ಗೋ ಮೂತ್ರ ಕ್ಯಾನ್ಸರ್ ಗುಣಪಡಿಸಬಲ್ಲದೇ? ಇಲ್ಲಿದೆ ಉತ್ತರ.

cow

Cow Urine : ಭಾರತದಲ್ಲಿ ಗೋ ಮೂತ್ರದ ಬಳಕೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಆಯುರ್ವೇದದ (Ayurvedha) ಪ್ರಕಾರ ಈ ಸಂಪ್ರದಾಯವನ್ನು 5000 ವರ್ಷಗಳಿಗೂ ಹೆಚ್ಚು ಕಾಲ ಅಭ್ಯಾಸ ಮಾಡಲಾಗಿದೆ.

ಹಲವಾರು ಋಷಿ ಮುನಿಗಳು ಕರುವಿನ ಮೂತ್ರವನ್ನು ಕುಡಿಯುವುದರಿಂದ ದೈವಿಕ ಪ್ರಯೋಜನಗಳಿವೆ, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಬಹಳಷ್ಟು ಕಾಯಿಲೆಗಳಿಗೆ ಮುಕ್ತಿ ಸಿಗುತ್ತದೆ ಎಂದು ಪ್ರಸ್ತಾಪಿಸಿದ್ದಾರೆ.

2014 ರಲ್ಲಿ, ಮಧುಮೇಹ, ಗೆಡ್ಡೆಗಳು, ಕ್ಷಯ, ಹೊಟ್ಟೆಯ ತೊಂದರೆಗಳು ಮತ್ತು ಕ್ಯಾನ್ಸರ್ ನಿಂದ (Cow urine cures cancer) ಬಳಲುತ್ತಿರುವ ಜನರನ್ನು ‘ಗೋ ಮೂತ್ರ’ ಗುಣಪಡಿಸಿದೆ ಎಂದು ಹೇಳಲಾಗುತ್ತಿದೆ.

https://vijayatimes.com/history-vintage-ambasador-car/


ಗೋಮೂತ್ರದಲ್ಲಿ ಸಾಕಷ್ಟು ಔಷಧೀಯ (Medicine) ಗುಣಗಳಿವೆ. ಆದಷ್ಟು ತಾಜಾ ಗೋಮೂತ್ರವನ್ನು ಸೇವಿಸುವುದು ಉತ್ತಮ, ತಾಜಾ ಗೋಮೂತ್ರ ಸಿಗದಿದ್ದರೆ ಗೋಮೂತ್ರ ಅರ್ಕಾ ಎಂದು ಆಯುರ್ವೇದ ಔಷಧಾಲಯದಲ್ಲಿ ಸಿಗುತ್ತದೆ.

ಅದನ್ನು ಉಪಯೋಗಿಸಬಹುದು. ಗೋಮೂತ್ರವು ಹಲವಾರು ರೋಗಗಳಿಗೆ ರಾಮ ಬಾಣ. ಆದರೆ ಇದನ್ನು ಬಳಸುವುದಕ್ಕೂ ಮುನ್ನ ತಜ್ಞ ಆಯುರ್ವೇದ ವೈದ್ಯರ ಸಲಹೆ ಪಡೆಯಲೇಬೇಕು.


ಇನ್ನು, ಹಸುವಿನ ಮೂತ್ರವು ಸೋಡಿಯಂ, ಪೊಟ್ಯಾಸಿಯಮ್, ಕ್ರಿಯೇಟಿನೈನ್, ರಂಜಕ ಮತ್ತು ಎಪಿಥೇಲಿಯಲ್ ಕೋಶಗಳಂತಹ ಖನಿಜಗಳಿಂದ ಸಮೃದ್ಧವಾಗಿದ್ದರೂ,

https://vijayatimes.com/facts-about-sun/

ಇವುಗಳಲ್ಲಿ ಯಾವುದೂ ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ಹೊಂದಿಲ್ಲ ಎಂದು ಗಮನಿಸಲಾಗಿದೆ. ಈ ʼಖನಿಜ-ಸಮೃದ್ಧʼ ಉತ್ಪನ್ನವು ಮಣ್ಣನ್ನು ಸಮೃದ್ಧಗೊಳಿಸಲು ಅದ್ಭುತವಾಗಿದೆ.

ಆದರೆ ಇದನ್ನು ಯಾವುದೇ ಕ್ಯಾನ್ಸರ್ ಗೆ ಪರ್ಯಾಯ ಪರಿಹಾರವಾಗಿ ಬಳಸಬಾರದು ಎನ್ನುವುದು ಕೆಲ ತಜ್ಞರ ಅಭಿಪ್ರಾಯ.
ಅದೇ ರೀತಿ,

ಹಸುವಿನ ಮೂತ್ರದಲ್ಲಿ ಪವಾಡದ ಗುಣಗಳಿವೆ ಎಂಬ ನಂಬಿಕೆಗೆ ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳ ತಂಡವು 2018 ರಲ್ಲಿ ಹಸುವಿನ ಮೂತ್ರವನ್ನು ಬಳಸಿ ಬಾಟಲಿಯಲ್ಲಿ ಸಂಗ್ರಹಿಸಿದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಯಿತು.

ಆದರೆ ಈ ಸಂಶೋಧನೆಯನ್ನು ಯಾವುದೇ ವೈಜ್ಞಾನಿಕ ಪುರಾವೆಗಳು ಎಂದಿಗೂ ಬೆಂಬಲಿಸಲಿಲ್ಲ. ಹಸುವಿನ ಮೂತ್ರವು ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂಬ ಪರಿಕಲ್ಪನೆಗೆ ಇನ್ನೂ ವೈಜ್ಞಾನಿಕ ಬೆಂಬಲ ಸಿಕ್ಕಿಲ್ಲ.

ಪವಿತ್ರ

Exit mobile version