ರೋಹಿಂಗ್ಯಾ ಶಿಬಿರದಲ್ಲಿ ಮತಾಂತರ, ಸರ್ಕಾರಕ್ಕೆ ಎಚ್ಚರಿಕೆ ಗಂಟೆ

Conversion Law

ಬೆಂಗಳೂರಿನ(Bengaluru) ರೋಹಿಂಗ್ಯಾ ಶಿಬಿರದಲ್ಲಿ(Rohingya Shibira) ಪ್ರೋಟೆಸ್ಟಂಟ್ ಕ್ರಿಶ್ಚಿಯನ್ ಸಂಘಟನೆಗಳು ಮತಾಂತರ(Conversion Law) ಮಾಡುತ್ತಿದ್ದು, ಈಗಾಗಲೇ ಹತ್ತಾರು ಕುಟುಂಬಗಳು ಮತಾಂತರವಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಬ್ಯಾಟರಾಯನಪುರದ(Byatrayanapura) ಶಿಬಿರದಲ್ಲಿರುವ ಸುಮಾರು 10 ರೊಹಿಂಗ್ಯಾ ಮುಸ್ಲಿಂ ಕುಟುಂಬಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ ಎಂದು ಹೇಳಲಾಗುತ್ತಿದೆ. ಸೇವೆಯ ಹೆಸರಿನಲ್ಲಿ ಶಿಬಿರ ಪ್ರವೇಶಿಸುವ ಕೆಲ ಪ್ರೋಟೆಸ್ಟಂಟ್ ಕ್ರಿಶ್ಚಿಯನ್ ಮಿಷನರಿಗಳು “ದೇವರ ವಾಕ್ಯ” ಬೋಧಿಸುತ್ತೇವೆ ಎಂದು ಹೇಳಿ ಹಣದ ಆಮಿಷ ಒಡ್ಡಿ ಮತಾಂತರ ಮಾಡುತ್ತಿವೆ ಎನ್ನಲಾಗಿದ್ದು, ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದರು, ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ದೆಹಲಿ, ಹರ್ಯಾಣ ಮತ್ತು ಹೈದರಾಬಾದ್‍ನಲ್ಲಿ ಸುಮಾರು 1,500 ರೋಹಿಂಗ್ಯಾಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದ್ದು, ಮತಾಂತರವಾಗುವುದು ಅನೇಕ ಕಾನೂನು ಪ್ರಕ್ರಿಯೆಗಳನ್ನು ಒಳಗೊಂಡಿದೆ. ವಿಶ್ವಸಂಸ್ಥೆಯ ಪ್ರಕಾರ, ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳು ಆರೋಗ್ಯ ಮತ್ತು ಶಿಕ್ಷಣವನ್ನು ಒಳಗೊಂಡಿರುವ ‘ಜೀವನದ ಹಕ್ಕನ್ನು’ ಮಾತ್ರ ಹೊಂದಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಅಂಗೀಕರಿಸಿರುವ ಮತಾಂತರ ನಿಷೇಧ ಕಾನೂನಿಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾದರೆ ಅದು ಅಪರಾಧವಾಗಿರುವುದರಿಂದ ಅದಕ್ಕೆ ಮತಾಂತರ ನಿಷೇಧ ಕಾನೂನು ಅನ್ವಯವಾಗುತ್ತದೆ.

ರೋಹಿಂಗ್ಯಾಗಳ ವಿರುದ್ದ ಧಾರ್ಮಿಕ ಮತಾಂತರದ ಆರೋಪ ಬಂದರೆ ಅವರನ್ನು ಬಂಧನ ಕೇಂದ್ರಕ್ಕೆ ಕಳುಹಿಸುವ ಅಧಿಕಾರ ರಾಜ್ಯಕ್ಕಿದೆ. ಈ ಕುರಿತು ತನಿಖೆ ನಡೆಸುವ ಮತ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಹೊಂದಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.

Exit mobile version