ಕೋವಿಡ್ 4ನೇ ಅಲೆಗೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಪೂರ್ವಸಿದ್ಧತೆ ನಡೆಸಿದ್ದೇವೆ : ಡಾ. ಸುದಾಕರ್!

covid 19

ಕರ್ನಾಟಕ(Karnataka) ರಾಜ್ಯದ ಆರೋಗ್ಯ ಸಚಿವರಾದ ಡಾ. ಸುಧಾಕರ್(Dr. Sudhakar) ಅವರು ಕೋವಿಡ್-19(Covid 19) 4ನೇ ಅಲೆಯ ಮುನ್ಸೂಚನೆ ಸಮೀಪಿಸುತ್ತಿರುವ ಹಿನ್ನೆಲೆ ಪೂರ್ವಸಿದ್ದತೆಗಳ ತಯಾರಿ ನಡೆಸಿದ್ದಾರೆ.

ಹೌದು, ಕಳೆದ ವರ್ಷದಲ್ಲಿ ಸೆಪ್ಟಂಬರ್ ತಿಂಗಳಲ್ಲಿ 4ನೇ ಅಲೆಯೂ ಆರಂಭಗೊಳ್ಳಲಿದೆ ಎಂದು ವರದಿಗಳು ತಿಳಿಸಿತ್ತು! ಆದ್ರೆ, 2021ರ ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್ 4ನೇ ಅಲೆಯ ಯಾವುದೇ ಲಕ್ಷಣವೂ ಕಾಣಿಸಿಕೊಳ್ಳಲಿಲ್ಲ! ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಚೀನಾದಲ್ಲಿ ವ್ಯಾಪಕವಾಗಿ ಕೋವಿಡ್ ರೂಪಾಂತರಿ ವೈರಸ್ ಹಬ್ಬುತ್ತಿರುವ ಕಾರಣ, ಚೀನಾ ಲಾಕ್‍ಡೌನ್ ಘೋಷಣೆ ಮಾಡಿರುವುದರ ವರದಿಯನ್ನು ಪ್ರಕಟಿಸಿತ್ತು.

ಈ ಮೂಲಕ ಅನ್ಯ ರಾಷ್ಟ್ರಗಳಿಗೆ ಕೋವಿಡ್ ವೈರಸ್ ಬಗ್ಗೆ ಎಚ್ಚರಿಕೆ ವಹಿಸಿ, ಮಾಸ್ಕ್, ಸ್ಯಾನಿಟೈಸರ್ ಬಳಸಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಇತ್ತೀಚಿಗಷ್ಟೇ ಜನವರಿ ತಿಂಗಳಲ್ಲಿ ಕೇರಳದ ಐಐಟಿಕೆ ಸಂಶೋಧನ ಕೇಂದ್ರ ಕೋವಿಡ್ 4ನೇ ಅಲೆಯೂ ಜೂನ್ ತಿಂಗಳಲ್ಲಿ ಹೆಚ್ಚಾಗಲಿದೆ ಎಚ್ಚರ ಎಂದು ತಿಳಿಸಿತ್ತು! ಸದ್ಯ ಈಗ ಅದೇ ಮಾದರಿಯಲ್ಲಿ ಚೀನಾ ಸೇರಿದಂತೆ ಭಾರತದ ನವದೆಹಲಿಯಲ್ಲೂ ಕೊರೊನಾ ಆರ್ಭಟ ಜೋರಾಗಿದೆ. ಸದ್ಯ ಇದನ್ನು ಕೋವಿಡ್ 4ನೇ ಅಲೆ ಎಂದು ಕರೆಯಲಾಗುತ್ತಿದೆ.

ಕೋವಿಡ್ 4ನೇ ಅಲೆ ಕುರಿತು ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿ, ” ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಅನುಷ್ಠಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಚಿಕಿತ್ಸಾ ವೆಚ್ಚ ಪಾವತಿ, ಸಂಭಾವ್ಯ ಕೊರೊನಾ 4ನೇ ಅಲೆಗೆ ಅಗತ್ಯ ಮುಂಜಾಗ್ರತಾ ಕ್ರಮ ಹಾಗೂ ಪೂರ್ವಸಿದ್ದತೆ ಸೇರಿದಂತೆ ಹಲವು ವಿಷಯಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು” ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Exit mobile version