದಿಂದ ಮೂರು ಪ್ರತ್ಯೇಕ ವಿಮಾನಗಳಲ್ಲಿ ದೆಹಲಿಗೆ ತೆರಳಿದ್ದಾರೆ.

ಒಂಬತ್ತು ಸದಸ್ಯರನ್ನು ಒಳಗೊಂಡ ಶಾಸಕರ ಮೊದಲನೇ ಗುಂಪು ಏರ್ ಇಂಡಿಯಾ ವಿಮಾನದ ಮೂಲಕ ಬೆಳಿಗ್ಗೆ 6:05 ಕ್ಕೆ ದೆಹಲಿಗೆ ಹೊರಟಿತು.

ಇವರಲ್ಲಿ ಕೆ.ಸಿ.ವೀರೇಂದ್ರ, ಗೋವಿಂದಪ್ಪ, ಡಿ.ಸುಧಾಕರ್, ರಘುಮೂರ್ತಿ ಟಿ.ಅಜಯ್ ಸಿಂಗ್, ಯಶ್ವಂತ್ ರಾಜ್ ಗೌಡ ಪಾಟೀಲ್, ಎಂಸಿ ಸುಧಾಕರ್, ಪ್ರದೀಪ್ ಈಶ್ವರ್ ಮತ್ತು ಬೆಲೂರು ಗೋಪಾಲಕೃಷ್ಣ ಆಗಲೇ ದೆಹಲಿಗೆ ತೆರಳಿದ್ದಾರೆ.

06:15 ರ ಸ್ಪೈಸ್ ಜೆಟ್ ವಿಮಾನದ ಮೂಲಕ 06 ಜನ ಶಾಸಕರ ಎರಡನೇ ಗುಂಪಿನಲ್ಲಿ ದೆಹಲಿಗೆ ಹಾರಿದ್ದಾರೆ.

ಇದನ್ನೂ ಓದಿ : https://vijayatimes.com/inauguration-of-new-parliament/

ಶಾಸಕರಾದ ಎನ್ಎ ಹ್ಯಾರೀಸ್, ಶ್ರೀನಿವಾಸ್ ಮಾನೆ, ರಿಜ್ಚಾನ್ ಹರ್ಷದ್, ಕೃಷ್ಣಬೈರೆಗೌಡ, ಈಶ್ವರ್ ಖಂಡ್ರೆ, ರಹಿಂ ಖಾನ್ ತೆರಳಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ಬೆಳಗ್ಗೆ 07:20 ರ ಹೊತ್ತಿಗೆ ಇನ್ನುಳಿದವರ ತಂಡ ಹೋಗಿದೆ.

ಇದರಲ್ಲಿ ಅಶೋಕ್ ರೈ, ಕೆಎನ್ ರಾಜಣ್ಣ, ಕೆಹೆಚ್ ಮುನಿಯಪ್ಪ, ಸಿಎಸ್ ನಾಡಗೌಡ, ಶಿವರಾಜ್ ತಂಗಡಗಿ, ಕೆಆರ್ ರಾಜೇಂದ್ರ, ಅರವಿಂದ ಅರಳಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಇದೀಗ ಕಾಂಗ್ರೆಸ್ (Congress) ಮುಖ್ಯಮಂತ್ರಿ ಹಗ್ಗಜಗ್ಗಾಟದ ಬಳಿಕ ಸಂಪುಟ ರಚನೆ ಮಾಡುವ ದೊಡ್ಡ ಸವಾಲು ಹೈಕಮಾಂಡ್ಗೆ ಎದುರಾಗಿದೆ. ಪ್ರಾದೇಶಿಕವಾರು, ಜಾತಿವಾರು ಲೆಕ್ಕದಲ್ಲಿ ಸಚಿವ ಸ್ಥಾನ ಹಂಚಬೇಕಿದೆ.

ನನಗೆ ಸಚಿವ ಸ್ಥಾನ ಬೇಕೇ ಬೇಕು ಎಂದು ಇಡೀ ಶಾಸಕರ ದಂಡೇ ಪಟ್ಟು ಹಿಡಿದಿದ್ದಾರೆ.

Exit mobile version