ದುರ್ಗಾ ಪೂಜೆ, ದಸರಾ ಶುಭಾಶಯ ಕೋರಿದ ಮೂವರು ಮುಸ್ಲಿಂ ಕ್ರಿಕೆಟಿಗರಿಗೆ ಕೊಲೆ ಬೆದರಿಕೆ!

shami

New Delhi : ಹಿಂದೂಗಳ ಧಾರ್ಮಿಕ ಹಬ್ಬಗಳಾದ ದಸರಾ (Dasara) ಮತ್ತು ದುರ್ಗಾಪೂಜೆಗೆ ಶುಭಕೋರಿದ ಮೂವರು ಮುಸ್ಲಿಂ ಕ್ರಿಕೆಟಿಗರಿಗೆ ಕೊಲೆ ಬೆದರಿಕೆ (Cricketer Shami Gets Threat Call) ಹಾಕಲಾಗಿದೆ.

ಅದೇ ರೀತಿ ಅವರ ವಿರುದ್ದ ಫತ್ವಾವನ್ನು ಹೊರಡಿಸುವ ಬೆದರಿಕೆಯನ್ನು ಹಾಕಲಾಗಿದೆ ಎಂದು ವರದಿಯಾಗಿದೆ.

Mohammud Shami

ಭಾರತ ಕ್ರಿಕೆಟ್‌ (Indian Cricket) ತಂಡದ ವೇಗಿ ಮೊಹಮ್ಮದ್ ಶಮಿ (Mohammud Shami), ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮತ್ತು ಲಿಟನ್ ದಾಸ್ ದುರ್ಗಾಪೂಜೆ ಮತ್ತು ದಸರಾ ಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದರು.

ಅವರ ಈ ನಡೆ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸಿದೆ.

ಇದನ್ನೂ ಓದಿ : https://vijayatimes.com/notice-to-ola-uber-taxi/

ಸಾಮಾಜಿಕ ಜಾಲತಾಣಗಳ ಮೂಲಕವೇ ಕೆಲವರು ಮೊಹಮ್ಮದ್‌ ಶಮಿ ಅವರಿಗೆ ಕೊಲೆ ಬೆದರಿಕೆ ಹಾಕಿದರೆ (Cricketer Shami Gets Threat Call),

ಮತ್ತೆ ಕೆಲವರು ಶಮಿ ವಿರುದ್ದ ಫತ್ವಾ ಹೊರಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್‌ ಶಮಿ ತಮ್ಮ ಟ್ವೀಟರ್‌ (Twitter) ಖಾತೆಯ ಮೂಲಕ,

“ಪ್ರಭು ಶ್ರೀರಾಮ ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತುಂಬಲಿ ಎಂದು ನಾನು ಪ್ರಾರ್ಥಿಸುತ್ತೇನೆ.

Shakib Al Hasan

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಶುಭಾಶಯಗಳು” ಎಂದು ಶುಭ ಕೋರಿದ್ದರು. ಈ ಟ್ವೀಟ್ ಪೋಸ್ಟರ್ಗೆ ಅನೇಕರು ಬೆದರಿಕೆ ಹಾಕಿದ್ದಾರೆ.

https://youtu.be/7_IxcBoPL2g

ಆದರೆ ಮೊಹಮ್ಮದ್ ಶಮಿ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿಲ್ಲ. ಇನ್ನು ಬಾಂಗ್ಲಾದೇಶದ ಕ್ರಿಕೆಟ್‌ ಆಟಗಾರ ಶಕೀಬ್ ಅಲ್ ಹಸನ್ (Shakib Al Hasan) ಕೋಲ್ಕತ್ತಾದಲ್ಲಿ ಕಾಳಿ ಪೂಜೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : https://vijayatimes.com/yogi-gives-deadline-to-officers/

ಈ ವಿಡಿಯೋ ಎಲ್ಲೆಡೆ ವೈರಲ್‌(Viral) ಆಗುತ್ತಿದ್ದಂತೆ ಅವರನ್ನು ಕೊಲ್ಲುವುದಾಗಿ ಅನೇಕರು ಬೆದರಿಕೆ ಹಾಕಿದ್ದರು. ಈ ಬೆದರಿಕೆಯ ನಂತರ, ಶಕೀಬ್ ಕ್ಷಮೆಯಾಚಿಸಿದರು.

ಅದೇ ರೀತಿ ಇನ್ನೋರ್ವ ಬಾಂಗ್ಲಾದೇಶದ ಕ್ರಿಕೆಟ್‌ ಆಟಗಾರನಾದ ಲಿಟನ್ ದಾಸ್ 2020ರಲ್ಲಿ ದುರ್ಗಾ ಪೂಜೆಗೆ ಅಭಿನಂದನೆ ಸಲ್ಲಿಸಿದ್ದಕ್ಕಾಗಿ ಬೆದರಿಕೆ ಹಾಕಲಾಗಿತ್ತು. ಇದೀಗ ನವರಾತ್ರಿಯ ಪೋಸ್ಟ್ ಅನ್ನು ಹಾಕಿದ್ದಕ್ಕಾಗಿ ಲಿಟನ್ ದಾಸ್ಗೆ ಮತ್ತೆ ಬೆದರಿಕೆ ಹಾಕಲಾಗಿದೆ.
Exit mobile version