“ರಿಷಿ ಸುನಕ್ ತಾತ ಪಾಕಿಸ್ತಾನದವರು” ಸಾಮಾಜಿಕ ಮಾದ್ಯಮದಲ್ಲಿ ಬಿಸಿಬಿಸಿ ಚರ್ಚೆ!

Bengaluru : ಬ್ರಿಟನ್ ಪ್ರಧಾನಿಯಾಗಿ (Controversy on Rishi Sunak) ರಿಷಿ ಸುನಕ್ ಆಯ್ಕೆಯಾದ ನಂತರ ಸಾಮಾಜಿಕ ಮಾದ್ಯಮಗಳಲ್ಲಿ ಅವರ ಮೂಲದ ಕುರಿತು ಬಿಸಿಬಿಸಿ ಚರ್ಚೆ ನಡೆಸುತ್ತಿವೆ.

ಕೆಲವರು ರಿಷಿ ಸುನಕ್ ಪ್ರಧಾನಿಯಾಗಿದ್ದನ್ನು ಸಂಭ್ರಮಿಸುತ್ತಿದ್ದರೆ, ಇನ್ನು ಕೆಲವರು ರಿಷಿ ಮೂಲ ಕೆದಕಿ ವ್ಯಂಗ್ಯವಾಡುತ್ತಿದ್ದಾರೆ.

ಈ ಚರ್ಚೆ ಇದೀಗ ಸಾಮಾಜಿಕ ಮಾದ್ಯಮಗಳಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ರಿಷಿ ಸುನಕ್ ಅವರು ಮೂಲತಃ ಈಗಿನ ಪಾಕಿಸ್ತಾನದ ಗುಜ್ರನ್ ವಾಲಾದವರು. ಅವರ ಅಜ್ಜನ ಹುಟ್ಟೂರದು. ಇವರ ತಂದೆ ಕೀನ್ಯಾದಲ್ಲಿ ಜನಿಸಿದರು, ತಾಯಿ ತಾಂಜೇನಿಯಾದಲ್ಲಿ ಹುಟ್ಟಿದರು.

ರಿಷಿ ಹುಟ್ಟಿದ್ದು ಯುಕೆಯ ಸೌತಂಪ್ಟನ್ ನಲ್ಲಿ, ಮದುವೆಯಾಗಿದ್ದು ಭಾರತ ಮೂಲದ ಸುಧಾ ಮೂರ್ತಿಯವರ(Sudha Murthy) ಮಗಳು ಅಕ್ಷತಾ ಮೂರ್ತಿಯವರನ್ನು. ರಿಷಿ ಭಾರತದ ಪ್ರಜೆಯಲ್ಲ. ಈಗ ಅವರು ಕನ್ಸರ್ವೇಟಿವ್ ಪಕ್ಷದಿಂದ ಯುಕೆಯ ಪ್ರಧಾನಿಯಾಗಿ ನೇಮಕವಾಗಿದ್ದಾರೆ.

ಇದನ್ನೂ ಓದಿ : https://vijayatimes.com/police-daughter-rash-driving/

ವೈಯಕ್ತಿಕವಾಗಿ ನನಗೆ ನಮ್ಮ ದೇಶದ ಅಳಿಯ ಪ್ರಧಾನಿಯಾಗಿದ್ದು ಬಹಳ (Controversy on Rishi Sunak) ಸಂತೋಷದ ವಿಚಾರ. ಇಂತಹ ಅಳಿಯನನ್ನು ಪಡೆದಿದ್ದಕ್ಕೆ ಸುಧಾ ಮೂರ್ತಿಯವರಿಗೆ ಅಭಿನಂದನೆಗಳನ್ನು ಹೇಳುತ್ತೇನೆ.

ಆದರೆ ಸೋನಿಯಾ ಗಾಂಧಿಯವರನ್ನು ಇಟಲಿ ಎಂದು ಜರಿಯುತ್ತಿರುವ ಬ್ರಿಟೀಷರ ಬೂಟು ನೆಕ್ಕಿದ ಸಂತತಿಗಳು ರಿಷಿ ಪ್ರಧಾನಿ ಹಾದಿಗೆ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ.

https://youtu.be/20RyBKR4310

ರಿಷಿ ಭಾರತದ ಪ್ರಜೆಯಲ್ಲ, ಭಾರತದಲ್ಲಿ ಅವರ ಪೀಳಿಗೆಯ ಗುರುತಿಲ್ಲ. ನಮ್ಮ ನಾಡಿನ ಹೆಣ್ಣುಮಗಳನ್ನು ಮದುವೆಯಾಗಿ ವಿದೇಶದಲ್ಲೇ ನೆಲೆಸಿದ್ದಾರೆ. ಅದೇ ಸೋನಿಯಾ ಪ್ರೀತಿಸಿ ಮದುವೆಯಾಗಿ ಗಂಡನ ದೇಶಕ್ಕೆ ಬಂದರು,

ಈ ದೇಶದ ಪ್ರಜೆಯಾದರು, ಅತ್ತೆ, ಗಂಡನನ್ನು ದುರಂತವಾಗಿ ಕಳೆದುಕೊಂಡರೂ ಈ ದೇಶ ಬಿಟ್ಟು ಕದಲಲಿಲ್ಲ, ಪ್ರಿಯಾಂಕ, ರಾಹುಲ್ ಎಂಬಿಬ್ಬರು ಮಕ್ಕಳನ್ನು ಹೆತ್ತು ಈ ನೆಲದಲ್ಲೇ ಅಮ್ಮ ಎನಿಸಿಕೊಂಡರು.

ರಿಷಿಗೆ ಖುಷಿಯಾಗುವ ಮನಸುಗಳು ಒಂದು ಹೆಣ್ಣಿಗೆ ಎಷ್ಟೆಲ್ಲಾ ಅವಮಾನ ಮಾಡಿತಲ್ಲವೇ!? ಮಾಡುತ್ತಿದೆಯಲ್ಲವೇ? ಎಂಥಾ ವಿಕಟ ಎಂದು ಫೇಸ್ಬುಕ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, “ಮಾಜಿ ಪ್ರಧಾನಿ ಮನಮೋಹನ ಸಿಂಗ್, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಅನೇಕರು ಹುಟ್ಟಿದ್ದು ಆಗಿನ ಭಾರತದ,

ಇದನ್ನೂ ಓದಿ : https://vijayatimes.com/health-benefits-of-ridge-gourd/

ಈಗಿನ ಪಾಕಿಸ್ತಾನದಲ್ಲಿ. ಹಾಗೆಂದ ಮಾತ್ರಕ್ಕೆ ಅವರೆಲ್ಲರೂ ಪಾಕಿಸ್ತಾನ ಮೂಲದವರಾಗುತ್ತಾರಾ? ಅಷ್ಟಕ್ಕೂ 1947ಕ್ಕೂ ಮುಂಚೆ ಪಾಕಿಸ್ತಾನ ಎಲ್ಲಿತ್ತು? ಎಂದು ಪ್ರಶ್ನಿಸಿದ್ದಾರೆ.
Exit mobile version