ಕೊರೋನಾ ಕಣ್ಣೀರು: ಕಾಡು ಮಕ್ಕಳ ಕೂಗು ಕೇಳುವವರಾರು

ಕೊರೋನಾ ಕಣ್ಣೀರು ಕಾಡು ಮಕ್ಕಳ ಕೂಗು, ಕವರ್ ಸ್ಟೋರಿ 2.0

ಕೊರೋನಾ ಮಾಡಿದ ಅನಾಹುತ ಒಂದಲ್ಲಾ ಎರಡು. ಅದು ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬರ ಬದುಕನ್ನ ಬಬರ್ಾದ್ ಮಾಡಿದೆ. ಅದ್ರಲ್ಲೂ ಬಡವರು ಜನಸಾಮಾನ್ಯರನ್ನು ಒಂದು ಹೊತ್ತಿನ ಊಟಕ್ಕೆ ಪರದಾಡುವಂತೆ ಮಾಡಿತು. ನಗರಪ್ರದೇಶಗಳ ಜನರಿಗೆ ಒಂದಿಷ್ಟು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಆಹಾರ ಕಿಟ್ಗಳನ್ನ ನೀಡಿ ಸಹಕರಿಸಿದ್ರು. ಆದ್ರೆ ಯಾರ ಕಣ್ಣಿಗೂ ಬೀಳದೆ ಅತ್ತ, ಕೂಲಿ ಇಲ್ಲದೆ, ಇತ್ತ ಕೂಳಿಲ್ಲದೆ ಹಸಿವಿನಿಂದ ಸಾಯುತ್ತಿದ್ದಾರೆ ಕಾಡಿನ ಮಕ್ಕಳು ಅನ್ನೋ ಸುದ್ದಿ ವಿಜಯಟೈಮ್ಸ್ ಕವರ್ಸ್ಟೋರಿ ತಂಡಕ್ಕೆ ಸಿಕ್ತು. ನಾವು ತಕ್ಷಣ ಕಾರ್ಯಪ್ರವೃತ್ತರಾಗಿ ಕಾಡಿನ ಮಕ್ಕಳ ಕೂಗು ಕೇಳಲು ಮತ್ತು ಅವರ ಕೂಗನ್ನು ಸಕರ್ಾರದ ಕಿವಿಗೆ ಕೇಳಿಸಲು ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯ ಕಾಡೋಳಗೆ ನುಗ್ಗಿಯೇ ಬಿಟ್ವಿ.

ಕಾಡಂಚಿನ ಹಾಡಿಯಲ್ಲಿರು ಜನರ ನೋವನ್ನು ಆಲಿಸಿದ ನಮಗೆ ಕರುಳು ಚುರುಕ್ ಅಂದಿತು. ಕೊರೋನಾ ಬಂದಿದ್ದರಿಂದ ಊರ ಜನ ಕೂಲಿ ಕೊಡ್ತಾ ಇಲ್ಲ. ಕೊಟ್ರೂ 15 ದಿನಕ್ಕೊಮ್ಮೆ ಬರೀ ನೂರು ರೂಪಾಯಿ ಸಿಗುತ್ತೆ. ಅದ್ರಲ್ಲೇ ಹದಿನೈದು ದಿನ ಕಳೀಬೇಕು. ಇನ್ನು ಸಕರ್ಾರದ ಎಂಥಾ ಕ್ರೂರ ನೀತಿ ನೋಡಿ ಕರೋನಾದಿಂದಾಗಿ ಊಟ ಇಲ್ಲದೆ ಒದ್ದಾಡುತ್ತಿರೋ ಇವರಿಗೆ ಆಹಾರ ಪದಾರ್ಥ ಕೊಡೋ ಬದಲು ಸಹಜವಾಗಿ ಕೊಡಬೇಕಾದ ಪಡಿತರಕ್ಕೂ ಕತ್ತರಿ ಹಾಕಿ ಅವರನ್ನು ಹಸಿವಿನ ಕೂಪಕ್ಕೆ ತಳ್ಳಿದ್ರು.

ಗೆಡ್ಡೆ ಗೆಣಸು ತರಲೂ ನಿರ್ಬಂಧ: ಒಂದು ಕಡೆ ಕೂಲಿ ಇಲ್ಲ. ಸಕರ್ಾರದ ಸಹಕಾರ ಇಲ್ಲ. ಇತ್ತ ಕಾಡಿಗೆ ಹೋಗಿ ಗೆಡ್ಡೆ ಗೆಣಸು, ಸೊಪ್ಪು ತರೋಣ ಅಂದ್ರೆ ಅರಣ್ಯ ಅಧಿಕಾರಿಗಳು ನಿರ್ಬಂಧ ಹೇರ್ತಾರೆ. ಕೇಸ್ ಹಾಕಿ ಒಳಗೆ ಹಾಕೋ ಬೆದರಿಕೆ ಕೊಡ್ತಾರೆ. ಹಾಗಾಗಿ ಹಸಿವು ಮತ್ತು ಭಯದಲ್ಲಿ ಇಲ್ಲಿನ ಕಂಗಾಲಾಗಿ ಹೋಗಿದ್ದಾರೆ. ಇಲ್ಲಿನ ಮಕ್ಕಳು ಹೆಂಗಸರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕೆಲವು ಹಾಡಿಗಳ ಅನೇಕರು ಟಿಬಿ ಕಾಯಿಲೆಗೆ ತುತ್ತಾಗಿ ನರಳುತ್ತಿದ್ದಾರೆ.

ಕೈಯಲ್ಲಿ ಕೆಲಸ ಇಲ್ಲದೆ ಕಂಗಾಲು: ಇನ್ನು ಆದಿವಾಸಿ ಯುವಕರು ಸಾಮಾನ್ಯವಾಗಿ ಉದ್ಯೋಗ ಅರಸಿ ಕೊಡಗು, ಕೇರಳ ಕಡೆ ಹೋಗ್ತಾರೆ. ತಮ್ಮ ಜೀವನ ಕಂಡು ಕೊಳ್ತಾರೆ. ಆದ್ರೆ ಈ ಬಾರಿ ಲಾಕ್ಡೌನ್ನಿಂದಾಗಿ ಕೊಡಗಿಗೆ, ಕೇರಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಸ್ಥಳೀಯವಾಗಿ ಕೂಲಿ ಸಿಗದೆ ಆದಿವಾಸಿ ಯುವಕರು ಕಂಗಾಲಾಗಿದ್ದಾರೆ. ಅವರು ಕದ್ದು ಮುಚ್ಚಿ ಕಾಡಿಗೆ ಹೋಗಿ ಜೇನುತುಪ್ಪ ತಂದು ಬದುಕು ಸಾಗಿಸುತ್ತಿದ್ದಾರೆ. ಇಂಥಾ ವಿಷಮ ಪರಿಸ್ಥಿತಿಯಲ್ಲಿ ಸಕರ್ಾರ ಮಾತ್ರ ಇವರಿಗೆ ಯಾವ ಪ್ಯಾಕೇಜನ್ನೂ ಘೋಷಿಸದೆ ಕಾಡು ಜನರ ಮಕ್ಕಳ ಬಾಳಲ್ಲಿ ಚಲ್ಲಾಟ ಆಡುತ್ತಿದೆ.

ಕಾಡು ಮಕ್ಕಳಂದ್ರೆ ಕಾಡು ಕಪಿಗಳಾ?: ರಾಜ್ಯ ಸಕರ್ಾರ ಕಾಡು ಜನರನ್ನು ನಿರಂತರವಾಗಿ ಶೋಷಿಸುತ್ತಲೇ ಬಂದಿದೆ. ಅವರನ್ನು ಕಪಿಗಳಿಗಿಂತಲೂ ಕಡೆಯಾಗಿ ನೋಡಿಕೊಳ್ತಿದೆ ರಾಜ್ಯಸರ್ಕಾರ ಬುಡಕಟ್ಟು ಜನಾಂಗದ ಹೆಸರಲ್ಲಿ ಕೊಟ್ಯಾಂತರ ರೂಪಾಯಿ ಮೀಸಲಿಡುತ್ತೆ. ಆದ್ರೆ ತಲೆ ಬುಡ ಇಲ್ಲದ ಯೋಜನೆಗಳನ್ನು ರೂಪಿಸಿ ಅವರನ್ನು ನಿರಂತರವಾಗಿ ಹಸಿವಿನಿಂದ ನರಳುವಂತೆ ಮಾಡ್ತಿದೆ. ಸಕರ್ಾರ ಬುಡಕಟ್ಟು ಜನಾಂಗದವರಿಗೆ ಅನ್ನ, ವಸತಿ, ವಿದ್ಯೆಯನ್ನು ಸರಿಯಾಗಿ ಕೊಡದೆ ಅವರನ್ನು ಮೂಲಭೂತ ಸೌಕರ್ಯಗಳಿಂದಲೇ ವಂಚಿಸುತ್ತಿದೆ. ಹಾಡಿಯ ಜನರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲ. ಮಕ್ಕಳಿಗೆ ಸರಿಯಾದ ಶಾಲೆಗಳಿಲ್ಲ. ಇನ್ನು ಆಸ್ಪತ್ರೆಯಂತು ದೂರದ ಮಾತು ಬಿಡಿ. ದೂರದಲ್ಲಿರೋ ಅಂತರ ಸಂತೆಯ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಆಸ್ಪತ್ರೆಯಲ್ಲಿ ಔಷಧಿ ಬೆಡ್ ಇಲ್ಲವೆ ಇಲ್ಲ. ಆಸ್ಪತ್ರೆಗೆ ಹೋಗ್ಬೇಕಾದ್ರೆ ಹೆಚ್.ಡಿ ಕೋಟೆ ಅಥವಾ ಮೈಸೂರಿಗೆ ಹೋಗ್ಬೇಕು.

ಕಾಡಿನಿಂದ ತಂದು ಉಪವಾಸ ಕೆಡವಿದ್ರು: ನಮ್ಮ ರಾಜ್ಯ ಸಕರ್ಾರ ಕಾಡಿನ ಜವರನ್ನು ಬಣ್ಣ ಬಣ್ಣದ ಸುಳ್ಳು ಭರವಸೆ, ಪ್ಯಾಕೇಜ್ ಆಸೆ ತೋರಿಸಿ ಪುನರ್ವಸತಿ ಕೇಂದ್ರಕ್ಕೆ ಕರ್ಕೊಂಡು ಬರುತ್ತೆ. ಆದ್ರೆ ಅಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಮನೆ ಕಟ್ಟಿಸಿಕೊಡುತ್ತೆ. ಅಲ್ಲದೆ ಇವರಿಗೆ ಕೃಷಿ ಭೂಮಿ, ತರಬೇತಿ ನೀಡೋ ಭರವಸೆ ಕೊಟ್ಟಿದ್ದಾರೆ. ಆದ್ರೆ ಇಲ್ಲಿಯ ವರೆಗೆ ತರಬೇತಿಯಾಗಲಿ, ಕೃಷಿ ಭೂಮಿಯನ್ನಾಗಲಿ ಪರಭಾರೆ ಮಾಡಿಲ್ಲ. ಅಲ್ಲದೆ ಇವರಿಗೆ ಬದುಕಿಗೆ ಬೇರೆ ದಾರಿಯನ್ನೂ ತೋರಿಸದೆ ಅನ್ನ ಇಲ್ಲದೆ ಸಾಯುವಂತೆ ಮಾಡಿದೆ ಸಕರ್ಾರ. ಇದಕ್ಕೆ ಮಾಸ್ತಿ ಗುಡಿ ಪುನರ್ವಸತಿ ಕೇಂದ್ರದಲ್ಲಿರೋ ಅವ್ಯವಸ್ಥೆಯೇ ಸಾಕ್ಷಿ. ಕಾಡುಜನರ ಈ ನೋವಿನ ಬಗ್ಗೆ ಈಗಾಗ್ಲೇ ಸಮಾಜಕಲ್ಯಾಣ ಇಲಾಖೆ ಸಚಿವರಿಗೆ ತಿಳಿಸಲು ಹೋದ್ರೆ ಅವರು ಸಮಯವಕಾಶ ಕೊಡದೆ ಉಡಾಫೆ ಮಾತುಗಳನ್ನಾಡಿ ವಾಪಾಸ್ ಕಳುಹಿಸಿದ್ದಾರೆ. ಇದು ನಮ್ಮನ್ನಾಳುವವರ ದರ್ಪ. ಈ ಕುರುಡು ಸರ್ಕಾರಕ್ಕೆ ಕಾಡು ಮಕ್ಕಳ ನೋವು ಬೇಗ ಕಾಣಿಸಲಿ, ಇವರ ನೋವು ಕೇಳಿಸಲಿ ಅಂತ ನಮ್ಮ ಆಶಯ.

Exit mobile version