ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರಿ EG.5.1 ಭಾರತಕ್ಕಿದೆಯೇ ಆತಂಕ? ತಜ್ಞರು ಹೇಳಿದ ಸತ್ಯವೇನು?ಏನಿದರ ಲಕ್ಷಣ?

Bengaluru , ಆಗಸ್ಟ್ 07: ಭಾರತ ಸೇರಿದಂತೆ ಇಡೀ ವಿಶ್ವವನ್ನ ಬೆಚ್ಚಿ ಬೀಳಿಸಿದ್ದ ಕೋವಿಡ್ 19 (Covid 19) ವೈರಸ್‌ (Corona variant spreading fast) ಭೀತಿ ಇದೀಗ ಎಲ್ಲಡೆ ಕಡಿಮೆಯಾಗಿ ಇನ್ನೇನು

ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಅನ್ನುವಷ್ಟರಲ್ಲಿ ಇದೀಗ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಕೊರೊನಾ(Corona) ಉಪತಳಿ ‘ಇರಿಸ್’ ಎನ್ನಲಾಗುತ್ತಿರುವ ವೈಜ್ಞಾನಿಕವಾಗಿ EG.5.1

ವೈರಸ್ ತಳಿ ವಿಶ್ವದಲ್ಲಿ ಭೀತಿ (Corona variant spreading fast) ಸೃಷ್ಟಿಸುತ್ತಿದೆ.

ನಮ್ಮನ್ನು ಸಂಪೂರ್ಣವಾಗಿ ಕೋವಿಡ್ 19 ಮಹಾಮಾರಿ ತೊರೆದಿಲ್ಲ ಎಂಬುದಕ್ಕೆ ಹೊಸ ಪ್ರಕರಣಗಳು ಲಭಿಸಿದೆ. ಬ್ರಿಟನ್‌ನಲ್ಲಿ(Britain) ಕೊರೊನಾ ಹೊಸ ಉಪತಳಿ (ರೂಪಾಂತರ) ಪತ್ತೆಯಾಗಿದೆ.ಇಂಗ್ಲೆಂಡ್ ನಲ್ಲಿ

(England) ಮೊದಲ ಬಾರಿಗೆ ಕೊರೊನಾ ಓಮಿಕ್ರಾನ್ ರೂಪಾಂತರಿಯು ವೇಗವಾಗಿ ಹರಡುತ್ತಿರುವುದನ್ನು ಕಳೆದ ಜುಲೈ(July) ತಿಂಗಳಲ್ಲಿ ಅಲ್ಲಿನ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಬೊಮ್ಮಾಯಿ ದಿಲ್ಲಿ ಪ್ರವಾಸ : ವಿಧಾನಸಭೆ ಚುನಾವಣೆ ಸೋಲಿನ ನಂತರ ಹೈಕಮಾಂಡ್ ಮೊದಲ ಭೇಟಿ

ಕೋವಿಡ್ ವೈರಸ್‌ನ ಹೊಸ ರೂಪಾಂತರ ‘ಎರಿಸ್‌’(Eris) ಇದೀಗ ಇಂಗ್ಲೆಂಡ್‌ನಲ್ಲಿ ವೇಗವಾಗಿ ಹರಡುತ್ತಿದೆ. ಹಲವು ದೇಶಗಳ ತಜ್ಞರು ಜಾಗತಿಕವಾಗಿ ಮತ್ತೊಮ್ಮೆ ಸಾಂಕ್ರಾಮಿಕ ಭೀತಿಯನ್ನು ಈ ಹೊಸ ಅಲೆಯು ಸೃಷ್ಟಿಸಲಿದೆ

ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಭಯಗಳ ನಡುವೆ, ಭಾರತದಲ್ಲಿ ಈ ‘ಎರಿಸ್’ ರೂಪಾಂತರವು ಹರಡಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಯುನೈಟೆಡ್ ಕಿಂಗ್‌ಡಮ್(United Kingdom), ಯುನೈಟೆಡ್ ಸ್ಟೇಟ್ಸ್(United States) ಮತ್ತು ಜಪಾನ್‌ನಂತಹ(Japan) ಹಲವಾರು ದೇಶಗಳಲ್ಲಿ ಸುಮಾರು ಒಂದು ವರ್ಷದ ಬಳಿಕ ಕೋವಿಡ್ ಪ್ರಕರಣಗಳು ಮತ್ತೊಮ್ಮೆ

ಹೆಚ್ಚಾಗುತ್ತಿವೆ. ವೇಗವಾಗಿ ಹರಡುತ್ತಿರುವ ಈ ಕೋವಿಡ್ ರೂಪಾಂತರ ಎರಿಸ್ ಸದ್ಯ ಭಾರತದಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ. ಎರಿಸ್ ಸಾಂಕ್ರಾಮಿಕ ರೋಗವು ಭಾರತದಲ್ಲಿ ಮತ್ತೊಂದು ಅಲೆಯನ್ನು ಉಂಟುಮಾಡಬಹುದು ಎಂಬ

ಭಯವಿದೆ.ಭಾರತದ ಜನಸಂಖ್ಯೆಯಲ್ಲಿ ಈ ಹೊಸ ರೂಪಾಂತರವು ಹರಡುವ ಸಾಧ್ಯತೆಯಿಲ್ಲ ಎಂದು ಅನೇಕ ತಜ್ಞರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ : ವೈಟ್‌ ಬೋರ್ಡ್‌ ಕಾರು ಹೊಂದಿರುವವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಲಾಗುವುದು : ಆಹಾರ ಮತ್ತು ನಾಗರಿಕ ಸಚಿವ ಕೆಎಚ್‌ ಮುನಿಯಪ್ಪ ಘೋಷಣೆ

ಭಾರತದಲ್ಲಿ ಸಾಂಕ್ರಾಮಿಕ ರೋಗದ ಹೊಸ ಅಲೆಯನ್ನು ಕೋವಿಡ್‌ನ ಈ ಎರಿಸ್ ರೂಪಾಂತರವು ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ. ವೈರಸ್ ವಿರುದ್ಧದ ರೋಗ ನಿರೋಧಕ ಶಕ್ತಿಯನ್ನು ಭಾರತದಲ್ಲಿನ

ಜನಸಂಖ್ಯೆಯು ಈಗಾಗಲೇ ಹೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವೇಳೆ ಭಾರತಕ್ಕೆ(India) ಇದು ಬಂದರೂ, ವೇಗವಾಗಿ ಹರಡುವುದಿಲ್ಲ. ನಿಧಾನವಾಗಿ ಹರಡಿದರೂ ಸಹ , ಸಾವುಗಳು ಸಂಭವಿಸುವುದಿಲ್ಲವೆಂದು

ತಜ್ಞರು ಹೇಳಿದ್ದಾರೆ.

ಕೋವಿಡ್ ವೈರಸ್‌ನ ಎರಿಸ್ ರೂಪಾಂತರದ ಹರಡುವಿಕೆಯು ಸೀಮಿತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಯಾವುದೇ ಆತಂಕಕ್ಕೆ ಸದ್ಯಕ್ಕೆ ಜನರು ಒಳಗಾಗುವ ಸಾಧ್ಯತೆ ಇಲ್ಲ. ಆದರೂ, ಸಾರ್ವಜನಿಕ ಸ್ಥಳಗಳಲ್ಲಿ

ಎಲ್ಲರೂ ಸೋಂಕನ್ನು ತಪ್ಪಿಸಲು ಸರಿಯಾದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ಪ್ರಕಾರ,ದೇಶದಲ್ಲಿ ಪ್ರತಿ ಏಳು ಕೋವಿಡ್ ಪ್ರಕರಣಗಳಲ್ಲಿ ಒಂದಕ್ಕೆ ಹೊಸ ಎರಿಸ್ ರೂಪಾಂತರವು ಕಾರಣವಾಗಿದೆ. ಇದು ಯುನೈಟೆಡ್ ಕಿಂಗ್‌ಡಂನಲ್ಲಿ ವೇಗವಾಗಿ ಹರಡುತ್ತಿದೆ.

ರಶ್ಮಿತಾ ಅನೀಶ್

Exit mobile version