18-44ರ ವಯಸ್ಸಿನವರಿಗೆ ಕೋವಿಡ್​ 19 ಸದ್ಯಕ್ಕೆ ಲಸಿಕೆ ಇಲ್ಲ; ಛತ್ತೀಸಗಢ ಸರ್ಕಾರದ ನಿರ್ಧಾರ

ಛತ್ತೀಸ್ ಗಢ, ಮೇ. 07: ಕೊರೋನಾ ಎರಡನೇ ಅಲೆ ತೀವ್ರವಾಗಿ ಹಬ್ಬತ್ತಿರುವುದರಿಂದ ಕೇಂದ್ರ ಸರ್ಕಾರ ೧೮ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವಂತೆ ಆದೇಶ ನೀಡಿತ್ತು. ಆದರೆ ಲಸಿಕೆ ಅಭಾವದಿಂದಾಗಿ ಈಗಾಗಲೇ ಮೊದಲನೇ ಡೋಸ್ ಪಡೆದ ೪೫ವರ್ಷದ ಮೇಲ್ಪಟ್ಟರಿಗೂ ಎರಡನೇ ಡೋಸ್ ಲಭ್ಯವಾಗುತ್ತಿಲ್ಲ. ಇದೇ ಹಿನ್ನಲೆ ಛತ್ತೀಸಗಡ ಸರ್ಕಾರ ಮೂರನೇ ಹಂತದ ಅಂದರೆ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನವರ ಲಸಿಕೆ ವಿತರಣೆ ಕಾರ್ಯವನ್ನು ತಾತ್ಕಲಿಕವಾಗಿ ಅಮಾನತು ಮಾಡಿದೆ. ಆದ್ಯತಾನುಸರವಾಗಿ ಈ ಲಸಿಕೆ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ

ರಾಜ್ಯ ಸರ್ಕಾರ ಏಪ್ರಿಲ್​ 30ರಿಂದ ಲಸಿಕೆ ನೀಡಲು ಸೂಚನೆ ನೀಡಿದ್ದು, ಮೊದಲು ಬಡವರಲ್ಲಿ ಕಡು ಬಡವರಿಗೆ ನೀಡಬೇಕು. ನಂತರ ಬಿಪಿಎಲ್​ ವರ್ಗದವರಿಗೆ ನಂತರ ಬಡತನ ರೇಖೆ ಮೇಲಿನ ಗುಂಪಿನವರಿಗೆ ಲಸಿಕೆ ನೀಡಲಾಗುವುದು ಎಂದು ಛತ್ತೀಸಗಡ ಸರ್ಕಾರ ಆದೇಶಿಸಿತ್ತು. ಮೇ 1ರಿಂದ ಮೂರನೇ ಹಂತದ ಲಸಿಕೆ ಆರಂಭವಾಗಿದ್ದು ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿತು. ಬಳಿಕ ಆದೇಶ ನೀಡಿದ ನ್ಯಾಯಲಯ ಲಸಿಕೆಗಳ ಹಂಚಿಕೆಯ ಅನುಪಾತವನ್ನು ಸಮನಾಗಿ ನಿಗದಿಪಡಿಸುವಂತೆ ತಿಳಿಸಿದೆ.

ಹೈ ಕೋರ್ಟ್​ ಆದೇಶದ ಬೆನ್ನಲ್ಲೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಮೂಲಕ ದುರ್ಬಲ ವರ್ಗದವರಿಗೆ ರೋಗ ಹರಡದಂತೆ ತಡೆಗಟ್ಟಲು ಯೋಜನೆ ರೂಪಿಸಿದೆ. ಈ ನಡುವೆ 44 ವರ್ಷ ಮೇಲ್ಪಟ್ಟವರಿಗೆ ಎಂದಿನಂತೆ ಲಸಿಕೆ ವಿತರಣಾ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version