ಚದುರಂಗ(Chess) ಆಟದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವ್ಯಕ್ತಿಯ ಬುದ್ಧಿಮತ್ತೆಯನ್ನು ಪ್ರದರ್ಶಿಸುವ ಆಟವಿದು. ಚದುರಂಗ ಆಟ ಸಾಗಿ ಬಂದ ಹಾದಿಯ ಕುರಿತು ಬಹುತೇಕರಿಗೆ ಮಾಹಿತಿ ಇಲ್ಲ, ಅಂತಹ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ(How much you know about Chess?).
ಇಂಗ್ಲಿಷ್‌ನಲ್ಲಿ ಹೇಳುವ ಚೆಸ್ ಆಟವನ್ನು ಕನ್ನಡದಲ್ಲಿ ಚದುರಂಗ ಎಂದು ಕರೆಯುತ್ತಾರೆ. ಮೂಲತಃ ಸಂಸ್ಕೃತದಿಂದ ಬಂದಿರುವ ಈ ಪದ ಸೇನೆಯ ನಾಲ್ಕು ಅಂಗಗಳನ್ನು ಉಲ್ಲೇಖಿಸುತ್ತದೆ. ಕಾಲಾಳು, ಅಶ್ವ ಸೈನ್ಯ, ಹಸ್ತಿ ಸೈನ್ಯ ಮತ್ತು ರಥ.

ಕಪ್ಪು ಮತ್ತು ಬಿಳಿ ಬಣ್ಣದ ತಲಾ 16 ಕಾಯಿಗಳ ನಡುವೆ 64 ಚೌಕಾಕಾರದ ಕೋಣೆಗಳಲ್ಲಿ ನಡೆಯುವ ಯುದ್ಧದ ಆಟವೇ ಚದುರಂಗದಾಟ. ಬಿಳಿ ಮತ್ತು ಕಪ್ಪು ಬಣ್ಣದ ಕಾಯಿಗಳು ಎರಡು ಸೇನೆಗಳನ್ನು ಪ್ರತಿನಿಧಿಸುತ್ತವೆ.
ಎರಡೂ ಕಡೆಗಳಲ್ಲಿ ತಲಾ ಒಬ್ಬೊಬ್ಬ ರಾಜ, ಮಂತ್ರಿ, ತಲಾ ಎರಡು ರಥ, ಕುದುರೆ ಮತ್ತು ಆನೆಗಳಿರುತ್ತವೆ. ಇವರ ಬೆಂಬಲಕ್ಕೆ ಎಂಟೆಂಟು ಕಾಲಾಳುಗಳೂ ಇರುತ್ತಾರೆ.
ಒಂದು ಕಡೆಯ ರಾಜನನ್ನು ಬಂಧಿಸಿದರೆ (ಚೆಕ್‌ಮೇಟ್) ಇನ್ನೊಂದು ಪಡೆ ಗೆದ್ದಂತೆ.
ವಿರೋಧಿಗಳನ್ನು ಹಿಮ್ಮೆಟ್ಟಿಸಲು ಸೈನ್ಯದ ನಡೆ ನಿರ್ಧರಿಸುವುದೇ ಈ ಆಟದಲ್ಲಿರುವ ಸವಾಲು. ಅದಕ್ಕೆ ಬುದ್ಧಿವಂತಿಕೆ ಬೇಕು, ಹೀಗೆ ಮಾಡಿದರೆ ಮುಂದೇನಾಗುತ್ತದೆ ಎಂಬುದರ ಬಗ್ಗೆ ದೂರದ ಆಲೋಚನೆ ಬೇಕು(How much you know about Chess?).
ಜೊತೆಗೆ ಏಕಾಗ್ರತೆ ಬೇಕೇ ಬೇಕು. ಇದೇ ಕಾರಣಕ್ಕೆ ಇದು ಬುದ್ಧಿವಂತರ ಆಟ ಎಂದು ಕರೆಸಿಕೊಳ್ಳುವುದು. ಈ ಆಟ ಕೆಲವರಿಗೆ ಚಟವಾಗಿಯೂ ಕಾಡುವುದುಂಟು, ಇದನ್ನು ಜೂಜಾಟವನ್ನಾಗಿಯೂ ಕೆಲವರು ಪರಿಗಣಿಸುತ್ತಾರೆ.
https://vijayatimes.com/dadasaheb-phalke-award-for-asha-parekh/
ಜಗತ್ತಿನೆಲ್ಲೆಡೆ ಅಸ್ತಿತ್ವದಲ್ಲಿರುವ ಈ ಆಟದ ಮೂಲ ಯಾವುದು ಎಂಬುದರ ಬಗ್ಗೆ ಅನೇಕ ಗೊಂದಲಗಳಿವೆ. ಹೆಚ್ಚಿನವರು ಭಾರತ ಎಂದರೆ, ಇನ್ನು ಕೆಲವರು ಚೀನಾ, ಪರ್ಷಿಯಾ ಎಂದು ವಾದಿಸುತ್ತಾರೆ.

ಆದರೆ, ಬಹುತೇಕ ಇತಿಹಾಸ ತಜ್ಞರು, ಚದುರಂಗದಾಟ ಹುಟ್ಟಿದ್ದು, ಭಾರತದಲ್ಲಿ ಎಂದು ಹೇಳುತ್ತಾರೆ. ಗುಪ್ತರ ಆಡಳಿತಾವಧಿಯಲ್ಲಿ ಕ್ರಿ.ಶ. ಆರನೇ ಶತಮಾನಕ್ಕೂ ಮೊದಲೇ ಚೆಸ್ ಭಾರತೀಯರಿಗೆ ಪರಿಚಯವಾಗಿತ್ತು ಎಂಬುದು ತಜ್ಞರ ಅಭಿಪ್ರಾಯ.
ನಮ್ಮ ಪೌರಾಣಿಕ ಕಥೆಗಳಲ್ಲಿಯೂ ಕೂಡ ಚದುರಂಗದಾಟದ ಉಲ್ಲೇಖವಿದೆ.
ಆಧುನಿಕ ಇತಿಹಾಸದಲ್ಲಿ ಕೂಡ ಚೆಸ್ ಮುಂದುವರಿದಿದೆ.
2012ರ ಸಮೀಕ್ಷೆಯ ಪ್ರಕಾರ ಚೆಸ್ ಆಟಗಾರರು ಈಗ ವಿಶ್ವದ ಅತಿ ದೊಡ್ಡ ಸಮುದಾಯಗಳಲ್ಲಿ ಒಂದಾಗಿದೆ. 605 ಮಿಲಿಯನ್ ಜನರಿಗೆ ನಿಯಮಿತವಾಗಿ ಚೆಸ್ ಆಡುವ ಹವ್ಯಾಸವಿದೆಯಂತೆ.
ಇನ್ನು, ಫ್ರಾನ್ಸ್‌ನಲ್ಲಿ ಜುಲೈ 20, 1924ರಲ್ಲಿ ನಡೆದ 8ನೇ ಸಮ್ಮರ್ ಒಲಂಪಿಕ್ ಗೇಮ್ಸ್‌ನಲ್ಲಿ ವರ್ಲ್ಡ್ ಚೆಸ್ ಫೆಡರೇಷನ್ (ಎಫ್‌ಐಡಿಇ) ಅನ್ನು ಸ್ಥಾಪಿಸಲಾಯಿತು. ಜುಲೈ 20, 1966 ರಲ್ಲಿ ಎಫ್‌ಐಡಿಇಯು ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆರಂಭಿಸಿತು.
ಇಂದು ವಿಶ್ವಾದ್ಯಂತ ಚೆಸ್ ಟೂರ್ನಮೆಂಟ್ ನಡೆಯುತ್ತದೆ. 1851ರಲ್ಲಿ ಲಂಡನ್‌ನಲ್ಲಿ ಮೊದಲ ಬಾರಿಗೆ ಆಧುನಿಕ ಚೆಸ್ ಟೂರ್ನಮೆಂಟ್ ಪ್ರಾರಂಭವಾಯಿತು.
- ಪವಿತ್ರ ಸಚಿನ್