ಖಾಸಗಿ ವಲಯಕ್ಕೂ ಬಂತು ಲಂಚವತಾರ ! ಟಿಸಿಎಸ್ ಹಿರಿಯ ಅಧಿಕಾರಿಗಳ ಭ್ರಷ್ಟಾಚಾರ ಬಯಲು

New Delhi: ಟಾಟಾ ಕನ್ಸಲ್ಟೆನ್ಸಿಯು (Corruption in TCS office) ಭಾರತದಲ್ಲಿನ ಅತಿದೊಡ್ಡ ಐಟಿ ಕಂಪನಿಗಳಲ್ಲಿ (Corruption in TCS office) ಒಂದಾಗಿದೆ, ಭಾರತದಲ್ಲಿ ಅತಿ ಹೆಚ್ಚು ಐಟಿ ಉದ್ಯೋಗಿಗಳನ್ನು

ಹೊಂದಿದೆ ಮತ್ತು ಅತ್ಯುತ್ತಮ ಕೆಲಸದ ವಾತಾರವಣಕ್ಕೆ ಹೆಸರುವಾಸಿಯೂ ಆಗಿದೆ. ಇಂತಹ ಕಂಪನಿಯಲ್ಲಿ ಇದೀಗ ಒಳ್ಳೆಯ ಹೆಸರಿಗೆ ಮಸಿ ಮೆತ್ತುವಂತಹ ಬೆಳವಣಿಗೆ ಬೆಳಕಿಗೆ ಬಂದಿದೆ.

ಹೌದು ಟಿಸಿಎಸ್​ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲಸ ಕೊಡುತ್ತೇವೆಂದು ಕನ್ಸಲ್ಟೆನ್ಸಿ (Consultancy) ಸಂಸ್ಥೆಗಳಿಂದ ಲಂಚ ಸ್ವೀಕರಿಸಿದ ಪ್ರಕರಣ ನಡೆದಿದೆ . ಈ ಕೃತ್ಯದಲ್ಲಿ ಟಿಸಿಎಸ್

(TCS) ನ ಹಲವು ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದೆ.

100 ಕೋಟಿ ರೂ.ಗೂ ಹೆಚ್ಚು ಲಂಚ ಪಡೆದಿರುವ ಘಟನೆ ಇದಾಗಿದ್ದು, ಕಂಪನಿಯ ಉದ್ಯೋಗಿಯೊಬ್ಬರು ಸಿಒಒಗೆ ವಿಷಯ ತಿಳಿಸಿದಾಗ ಹಗರಣ ಬೆಳಕಿಗೆ ಬಂದಿದೆ. ರಿಸೋರ್ಸ್ ಮ್ಯಾನೇಜ್‌ಮೆಂಟ್

ಗ್ರೂಪ್ (Research Management Group) ಗ್ಲೋಬಲ್ ಹೆಡ್ ಇ ಎಸ್ ಚಕ್ರವರ್ತಿ (E.S Chakravarty) ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಟಿಸಿಎಸ್ ವಜಾಗೊಳಿಸಿದ್ದು,

ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಅಂಚೆ ಇಲಾಖೆಯ 12,828 ಜಿಡಿಎಸ್ ಹುದ್ದೆಗಳ ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ

ಇದರ ಜೊತೆಗೆ, ಮೂರು ಮಾನವ ಸಂಪನ್ಮೂಲ ಕಂಪನಿಗಳು ಅಥವಾ ಸಲಹಾ ಕಂಪನಿಗಳನ್ನು ನಿಷೇಧಿಸಲಾಯಿತು, ಇದು ಮೊದಲ ಬಾರಿಗೆ TCS ಇಂತಹ ಭ್ರಷ್ಟಾಚಾರ ಹಗರಣಗಳನ್ನು ಬಹಿರಂಗಪಡಿಸಿದೆ.

ಕಂಪನಿಯ ಅನುಭವಿ ಕೆ ಕೃತಿವಾಸನ್ (K Kruti vasan) ಅವರನ್ನು ಮುಖ್ಯ ಕಾರ್ಯನಿರ್ವಾಹಕರಾಗಿ ನೇಮಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆಯು ಬಯಲಿಗೆ ಬಂದಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಕಳೆದ 3 ವರ್ಷಗಳಿಂದ ಉದ್ಯೋಗ ಹಂಚಿಕೆಗೆ ಲಂಚ ಸ್ವೀಕರಿಸುವ ಕಾರ್ಯ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿಒಒ ಅವರಿಗೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ

ಉದ್ಯೋಗಿ ರಹಸ್ಯವಾಗಿ ಮಾಹಿತಿ ಕೊಟ್ಟಿದ್ದರು. ಹೈರಿಂಗ್ ಏಜೆನ್ಸಿಗಳಿಂದ (Hiring Agency) ಟಿಸಿಎಸ್​ನ ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ನ ಗ್ಲೋಬಲ್ ಮುಖ್ಯಸ್ಥ ಇಎಸ್ ಚಕ್ರವರ್ತಿ ಅವರು ಕಮಿಷನ್ ಪಡೆಯುತ್ತಿದ್ದಾರೆ

ಎಂದು ಆರೋಪಿಸಿದ್ದರು.

ಇದನ್ನೂ ಓದಿ : ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಟಿಸಿಎಸ್​ನ ಟಾಪ್ ಮ್ಯಾನೇಜ್ಮೆಂಟ್ ಆ ಬಳಿಕ ಒಂದು ಕಮಿಟಿ ರಚಿಸಿ ತನಿಖೆ ನಡೆಸಿತು. ನೇಮಕಾತಿ ವಿಭಾಗದ ಮುಖ್ಯಸ್ಥರನ್ನು ಅದಾದ ಬಳಿಕ ರಜೆಯ ಮೆಲೆ ಕಳುಹಿಸಿತು. ಕೆಲಸದಿಂದ ಆರ್​ಎಂಜಿಯ (RMG) ನಾಲ್ವರು

ಅಧಿಕಾರಿಗಳನ್ನು ತೆಗೆದುಹಾಕಲಾಯಿತು. ಕಚೇರಿಗೆ ಬರದಂತೆ ಇಎಸ್ ಚಕ್ರವರ್ತಿ ಅವರನ್ನು ನಿರ್ಬಂಧಿಸಲಾಯಿತು. ಜಿಕೆ ಅರುಣ್ (G.K Arun) ಇವರು ಆರ್​ಬಿಎಂ (RBM)ವಿಭಾಗದ ಮತ್ತೊಬ್ಬ

ಅಧಿಕಾರಿ ಅವರನ್ನೂ ಕೂಡ ಮನೆಗೆ (Corruption in TCS office) ಕಳುಹಿಸಲಾಯಿತು.

ಕಂಪನಿಯ ಹಿರಿಯ ನಾಯಕತ್ವವು ಈ ಬೆಳವಣಿಗೆಯಿಂದ ಆಘಾತಗೊಂಡಿರುವುದಾಗಿ ತಿಳಿಸಿದ್ದಾರೆ. ಕಂಪನಿ 3 ಲಕ್ಷ ಉದ್ಯೋಗಿಗಳನ್ನು ಕಳೆದ 3 ವರ್ಷಗಳಿಂದ ನೇಮಕಾತಿ ಮಾಡಿಕೊಂಡಿದೆ.

ಇವರಿಗೆ ಕೆಲಸ ಕೊಡಲು ಪಡೆದಿರುವ ಕಮಿಷನ್ಗಳನ್ನು ಅಂದಾಜಿಸಿದರೆ ಒಟ್ಟು 100 ಕೋಟಿ ಆಗಬಹುದು ಎಂದು ಒಬ್ಬ ಅಧಿಕಾರಿ ಹೇಳಿದ್ದರು.

ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ

ಆದರೆ, ಟಾಪ್ ಎಕ್ಸಿಕ್ಯೂಟಿವ್ಗಳ ಗಮನಕ್ಕೆ ಕಳೆದ 3 ವರ್ಷಗಳಿಂದ ಈ ಘಟನೆ ನಡೆಯುತ್ತಿದ್ದರೂ ಹೇಗೆ ಬಾರದೇ ಹೋಯಿತು ಎಂಬುದೂ ಸೋಜಿಗ. ಇಂಥ ಲಂಚ ಘಟನೆಗಳನ್ನು ಸರ್ಕಾರಿ

ಉದ್ಯೋಗಗಳ ನೇಮಕಾತಿಯಲ್ಲಿ ಮಾತ್ರವೇ ಕಂಡು ಅಭ್ಯಾಸವಾಗಿರುವ ಜನಸಾಮಾನ್ಯರಿಗೆ ಕಾರ್ಪೊರೇಟ್ ಕಂಪನಿಯೊಳಗಿನ ಭ್ರಷ್ಟಾಚಾರ ಕಂಡು ಆಘಾತಗೊಳ್ಳುವುದರಲ್ಲಿ ಅಚ್ಚರಿ ಇಲ್ಲ.

ರಶ್ಮಿತಾ ಅನೀಶ್

Exit mobile version